
International
oi-Malathesha M
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಕಾರ್ಯಾಚರಣೆ ತೀವ್ರಗೊಳಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ತೈಲ ಸರಬರಾಜು ನಿಂತು ಹೋದ ಹಿನ್ನೆಲೆ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ಅದರಲ್ಲೂ ಇರಾನ್ ಈಗ ಅಮೆರಿಕದ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿರುವ ದೇಶಗಳಿಗೆ ಬೇಕು ಅಂತಲೇ ಸಮಸ್ಯೆ ಮಾಡುತ್ತಿದ್ದು, ಭಾರತಕ್ಕೆ ಕೂಡ ಸಮಸ್ಯೆ ಮಾಡ್ತಾ ಇದೆ. ಭಾರತದ ತೈಲ ಹಡಗುಗಳು ಕೂಡ ಇರಾನ್ ಸೇನೆಯ ಟಾರ್ಗೆಟ್ ಆಗಿದ್ದು, ಇರಾನ್ ಸೇನೆಯ ಕಡೆಯಿಂದ ದಾಳಿ ಎದುರಿಸಿದ ಆರೋಪ ಕೂಡ ಕೇಳಿಬಂದಿದೆ. ಇಂತಹ ಸಮಯದಲ್ಲೇ ಚೀನಾ ಮಾತ್ರ ಹೊಸ ಆಟ ಶುರು ಮಾಡಿದ್ದು, ತೈಲ ತರಿಸಿಕೊಳ್ಳಲು ಭರ್ಜರಿ ಪ್ಲಾನ್ ಮಾಡಿದೆ.
ಹಾರ್ಮುಜ್ ಜಲಸಂಧಿ ಮೂಲಕವೇ ಅರಬ್ ದೇಶಗಳು ಬದುಕುತ್ತಿವೆ ಎಂದು ಹೇಳಿದರೆ ತಪ್ಪು ಆಗಲ್ಲ. ಏಕೆಂದರೆ ಮಧ್ಯಪ್ರಾಚ್ಯ ದೇಶಗಳ ಪಾಲಿಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯವಾದ ಜಲಮಾರ್ಗ. ಇರಾನ್ ಯುದ್ಧ ಶುರುವಾದ ನಂತರ ಆರ್ಥಿಕವಾಗಿ ಮಧ್ಯಪ್ರಾಚ್ಯ ಬೀದಿಗೆ ಬೀಳುವ ಎಲ್ಲಾ ಲಕ್ಷಣಗಳು ಈಗ ಕಾಣುತ್ತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಹೀಗಾಗಿ ಒದ್ದಾಟ ಶುರುವಾಗಿ ಏನು ಮಾಡುವುದು? ಎಂದು ಅರಬ್ ದೇಶಗಳು ತಲೆ ಮೇಲೆ ಕೈಹೊತ್ತು ಕೂತಿವೆ. ಇಂತಹ ಸಮಯದಲ್ಲಿ ಚೀನಾ ಮಾತ್ರ ತನ್ನ ಸ್ವಾರ್ಥಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಮುಂದೆ ನುಗ್ಗಿದೆ. ಇರಾನ್ ಜೊತೆಗಿನ ಸಂಬಂಧವನ್ನ ಈ ಸಮಯದಲ್ಲಿ ಬಳಸಿಕೊಂಡು ಹೊಸ ಆಟ ಶುರು ಮಾಡಿದೆ ಚೀನಾ.

ಚೀನಾ ಹಡಗುಗಳಿಗೆ ವಿಶೇಷ ವ್ಯವಸ್ಥೆ
ಹಾರ್ಮುಜ್ ಜಲಸಂಧಿ ಇರಾನ್ ಗಡಿ ಭಾಗದಲ್ಲಿ ಕೂಡ ಹಾದು ಹೋಗುವ ಕಾರಣಕ್ಕೆ, ಇರಾನ್ ಸೇನೆ ಈಗ ಘೋರವಾಗಿ ದಾಳಿ ಮಾಡುತ್ತಾ ಕಚ್ಚಾತೈಲ ಸರಬರಾಜು ಬಂದ್ ಮಾಡಿದೆ. ಇದರಿಂದ ಸೇಡಿಗೆ ಸೇಡು ಎಂದು ತೊಡೆತಟ್ಟಿ ನಿಂತು ಅಮೆರಿಕ ಎದುರು ಸೆಡ್ಡು ಹೊಡೆದಿದೆ. ಆದರೆ ಇರಾನ್ & ಚೀನಾ ನಡುವೆ ಈಗಲೂ ಉತ್ತಮ ಬಾಂಧವ್ಯ ಇದ್ದು, ಇದೇ ಸಂಬಂಧ ಮುಂದೆ ಇಟ್ಟುಕೊಂಡು ದಿಢೀರ್ ಅಂತಾ ತನ್ನ ತೈಲ ಹಡಗುಗಳನ್ನು ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವಂತೆ ಮಾಡಲು ಯಶಸ್ವಿ ಆಗಿದೆ ಚೀನಾ. ಇರಾನ್ ಈಗ ಹಾರ್ಮುಜ್ ಜಲಸಂಧಿ ಮೂಲಕ ಚೀನಾ ಹಡಗುಗಳಿಗೆ ಮಾತ್ರ ಸಂಚಾರ ವ್ಯವಸ್ಥೆ ಮಾಡಿಕೊಟ್ಟಿದೆ. ಇದು ಜಗತ್ತಿನ ಇತರ ರಾಷ್ಟ್ರಗಳಿಗೆ ಇರಾನ್ ಮೇಲೆ ಮತ್ತಷ್ಟು ಕೋಪವನ್ನ ಉಂಟುಮಾಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-this-is-why-china-ships-are-now-getting-support-from-iran-445953.html. xn--babytilbehr-pgb.com does not claim ownership of this content. All rights remain with the original publisher.
