ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ | Niranjan Sudhindra Reacts to Marriage Rumours With Shreyanka Patil Link to Upendra Family Goes Viral

Entertainment

oi-Manohara M

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ, ಉದಯೋನ್ಮುಖ ನಟ ನಿರಂಜನ್ ಸುಧೀಂದ್ರ ಹಾಗೂ ಟೀಂ ಇಂಡಿಯಾದ ಮಹಿಳಾ ಸ್ಟಾರ್ ಕ್ರಿಕೆಟರ್, ಆರ್‌ಸಿಬಿ ತಂಡದ ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹಬ್ಬಿದೆ. ಇದರ ಬೆನ್ನಲ್ಲೇ ಈ ಸುದ್ದಿಗೆ ರೆಕ್ಕೆಪುಕ್ಕ ಬಂದಿದ್ದು, ಮದುವೆ ಯಾವಾಗ ಎನ್ನುವ ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳಲು ಶುರುಮಾಡಿದ್ದಾರೆ. ಈ ಬಗ್ಗೆ ನಟ ನಿರಂಜನ್ ಸುಧೀಂದ್ರ ಕೊನೆಗೂ ಮೌನ ಮುರಿದಿದ್ದಾರೆ.

ಏನಿದು ವೈರಲ್‌ ಸುದ್ದಿ?

ಸಿನಿಮಾ ಮತ್ತು ಕ್ರಿಕೆಟ್ ಲೋಕದ ಇಬ್ಬರು ತಾರೆಯರನ್ನು ಜೋಡಿಸಿ ಟ್ರೋಲ್ ಪೇಜ್‌ವೊಂದು ವಿಚಿತ್ರ ಪೋಸ್ಟ್ ಹಾಕಿದೆ. “ಶ್ರೇಯಾಂಕ ಪಾಟೀಲ್ ಶೀಘ್ರದಲ್ಲೇ ಉಪೇಂದ್ರ ಕುಟುಂಬದ ಸೊಸೆಯಾಗಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಈಗ ನಿರಂಜನ್ ಸುಧೀಂದ್ರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಸ್ವತಃ ಉಪೇಂದ್ರ ಅವರೇ ಈ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ” ಎಂಬರ್ಥದ ಸುಳ್ಳು ವರದಿಯನ್ನು ಹರಿಬಿಡಲಾಗಿತ್ತು.

Niranjan Sudhindra

ಶಾಕ್ ಆದ ನಟ ನಿರಂಜನ್ ಸುಧೀಂದ್ರ

ಸಿನಿಮಾ ರಂಗದಲ್ಲಿ ‘ಸೆಕೆಂಡ್ ಹಾಫ್’, ‘ನಮ್ಮ ಹುಡುಗರು’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರಂಜನ್ ಕೈಯಲ್ಲಿ ಸದ್ಯ ಸಾಲು ಸಾಲು ಚಿತ್ರಗಳಿವೆ. ಇತ್ತ ಶ್ರೇಯಾಂಕ ಪಾಟೀಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸ್ಟಾರ್ ಆಟಗಾರ್ತಿ. ಈ ಇಬ್ಬರಿಗೂ ಸಂಬಂಧವೇ ಇಲ್ಲದಿದ್ದರೂ ಹಬ್ಬಿದ ಈ ಸುದ್ದಿ ನಿರಂಜನ್ ಅವರ ಗಮನಕ್ಕೆ ಬಂದಿದೆ. ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿರುವ ನಟ, ಅದೇ ಪೋಸ್ಟ್ ಕೆಳಗೆ ನೇರವಾಗಿಯೇ ಕಾಮೆಂಟ್ ಮಾಡಿದ್ದಾರೆ.

ನಿರಂಜನ್ ಖಡಕ್ ಉತ್ತರ

ಸುಳ್ಳು ಸುದ್ದಿ ಹಬ್ಬಿಸಿದ ಅಡ್ಮಿನ್‌ಗೆ ಟಾಂಗ್ ನೀಡಿದ ನಿರಂಜನ್, “ಗುರು, ಇನ್ವಿಟೇಶನ್ ಬಂದ್ರೆ ನಮಗೂ ಒಂದು ಕಳಿಸಿಕೊಡು! ಮೊದಲು ಫ್ಯಾಕ್ಟ್ ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡಿ ಆಮೇಲೆ ಪೋಸ್ಟ್ ಮಾಡಿ. ಈ ರೀತಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ” ಎಂದು ಬರೆಯುವ ಮೂಲಕ ಮದುವೆ ಸುದ್ದಿಗೆ ಇತಿಶ್ರೀ ಹಾಡಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಪೇಜ್ ಹಾಕಿದ ಸುದ್ದಿಯನ್ನು ಸತ್ಯ ಎಂದು ನಂಬಿ ಸಾವಿರಾರು ಮಂದಿ ಶೇರ್ ಮಾಡುತ್ತಾರೆ. ಈ ಘಟನೆಯನ್ನು ನೋಡುತ್ತಿದ್ದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಅಂದೇ ಹೇಳಿದ ಮಾತು ನೆನಪಾಗುತ್ತದೆ. ಇಲ್ಲಿ ಕಂಡಿದ್ದೆಲ್ಲಾ ನಿಜವಲ್ಲ, ಕೇಳಿದ್ದೆಲ್ಲಾ ಸತ್ಯವಲ್ಲ. ಪ್ರತಿಯೊಬ್ಬರೂ ತಮಗೆ ಬೇಕಾದ ಹಾಗೆ ಸತ್ಯವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಈ ಮಾತು ಇಂದಿನ ಸೋಶಿಯಲ್ ಮೀಡಿಯಾ ಸ್ಥಿತಿಗೆ ಅಕ್ಷರಶಃ ಅನ್ವಯವಾಗುತ್ತಿದೆ.

Niranjan Sudhindra

ನಿರಂಜನ್ ಮತ್ತು ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ ಕೇವಲ ಒಂದು ವದಂತಿ ಎಂಬುದು ಈಗ ಸ್ಪಷ್ಟವಾಗಿದೆ. ಅಭಿಮಾನಿಗಳು ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದಿರಬೇಕಾದ ಅನಿವಾರ್ಯತೆ ಇದೆ. ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಯಾವ ಮಟ್ಟಕ್ಕೆ ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗುತ್ತದೆ ಎಂಬುದಕ್ಕೆ ಇತ್ತೀಚಿನ ಒಂದು ಘಟನೆಯೇ ಸಾಕ್ಷಿ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/niranjan-sudhindra-reacts-to-marriage-rumours-with-shreyanka-patil-link-to-upendra-family-goes-viral-449421.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo