
India
oi-Malathesha M
ಕರಾವಳಿ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದೆ ಕಂಬಳ, ಹೀಗಿದ್ದಾಗ ಪ್ರತಿವರ್ಷ ಕೂಡ ಕರಾವಳಿಯ ಭಾಗದಲ್ಲಿ ಕಂಬಳ ಕ್ರೀಡೆ ಆಯೋಜನೆ ಮಾಡಿ ಸಂಭ್ರಮಿಸುತ್ತಾರೆ ಜನ. ಆದರೂ, ಪದೇ ಪದೇ ಇದೇ ವಿಚಾರವಾಗಿ ಕಿರಿಕ್ ಶುರುವಾಗುತ್ತಾ ಇತ್ತು, ಪ್ರಮುಖವಾಗಿ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಕೂಡ ಅರ್ಜಿ ಸಲ್ಲಿಕೆ ಆಗುತ್ತಿತ್ತು. ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್‌ಗೆ ಕೂಡ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅಲ್ಲದೆ ಕಂಬಳ ಕ್ರೀಡೆ ಆಯೋಜನೆಗೆ ಷರತ್ತು ವಿಧಿಸಲು ಅರ್ಜಿ ಮೂಲಕ ಮನವಿಯನ್ನ ಮಾಡಲಾಗಿತ್ತು, ಆದರೆ ಈಗ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಕಂಬಳ ಕ್ರೀಡೆ ಆಯೋಜನೆ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದೆ.
ಅಂದಹಾಗೆ ಸುಪ್ರೀಂಕೋರ್ಟ್, ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂದರೆ ಪೀಟಾ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ. ಅರ್ಜಿಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಲಾಗಿತ್ತು. ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಕಂಬಳ & ಎತ್ತುಗಳ ಓಟ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿ ಕರಾವಳಿ ಜಿಲ್ಲೆಗಳಿಗಷ್ಟೇ ಸೀಮಿತಗೊಳಿಸಲು ಸಾಧ್ಯ ಇಲ್ಲ, ಎಂದು ಆದೇಶ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು, ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ & ಸಂದೀಪ್ ಮೆಹ್ತಾ ಅವರಿದ್ದ ಪೀಠ ವಿಚಾರಣೆ ನಡೆಸಿ ಮಹತ್ವದ ಆದೇಶವನ್ನು ನೀಡಿದ್ದಾರೆ.

ಕಂಬಳ ಕ್ರೀಡೆ ಆಯೋಜನೆಗೆ ಅಡ್ಡಿ ಇಲ್ಲ
ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಕಂಬಳ ಕ್ರೀಡೆ ಆಯೋಜನೆ ವಿಚಾರ ಪ್ರಸ್ತಾಪ ಮಾಡಿದ್ದ ಪೀಟಾ ಪರ ವಕೀಲರು, ಕಂಬಳ ಕ್ರೀಡೆ ಬೆಂಗಳೂರಿನ ಪರಂಪರೆ & ಸಂಸ್ಕೃತಿ ಭಾಗವಲ್ಲ ಎಂದು ವಾದಿಸಿದ್ದರು. ಇನ್ನು ವಿಚಾರಣೆ ವೇಳೆ ಈ ಬಗ್ಗೆ ಮಾತನಾಡಿರುವ ನ್ಯಾಯಮೂರ್ತಿಗಳಾದ ಮೆಹ್ತಾ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಕೃತಿ ಪ್ರದರ್ಶಿಸಲು ಅವರು ಬಯಸುತ್ತಾರೆ, ಅದರಲ್ಲಿ ತಪ್ಪೇನಿದೆ? ರಾಜ್ಯದ ಇತರ ಭಾಗಗಳಲ್ಲಿನ ಜನರು ಈ ಸಂಸ್ಕೃತಿಯನ್ನ ತಿಳಿದುಕೊಳ್ಳಲು ಅವಕಾಶ ಸಿಗಬೇಕು. ಹೀಗಾಗಿ ಯಾವ ಕಾರಣಕ್ಕೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಸಬೇಕು? ಎಂದು ನ್ಯಾಯಮೂರ್ತಿ ಮೆಹ್ತಾ ಅವರು ಪ್ರಶ್ನೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಮೂಲಕ, ಕಂಬಳ ವಿಚಾರವಾಗಿ ದೊಡ್ಡ ಅದೇಶ ಹೊರ ಬಿದ್ದಂತಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/kambala-race-organizing-and-this-is-what-the-supreme-court-is-said-to-the-peta-in-new-order-446703.html. xn--babytilbehr-pgb.com does not claim ownership of this content. All rights remain with the original publisher.
