ಕರ್ನಾಟಕದಲ್ಲಿ ಯುಗಾದಿ ಪಾಡ್ಯ, ವರ್ಷತೊಡಕು ಯಾವತ್ತು? ಮಾರ್ಚ್‌ -19 ಅಥವಾ 20: ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ | Ugadi 2026 Date in Karnataka: March 19 or 20? Padya Timing, Rituals & Significance Explained

Karnataka

oi-Shiddalingesh S

ಬೆಂಗಳೂರು: ಮಾರ್ಚ್ 19 ರಂದು ಕರ್ನಾಟಕದಲ್ಲಿ ಹೊಸ ವರ್ಷದ ಹಬ್ಬವಾದ ಯುಗಾದಿಯನ್ನು ರಾಜ್ಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಚಾಂದ್ರಸೌರ ಪಂಚಾಂಗದ ಪ್ರಕಾರ ಹೊಸ ಸಂವತ್ಸರ ಆರಂಭಿಸುವ ಈ ಹಬ್ಬಕ್ಕೆ ಸಿದ್ದತೆಗಳು ಜೋರಾಗಿವೆ.

ಪಂಚಾಂಗದ ಪ್ರಕಾರ ಯುಗಾದಿ ಸಮಯ

ಯುಗಾದಿ ದಿನದ ತಿಥಿ ವಿವರಗಳು ಹೀಗಿವೆ:
ಪಾಡ್ಯ ಆರಂಭ: ಮಾರ್ಚ್ 19, 2026 – ಬೆಳಿಗ್ಗೆ 06:52,
ಪಾಡ್ಯ ಮುಕ್ತಾಯ: ಮಾರ್ಚ್ 20, 2026 – ಬೆಳಿಗ್ಗೆ 04:52

Ugadi 2026 Date in Karnataka

ಈ ಸಮಯದಲ್ಲಿ ಯುಗಾದಿ ಪೂಜೆ, ಪಂಚಾಂಗದ ಮತ್ತು ಹಬ್ಬವನ್ನು ಆಚರಿಸಲಾಗುತ್ತದೆ.

ಯುಗಾದಿ ಮಹತ್ವ

ಕರ್ನಾಟಕದಲ್ಲಿ ಯುಗಾದಿ ಹಬ್ಬವು ಅತ್ಯಂತ ಮಹತ್ವಾದಾಗಿದೆ, ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಪದಗಳಿಂದ ಬಂದಿದೆ. ಅಂದರೆ ಹೊಸ ಯುಗ ಆರಂಭ ಎಂದರ್ಥ. ಈ ಹಬ್ಬವನ್ನು ಕಹಿ ಮತ್ತು ಸಿಹಿ ಅಂದರೆ ಬೇವು ಬೆಲ್ಲದ ಹಾಗೆ ನಮ್ಮ ಜೀವನದಲ್ಲಿ ಬರುವ ಕಷ್ಟ ಮತ್ತು ಸುಖವನ್ನು ಸಮನಾಗಿ ಸ್ವೀಕರಿಸುವ ಪಾಠವನ್ನು ಕಲಿಸುತ್ತದೆ.

ಕನ್ನಡದ ಹೊಸ ವರ್ಷದ ಮೊದಲ ದಿನ.
ಹೊಸ ಸಂವತ್ಸರ ಆರಂಭ.
60 ವರ್ಷಗಳ ಸಂವತ್ಸರ ಚಕ್ರದಲ್ಲಿನ ಹೊಸ ವರ್ಷ ಆರಂಭ.
ಈ ದಿನ ಜನರು ಹೊಸ ಗುರಿಗಳನ್ನು ಮತ್ತು ಹೊಸ ಸಂಕಲ್ಪಗಳನ್ನು ಮಾಡುತ್ತಾರೆ.

ಕರ್ನಾಟಕದಲ್ಲಿ ಯುಗಾದಿ ಹಬ್ಬದ ಆಚರಣೆ

ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನು ಬಹಳ ಸಂಪ್ರದಾಯಬದ್ದಾವಾಗಿ ಆಚರಿಸಲಾಗುತ್ತದೆ.
ಮನೆಯ ಮುಂದೆ ರಂಗೋಲಿಯಿಂದ ಅಲಂಕಾರ.
ಬಾಗಿಲುಗಳಿಗೆ ಹೊವು ಮತ್ತು ಮಾವಿನ ಎಲೆಯ ತೋರಣ ಕಟ್ಟುವುದು.
ಬೆಳಿಗ್ಗೆ ಎಣ್ಣೆ ಸ್ನಾನ.
ದೇವರ ಪೊಜೆ ಮತ್ತು ಪಂಚಾಂಗ ಕೆಳುವುದು.
ಹೊಸ ಬಟ್ಟೆಗಳನ್ನು ಧರಿಸುವುದು.
ಕುಟುಂಬದ ಎಲ್ಲಾ ಸದಸ್ಯರು ಸೇರಿ ದೇವಾಲಯಗಳಿಗೆ ಭೆಟಿ ನೀಡಿ ದೇವರ ದರ್ಶನ ಪಡೆಯುವುದು.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಆಚರಣೆಗಳು:

ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ವೈಭವಯುತ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಮನೆಗಳ ಮುಂದೆ ರಂಗೋಲಿ ಹಾಕಿ, ಬಾಗಿಲುಗಳಿಗೆ ಮಾವಿನ ಎಲೆಗಳ ತೋರಣಗಳನ್ನು ಕಟ್ಟಲಾಗುತ್ತದೆ. ಕರ್ನಾಟಕದ ಯುಗಾದಿಯ ದಿನವೇ ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಹಾಗೂ ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಬೇವು ಬೆಲ್ಲದ ಮಹತ್ವ:

ಕರ್ನಾಟಕದಲ್ಲಿ ಯುಗಾದಿ ಹಬ್ಬವು ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಬೇವು ಮತ್ತು ಬೆಲ್ಲ ಸಮನಾಗಿ ಬೆರೆಸಿ ಅದನ್ನು ಸೇವಿಸುವುದೇ ಯುಗಾದಿ ಹಬ್ಬದ ವಿಶೇಷ ಆಚರಣೆಯಾಗಿದೆ.

ಬೇವಿನ ಕಹಿ- ಜೀವನದ ಕಷ್ಟ
ಬೆಲ್ಲದ ಸಿಹಿ- ಜೀವನದ ಸಂತೋಷ
ಜೀವನದಲ್ಲಿ ಸುಖ-ದು:ಖಗಳನ್ನು ಸಮಾನವಾಗಿ ಸ್ವೀಕರಿಸುವುದರ ಸಂಕೇತವಾಗಿದೆ.

ಯುಗಾದಿ ಹಬ್ಬದ ವಿಶೇಷ ಆಹಾರಗಳು:

ಯುಗಾದಿ ದಿನ ಮನೆಗಳಲ್ಲಿ ವಿಶೇಷ ಊಟ ತಯಾರಿಸಲಾಗುತ್ತದೆ.
ಬೇವು-ಬೆಲ್ಲ
ಹೋಳಿಗೆ
ಪಾಯಸ
ವಿವಿಧ ಪಾಕವಿಧಾನಗಳನ್ನು ಮಾಡಲಾಗುತ್ತದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:

ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜೆಗಳು, ಹೋಮಗಳು ಮತ್ತು ಪಂಚಾಂಗ ಕೇಳುವ ಕಾರ್ಯಕ್ರಮಗಳು ಆಯೋಜಿಸಲಾಗುತ್ತವೆ. ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲು ಸಿದ್ಧರಾಗಿದ್ದಾರೆ.

ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಆಚರಣೆ ಅಷ್ಟೆ ಅಲ್ಲ ಇದು ಜೀವನದ ಪಾಠವನ್ನು ಕಲಿಸುವ ಒಂದು ಸಂಸ್ಕೃತಿ. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಮುಂದಕ್ಕೆ ಸಾಗುವ ಸಂದೇಶವನ್ನು ಸಾರುತ್ತದೆ.

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ugadi-2026-date-in-karnataka-march-19-or-20-padya-timing-rituals-significance-explained-447389.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo