
Entertainment
oi-Manohara M
ಚಿತ್ರರಂಗದಲ್ಲಿ ಸದಾ ವಿವಾದಾತ್ಮಕ ಅಭಿಪ್ರಾಯಗಳಿಂದಲೇ ಸುದ್ದಿಯಾಗುವ ಟಾಲಿವುಡ್ ನಿರ್ದೇಶಕ ರಾಮ್ಗೋಪಾಲ್ ವರ್ಮಾ (ಆರ್ಜಿವಿ) ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಟಾಕ್ಸಿಕ್ ಹಾಗೂ ಧುರಂಧರ್-2 ಸಿನಿಮಾಗಳನ್ನು ಉಲ್ಲೇಖಿಸಿ ಹಂಚಿಕೊಂಡಿರುವ ಎಕ್ಸ್ ಪೋಸ್ಟ್ ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಧುರಂಧರ್ ಸಿನಿಮಾ ಬಗ್ಗೆ ಹೊಗಳುತ್ತಾ ಕನ್ನಡದ ಯಶ್ ನಟನೆಯ ಕೆಜಿಎಫ್-2 ಹಾಗೂ ಟಾಕ್ಸಿಕ್ ಸಿನಿಮಾಗಳ ಬಗ್ಗೆ ಟೀಕಿಸಿದ್ದಾರೆ.
ಮೂರ್ಖತನ ಗುರಿಯಾಗಿರಿಸಿಕೊಂಡ ಕೆಜಿಎಫ್-2
ತಮ್ಮ ಪೋಸ್ಟ್ನಲ್ಲಿ ಅವರು ಧುರಂಧರ್-ಟಾಕ್ಸಿಕ್ಗೆ “ಧುರಾಕ್ಸಿಕ್ ಪಾರ್ಕ್” ಎಂದು ಶೀರ್ಷಿಕೆ ನೀಡಿರುವ ಆರ್ಜಿವಿ, ಇದು ಉತ್ತರ-ದಕ್ಷಿಣ ಸಿನಿಮಾಗಳ ನಡುವಿನ ಹೋರಾಟವಲ್ಲ, ಬದಲಾಗಿ ಎರಡು ವಿಭಿನ್ನ ಸಿನಿಮಾ ಸಂಸ್ಕೃತಿಗಳ ನಡುವಿನ ಘರ್ಷಣೆ ಎಂದು ಹೇಳಿದ್ದಾರೆ. ಒಂದೆಡೆ ಪ್ರೇಕ್ಷಕರ ಬುದ್ಧಿಮಟ್ಟವನ್ನು ಗೌರವಿಸುವ ಸಿನಿಮಾ, ಮತ್ತೊಂದೆಡೆ ಪ್ರೇಕ್ಷಕರನ್ನು ಸರಳ ಮನರಂಜನೆಗಾಗಿ ಮಾತ್ರ ನೋಡಿಕೊಳ್ಳುವ ಸಿನಿಮಾ ಎಂಬಂತೆ ಅವರು ಹೋಲಿಕೆ ಮಾಡಿದ್ದಾರೆ.

ಇವೆರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧರ್ ಪ್ರೇಕ್ಷಕರ ಬುದ್ಧಿಮಟ್ಟವನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಅವರ ಮೂರ್ಖತನವನ್ನು ಊಹಿಸುತ್ತದೆ. ಕೆಜಿಎಫ್ 2 ಒಂದು ಲೋಕಲ್ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿ ಮೂರ್ಖತನವನ್ನು ಗುರಿಯಾಗಿರಿಸಿಕೊಂಡಿತ್ತು ಮತ್ತು ಧುರಂಧರ್ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಗುರಿಯಾಗಿರಿಸಿಕೊಂಡಿದ್ದರು.
ವರ್ಮಾ ತಮ್ಮ ಟ್ವೀಟ್ನಲ್ಲಿ ಧುರಂಧರ್ ಮತ್ತು ಅದರ ಮುಂದುವರಿದ ಭಾಗ ಧುರಂಧರ್-2 ಒಂದೆಡೆ, ಮತ್ತೊಂದೆಡೆ Toxic ಸಿನಿಮಾವನ್ನು ಉಲ್ಲೇಖಿಸಿದ್ದಾರೆ. ‘ಡೇವಿಡ್ ಮತ್ತು ಗೋಲಿಯತ್’ ಎಂಬ ರೂಪಕದ ಮೂಲಕ ದೊಡ್ಡ ಬಜೆಟ್ ಮತ್ತು ಭಾರಿ ವಸೂಲಿ ಮಾಡಿದ ಚಿತ್ರಗಳ ನಡುವಿನ ಬದಲಾವಣೆಯನ್ನು ಅವರು ವಿವರಿಸಿದ್ದಾರೆ. ಅವರ ಪ್ರಕಾರ, “ಮಾಸಸ್” ಎಂದು ಕರೆಯಲ್ಪಡುವ ಪ್ರೇಕ್ಷಕರನ್ನು ಸರಳ ಮನರಂಜನೆಗೆ ಮಾತ್ರ ಸೀಮಿತಗೊಳಿಸುವ ಪ್ರವೃತ್ತಿಯ ವಿರುದ್ಧ, ಕಥಾ ಗಂಭೀರತೆ ಮತ್ತು ವಾಸ್ತವಿಕತೆಯನ್ನು ಮುಂದಿಟ್ಟುಕೊಳ್ಳುವ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದ್ದಾರೆ. ಹಿಂದಿನ ಉದಾಹರಣೆಯಾಗಿ ಕೆಜಿಎಫ್-2 ಚಿತ್ರವನ್ನೂ ಅವರು ಉಲ್ಲೇಖಿಸಿ, ದೊಡ್ಡ ಮಟ್ಟದ ಸಂಗ್ರಹಗಳ ಬಗ್ಗೆ ಮಾತನಾಡಿದ್ದಾರೆ.
ಧುರಂಧರ್ ಬಗ್ಗೆ ಮೆಚ್ಚುಗೆ
ಧುರಂಧರ್ ಎಂಬ 130 ಕೋಟಿ ವೆಚ್ಚದ ಡೇವಿಡ್ ಚಿತ್ರ (ಎರಡೂ ಆವೃತ್ತಿಗಳು ಸೇರಿ ಸುಮಾರು 260 ಕೋಟಿ ವೆಚ್ಚವಾಗಿದೆ) ಸುಮಾರು 1500 ಕೋಟಿ ಗಳಿಸಿತು. ಇದು ಮಸಾಲ ವ್ಯಾಪಾರಿಗಳು ಊಹಿಸಿದ್ದಕ್ಕಿಂತ ‘ಮಾಸಸ್’ ಎಂದು ಕರೆಯಲ್ಪಡುವವರು ವಾಸ್ತವವಾಗಿ ಹೆಚ್ಚು ಬುದ್ಧಿವಂತರು ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಇನ್ನು ನಿರ್ದೇಶಕ ಆದಿತ್ಯ ಧರ್ ಕುರಿತು ಮಾತನಾಡಿರುವ ವರ್ಮಾ, ಪ್ರೇಕ್ಷಕರನ್ನು ‘ಬುದ್ಧಿವಂತರೇ’ ಎಂದು ನಂಬಿ ಸಿನಿಮಾ ಮಾಡಿದರೆ ಅವರು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿನ್ನಲೆ ಸಂಗೀತ, ಅತಿರಂಜಿತ ಸಾಹಸ ದೃಶ್ಯಗಳು, ಭಾರೀ ಬಜೆಟ್ ವಿರುದ್ಧ ಮಾನವೀಯ ಕಥಾನಕ ಈ ಎಲ್ಲ ಅಂಶಗಳನ್ನು ಹೋಲಿಸಿ “ಹಣ ಸುರಿಸುವುದು” ಮತ್ತು “ಹಣವನ್ನು ಪರಿಣಾಮಕಾರಿಯಾಗಿ ಬಳಸುವುದು” ಎಂಬ ವ್ಯತ್ಯಾಸವನ್ನೂ ಅವರು ವಿವರಿಸಿದ್ದಾರೆ.
THE #Dhuroxic PARK
NO, I am not talking about TWO BIG FILMS #Dhurandhar2 and #Toxic releasing on March 19th. I am actually talking about a NEVER BEFORE SEEN or EXPERIENCED mythical archetype EXPLODING in the GRAND ARENA of INDIAN CINEMAS.
It is a BATTLE between DAVID AND GOLIATH…— Ram Gopal Varma (@RGVzoomin) February 22, 2026
ಒಬ್ಬ ವ್ಯಕ್ತಿಯನ್ನು ಅಜೇಯ ದೇವರಂತೆ ಕಾಣುವಂತೆ ಮಾಡಲು 700 ಕೋಟಿ ಖರ್ಚು ಮಾಡಲಾಗಿದೆ ಮತ್ತು ಧುರಂಧರ್ನಲ್ಲಿನ ಪ್ರತಿಯೊಂದು ಪಾತ್ರವನ್ನು ಸಮಾನವಾಗಿ ಮಾನವನನ್ನಾಗಿ ಮಾಡಲು 130 ಕೋಟಿ ಖರ್ಚು ಮಾಡಲಾಗಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬೆಳಕು ಆರಿದಾಗ, ಕೇವಲ ಎರಡು ಸಿನಿಮಾಗಳ ಬಿಡುಗಡೆಯಷ್ಟೇ ಅಲ್ಲ, ಪ್ರೇಕ್ಷಕರ ರುಚಿ ಮತ್ತು ಸಿನಿಮಾ ಸಂಸ್ಕೃತಿಯ ಭವಿಷ್ಯವೂ ಪರೀಕ್ಷೆಗೆ ಒಳಗಾಗಲಿದೆ ಎಂದು ವರ್ಮಾ ಹೇಳಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಮತ್ತು ಸಿನಿಮಾ ವಿಶ್ಲೇಷಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ram-gopal-varma-slams-yash-kgf-2-and-toxic-praises-dhurandhar-sparks-debate-in-film-industry-444759.html. xn--babytilbehr-pgb.com does not claim ownership of this content. All rights remain with the original publisher.
