
International
oi-Malathesha M
ಇರಾನ್ ಬಗ್ಗೆ ರೊಚ್ಚಿಗೆದ್ದು ಕೂತಿರುವ ಅಮೆರಿಕ ಅಧ್ಯಕ್ಷರು, ಕೂಡಲೇ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಿ ಅಂತಿದ್ದಾರೆ. ಆದರೆ ಇದಕ್ಕೆ ಇರಾನ್ ಸರ್ವಾಧಿಕಾರಿ ಖಮೇನಿ ಒಪ್ಪುತ್ತಿಲ್ಲ. ಈ ಹಿನ್ನೆಲೆ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧದ ಭೀತಿ ಹೆಚ್ಚಾಗುತ್ತಿದ್ದು, ಸೇನಾ ಕಾರ್ಯಾಚರಣೆಗೆ ಈಗಾಗಲೇ ತನ್ನ ಸೇನೆಯನ್ನ ಸಜ್ಜಾಗಿ ನಿಲ್ಲಿಸಿದೆ ಅಮೆರಿಕ. ಹೀಗಿದ್ದಾಗಲೇ ಖಮೇನಿ ವಿರುದ್ಧ ಅಮೆರಿಕ ದೊಡ್ಡ ಪ್ಲಾನ್ ಮಾಡಿರುವುದು ಪಕ್ಕಾ ಎನ್ನಲಾಗುತ್ತಿದ್ದು, ಇದರಿಂದಾಗಿ ಕೆಲವೇ ಕೆಲವು ದಿನಗಳಲ್ಲಿ ಇರಾನ್ ನೆಲದಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ ಎಂಬ ಚರ್ಚೆ ನಡೆಯುತ್ತಿದೆ. ಹಾಗಾದರೆ, ಖಮೇನಿ ವಿರುದ್ಧ ಅಮೆರಿಕ ಮಾಡಿರುವ ಆ ಪ್ಲಾನ್ ಏನು? ಬನ್ನಿ ತಿಳಿಯೋಣ.
ಖಮೇನಿ ಇರಾನ್ ದೇಶದ ಸರ್ವಾಧಿಕಾರಿ ಹಾಗೂ ಕಳೆದ ಹತ್ತಾರು ವರ್ಷಗಳಿಂದಲೂ ಇರಾನ್ ನೆಲದಲ್ಲಿ ಖಮೇನಿ ಮಾತೇ ಅಂತಿಮ ಎನ್ನುವ ಪರಿಸ್ಥಿತಿ ಇದೆ. ಯಾರೇ ಅಧ್ಯಕ್ಷರಾಗಿ ಇರಾನ್ ದೇಶದಲ್ಲಿ ಆಯ್ಕೆ ಆದರೂ ಖಮೇನಿ ಮಾತು ಕೇಳಲೇಬೇಕು, ಇಲ್ಲವಾದರೆ ಅವರ ಕಥೆ ಮುಗಿದು ಹೋಗುತ್ತದೆ ಎನ್ನುವ ಆರೋಪ ಕೂಡ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಖಮೇನಿ ಬಗ್ಗೆ ಆಕ್ರೋಶ ಹೊರ ಹಾಕುತ್ತಿವೆ. ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿಗೆ ಒಂದು ಗತಿ ಕಾಣಿಸುತ್ತೇವೆ ಎಂದು ಇರಾನ್ ಶತ್ರು ದೇಶಗಳು ಹೇಳುತ್ತಲೇ ಬಂದಿವೆ. ನೇರವಾಗಿ ಇರಾನ್ ಒಳಗೆ ನುಗ್ಗಿ ಸೇನಾ ಕಾರ್ಯಾಚರಣೆ ನಡೆಸಿ, ಖಮೇನಿಗೆ ಕೂಡ ಒಂದು ಗತಿ ಕಾಣಿಸಬೇಕು ಎಂಬ ಪ್ಲಾನ್ ನಡೆದಿತ್ತು.

ಖಮೇನಿಗಾಗಿ ಅಮೆರಿಕ & ಇಸ್ರೇಲ್ ಹುಡುಕಾಟ
ಆದರೂ ಈವರೆಗೆ ಖಮೇನಿಗೆ ಯಾವುದೇ ರೀತಿ ಸಮಸ್ಯೆ ಎದುರಾಗಿಲ್ಲ, ಹೀಗಿದ್ದಾಗ ದಿಢೀರ್ ಇರಾನ್ ಪರಿಸ್ಥಿತಿ ಈಗ ಬೇರೆ ಆಗಿದೆ. ಇದೇ ಹೊತ್ತಲ್ಲಿ ಖಮೇನಿಗೆ ಕೂಡ ಶಾಕ್ ಕೊಡಲು ಅಮೆರಿಕ ಸಜ್ಜಾಗಿದೆ. ಈ ಮೂಲಕ ಅಮೆರಿಕದ ನಾಯಕರು ಖಮೇನಿ ವಿಚಾರದಲ್ಲಿ ಸಾಕಷ್ಟು ದೊಡ್ಡ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಖಮೇನಿ ಕಥೆ ಮುಗಿಸಿದರೆ ಎಲ್ಲವೂ ಸರಿ ಆಗಲಿದೆ ಎಂಬ ಚರ್ಚೆ ಕೂಡ ಇದೀಗ ನಡೆದಿದೆ. ಹಾಗಿದ್ರೆ ಈಗ ಖಮೇನಿ ಎಲ್ಲಿ? ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅಡಗಿ ಕೂತಿರುವ ಜಾಗ ಯಾವುದು? ಎಂಬ ಬಗ್ಗೆ ಅಮೆರಿಕ ಹಾಗೂ ಇಸ್ರೇಲ್ ತೀವ್ರ ಹುಡುಕಾಟ ನಡೆಸುತ್ತಿವೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/donald-trump-thinking-this-about-the-iran-now-and-sayyid-ali-hosseini-khamenei-name-is-on-trend-444585.html. xn--babytilbehr-pgb.com does not claim ownership of this content. All rights remain with the original publisher.
