
Sports
oi-Madhusudhan KR
RCB Vs CSK IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಆರ್ಸಿಬಿಯು ಸಿಎಸ್ಕೆ ವಿರುದ್ಧ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 250 ರನ್ಗಳನ್ನು ಕಲೆಹಾಕಿತು. ಟಿಮ್ ಡೇವಿಡ್ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ತಂಡ ಇಷ್ಟೊಂದು ರನ್ಗಳನ್ನು ಪೇರಿಸಲು ಪ್ರಮುಖ ಕಾರಣವಾಯಿತು.
ಟಾಸ್ ಗೆದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಜತ್ ಪಾಟಿದಾರ್ ನಾಯತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 250 ರನ್ ಕಲೆಹಾಕಿತು. ಈ ಮೂಲಕ ಸಿಎಸ್ಕೆಗೆ 251 ರನ್ಗಳ ಬೃಹತ್ ಗುರಿ ನೀಡಿತು.

ಭುವನೇಶ್ವರ್ ಕುಮಾರ್ ಐತಿಹಾಸಿಕ ಸಾಧನೆ
ಆರ್ಸಿಬಿ ನೀಡಿದ 251 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಮತ್ತು 14.2 ಕೋಟಿ ರೂಪಾಯಿಯ ದುಬಾರಿ ಆಟಗಾರ ಕಾರ್ತಿಕ್ ಶರ್ಮಾ ಇಬ್ಬರೂ ಫ್ಲಾಪ್ ಆಗಿದ್ದು, ಸಿಎಸ್ಕೆ ಈಗಾಗಲೇ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅವರು ಆಯುಷ್ ಮ್ಹಾತ್ರೆ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಸಿಎಸ್ಕೆ ಬೌಲರ್ಗಳ ಬೆವರಿಳಿಸಿದ ಆರ್ಸಿಬಿ ಸ್ಟಾರ್ಸ್
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ಗಳ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ 28(18), ಫಿಲ್ ಸಾಲ್ಟ್ 46(30), ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ಇವರಿಬ್ಬರು ಕೇವಲ 21 ಎಸೆತಗಳಲ್ಲಿ 58 ರನ್ಗಳ ಸ್ಫೋಟಕ ಜೊತೆಯಾಟವಾಡಿದರು. ಪಡಿಕ್ಕಲ್ 29 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು.
ಕನ್ನಡಿಗ ದೇವದತ್ ಪಡಿಕ್ಕಲ್ ಔಟಾದ ನಂತರ ಬಂದ ಟಿಮ್ ಡೇವಿಡ್, ರಜತ್ ಪಾಟಿದಾರ್ ಜೊತೆ ಸೇರಿ ಕೇವಲ 35 ಎಸೆತಗಳಲ್ಲಿ 99 ರನ್ಗಳ ಜೊತೆಯಾಟವಾಡಿದರು. ಟಿಮ್ ಡೇವಿಡ್ ಅಜೇಯ 70 ರನ್ (25 ಎಸೆತ) ಮತ್ತು ರಜತ್ ಪಾಟಿದಾರ್ ಅಜೇಯ 48 ರನ್ (19 ಎಸೆತ) ಸಿಡಿಸಿದರು. ಹೀಗೆ ಸಿಎಸ್ಕೆ ಬೌಲರ್ಗಳು ಎಸೆದ ಬಾಲ್ಗಳಮ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿ ಅವರ ಬೆವರಿಳಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-smash-250-3-vs-csk-in-ipl-2026-tim-david-s-blitz-and-bhuvneshwar-s-200-wicket-milestone-shine-449465.html. xn--babytilbehr-pgb.com does not claim ownership of this content. All rights remain with the original publisher.
