ಡೂನ್ ಲಿಟ್ ಫೆಸ್ಟ್ 2026: ಸಾಹಿತಿ -ಚಿಂತಕರ ಸಮಾಗಮ; ಸಾಹಿತ್ಯ, ಸಿನಿಮಾ, ಇತಿಹಾಸ, AI ಚರ್ಚೆಗಳಿಗೆ ಸಾಕ್ಷಿ | Doon Lit Fest 2026 Brings Writers, Thinkers Together with Powerful Ideas, History, Cinema and AI Talks

India

oi-Shankrappa Parangi

ಉತ್ತರಾಖಂಡನಲ್ಲಿ ಶಿಕ್ಷಣ ಸಚಿವಾಲಯದ ಅಧಿನದ ಭಾರತದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ ‘ಡೂನ್ ಪುಸ್ತಕ ಉತ್ಸವ 2026’ ಆಯೋಜಿಸಿತ್ತು. ಇದು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಜೊತೆಗೆ ವೈವಿಧ್ಯಮಯ ವಿಷಯಗಳ ಕುರಿತು ವಿಚಾರ ವಿನಿಮಯಕ್ಕೆ ಬಹುಮುಖ್ಯ ವೇದಿಕೆ ಆಯಿತು. ಕ್ರಿಯಾತ್ಮಕ ಡೂನ್ ಲಿಟ್ ಫೆಸ್ಟ್ ಸಹ ನಡೆದಿದ್ದು, ಸಾಹಿತ್ಯಾಸಕ್ತರು, ಓದುಗರು, ಚಿಂತಕರು ಮತ್ತು ಕಥೆಗಾರರನ್ನು ಒಟ್ಟುಗೂಡಿಸಿದೆ. ಸಾಹಿತ್ಯ, ಸಿನಿಮಾ, ಇತಿಹಾಸ, ಆಧ್ಯಾತ್ಮಿಕತೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಅಧಿವೇಶನಗಳ ಮೂಲಕ ಪ್ರೇಕ್ಷಕರ ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ಉತ್ಸವದಲ್ಲಿ ಲಿಟ್ ಫೆಸ್ಟ್ ವಿಷಯಗಳ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದ್ದವು. ಸಮಾರಂಭದಲ್ಲಿ ಮೊದಲ ದಿನ ತನಿಖಾ ಪತ್ರಕರ್ತ ಜುಪಿಂದರ್ ಸಿಂಗ್ ಅವರು ಭಗತ್ ಸಿಂಗ್ ಅವರ ಕಳೆದುಹೋದ ಪಿಸ್ತೂಲ್ ಆವಿಷ್ಕಾರ ಬಗೆಗಿನ ಒಂದಷ್ಟು ಸಂಗತಿಗಳನ್ನು ಬಿಚ್ಚಿಟ್ಟರು. ಇನ್ನು ಲೇಖಕಿ ಮತ್ತು ಚಿತ್ರಕಥೆಗಾರ್ತಿ ಅದ್ವೈತ ಕಲಾ ಅವರು “ಬಿಟ್ವೀನ್ ದಿ ಲೈನ್ಸ್ ಅಂಡ್ ಲೆನ್ಸ್: ಸ್ಟೋರೀಸ್ ಆಫ್ ಇಂಡಿಪೆಂಡೆಂಟ್ ಇಂಡಿಯಾ” ಎಂಬ ತಮ್ಮ ಸ್ವತಂತ್ರ ಮಹಿಳೆ ಕುರಿತಾದ ವಿಕಸನ ಪರಿಕಲ್ಪನೆ, ಅನ್ವೇಷಣೆ ಮತ್ತು ಕಾದಂಬರಿಗಳು, ಸಿನಿಮಾ ಹಾಗೂ ಟವಿಯಲ್ಲಿನ ತಮ್ಮ ಕೆಲಸಗಳ ಅನುಭವ ವಿವರಿಸಿದರು.

Doon Lit Fest 2026

ಉತ್ಸವದ ಎರಡನೇ ದಿನವು ಪ್ರಮುಖ ಕಾರ್ಯಕ್ರಮಗಳಿಗೆ ಜನ ಸಾಕ್ಷಿಯಾದರು. ವಕೀಲ ಮತ್ತು ಲೇಖಕ ಬ್ರಿಜೇಶ್ ದೇಸಾಯಿ ತಾವೇ ಬರೆದ “ಮೋದಿಯ ಮಿಷನ್” ಕೃತಿ ಕುರಿತು ಹಂಚಿಕೊಂಡರು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆರಂಭಿಕ ಜೀವನ, ಶಿಕ್ಷಣ ಮತ್ತು ನಾಯಕತ್ವ ಗುಣವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕಾದಂಬರಿಕಾರ ಕುಲಪ್ರೀತ್ ಯಾದವ್ 1857 ರ ಸ್ವಾತಂತ್ರ್ಯ ದಂಗೆಯ ಕಥೆಗಳನ್ನು, ರಾವ್ ತುಲಾ ರಾಮ್ ಅವರ ಧೈರ್ಯ ಪ್ರಸ್ತಾಪಿಸಿದರು. ಸತ್ಯ, ಸಂಬಂಧಗಳು ಮತ್ತು ಸಾರ್ಥಕ ಜೀವನದ ಅರ್ಥದ ಕುರಿತು ಪ್ರೇಕ್ಷಕರೊಂದಿಗೆ ಅತಿಥಿಗಳು ಚರ್ಚಿಸಿದರು.

ಇನ್ನು ಮೂರನೇ ದಿವಸವು ಉತ್ತಮ ಕಾರ್ಯಕ್ರಮಗಳು ನಡೆದಿದ್ದು, ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಅಲಿ ಅವರು ಫಿಲ್ಮ್ ಹಾಗೂ ಕಥೆ ಹೇಳುವಿಕೆಯ ಬಗೆಗಿನ ಒಂದಷ್ಟು ಅಂಶಗಳನ್ನು ಬಿಚ್ಚಿಟ್ಟರು. ಚಲನಚಿತ್ರಗಳ ಮೇಲೆ ಅವರು ಆಕರ್ಷಿತಗೊಂಡಿದ್ದು, ಕಾಶ್ಮೀರದಲ್ಲಿ “ರಾಕ್‌ಸ್ಟಾರ್” ಚಿತ್ರೀಕರಣದ ಅನುಭವ, ರಂಗಭೂಮಿ ಪ್ರೇಕ್ಷಕರಲ್ಲಿನ ಆದ್ಯತೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಈ ಬಾರಿಯು ಉತ್ಸವವು ಪ್ರಾದೇಶಿಕ ಸಾಹಿತ್ಯ ಸಂಪ್ರದಾಯಗಳ ಮೇಲೆ ಕೇಂದ್ರೀಕರಿಸಿದೆ. ಸ್ಥಳೀಯ ಭಾಷೆಗಳಲ್ಲಿ 26ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕವಿಗಳಾದ ರುಚಿ ಬಹುಗುಣ ಉನಿಯಾಲ್, ಅರ್ಚನಾ ಝಾ ಮತ್ತು ಬುದ್ಧಿನಾಥ್ ಮಿಶ್ರಾ ಅವರನ್ನು ಒಳಗೊಂಡ ವಿಶೇಷ ಸಾಹಿತ್ಯಿಕ ಅಧಿವೇಶನ ನಡೆಯಿತು. ಉತ್ತರಾಖಂಡದ ಶ್ರೀಮಂತ ಕಾವ್ಯ ಪರಂಪರೆಯನ್ನು ಸಾರಲಾಯಿತು. ಕುಮಾವೋನಿ ಮತ್ತು ಗರ್ಹ್ವಾಲಿಯಲ್ಲಿ ಅನುವಾದಿತ ಕೃತಿಗಳ ಕುರಿತಾದ ಮತ್ತೊಂದು ಅಧಿವೇಶನದಲ್ಲಿ ಕಮಲಾ ಪಂತ್, ಚಂದ್ರಶೇಖರ್ ತಿವಾರಿ, ಶಶಿಭೂಷಣ್ ಬಡೋನಿ, ಬೀನಾ ಬಂಚ್ವಾಲ್, ನೀತಾ ಕುಕ್ರೇತಿ ಮತ್ತು ರಾಮಕಾಂತ್ ಬಂಚ್ವಾಲ್ ಸೇರಿದಂತೆ ಭಾಷಣಕಾರರು ಪ್ರಾದೇಶಿಕ ಭಾಷೆ, ಅನುವಾದಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಹಾಗೂ ಇಂದಿನ ಸವಾಲುಗಳನ್ನು ಚರ್ಚಿಸಿದರು.

‘ಲಿಟ್ ಫೆಸ್ಟ್’ ನಲ್ಲಿ ಗಗನಯಾತ್ರಿ ಮತ್ತು ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನ ನಿರ್ದೇಶಕ ಯುವರಾಜ್ ಮಲಿಕ್ ಅವರೊಂದಿಗೆ ಸಂವಾದ ನಡೆಯಿತು. ಬಾಹ್ಯಾಕಾಶ ಪ್ರಯಾಣ ಬಿಚ್ಚಿಡಲಾಯಿತು. ವಿವಿಧ ಅಧಿವೇಶನಗಳು ಜರುಗಿದ್ದು, ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಬಗೆ ವಿವರಿಸಲಾಯಿತು. ಸುಭಾಷ್ ಚಂದ್ರ ಬೋಸ್ ಅವರ ಮರಣಾನಂತರದ ಜೀವನ, 1946 ರ ನೌಕಾ ದಂಗೆ, ಸಾಹಿತ್ಯದ ಮೂಲಕ ಇತಿಹಾಸ” ಮತ್ತು “ದೇಶಭಕ್ತಿ ಮತ್ತು ಕ್ರಾಂತಿ: ಭಾರತದ ಹಿಂದಿನ ಕಥೆಗಳು” ಮುಂತಾದ ವಿಷಯಗಳ ಕುರಿತು ಪ್ರಮುಖ ಚರ್ಚೆಗಳಾದವು. ನಿತಿನ್ ಸೇಠ್ ಅವರ “ಸ್ಮಾರ್ಟರ್ ಮೆಷಿನ್ಸ್, ವೈಸರ್ ಹ್ಯೂಮನ್ಸ್” ಎಂಬ ಅಧಿವೇಶನದಲ್ಲಿ ಮನುಷ್ಯ ಮತ್ತು AI ವಿಕಸ ಬಗ್ಗೆ ಮಹತ್ವದ ಚರ್ಚೆಗಳು ನಡೆದವು.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/doon-lit-fest-2026-brings-writers-thinkers-together-with-powerful-ideas-history-cinema-and-ai-tal-450073.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo