ಡೊನಾಲ್ಡ್ ಟ್ರಂಪ್ ಮಹತ್ವದ ಚಿಂತನೆ, ಇರಾನ್ ವಿರುದ್ಧ ವಾರಾಂತ್ಯದಲ್ಲಿ ಮಹತ್ವದ ಕ್ರಮ ಸಾಧ್ಯತೆ | US Military | US Military May Take A Very Big Decision About Iran By This Weekend And Here Is Present Situation

International

oi-Malathesha M

ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೊತ್ತಿಕೊಂಡ ಬೆಂಕಿ ಸೇನಾ ಕಾರ್ಯಾಚರಣೆ ರೂಪ ಪಡೆಯುತ್ತಿದ್ದು, ಈ ವಾರಾಂತ್ಯಕ್ಕೆ ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಸೇನೆ ಸಿದ್ಧವಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಈ ಬಗ್ಗೆ ಅಂತಿಮ ಆದೇಶ ನೀಡಿಲ್ಲ, ಹೀಗಾಗಿ ಅಮೆರಿಕ ಅಧ್ಯಕ್ಷರ ಆದೇಶಕ್ಕಾಗಿ ಅಮೆರಿಕದ ಶಕ್ತಿಶಾಲಿ ಸೇನೆಯು ಇದೀಗ ಕಾದು ಕುಳಿತಿದೆ. ಈ ಮೂಲಕ ಬೂದಿ ಮುಚ್ಚಿದ ಕೆಂಡವಾಗಿರುವ ಮಧ್ಯಪ್ರಾಚ್ಯ ಭಾಗದಲ್ಲಿ ದಿಢೀರ್ ಹೊಗೆ ಜೋರಾಗಿದೆ. ಸಿಎನ್ಎನ್ & ಸಿಎನ್‌ಬಿಸಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಅಮೆರಿಕದ ಈ ದಿಢೀರ್ ಸೇನಾ ಕಾರ್ಯಾಚರಣೆ ಬಗ್ಗೆ ವರದಿ ಮಾಡಿವೆ.

2003 ಸಮಯದಲ್ಲಿ ಅಮೆರಿಕ ದಿಢೀರ್ ಇರಾಕ್ ಮೇಲೆ ಸೇನಾ ದಾಳಿ ಮಾಡಿದ ನಂತರ ಈಗ ಮಧ್ಯಪ್ರಾಚ್ಯ ಭಾಗದ ದೊಡ್ಡ ದೇಶದ ಮೇಲೆ ಮತ್ತೆ ಸೇನಾ ಕಾರ್ಯಾಚರಣೆಗೆ ಸಜ್ಜಾಗಿದೆ. ಹೀಗಾಗಿ ಜಗತ್ತಿನ ದೊಡ್ಡಣ್ಣ ಅಮೆರಿಕ ಸೇನೆ ತನ್ನ ಬಳಿ ಇರುವ ದೊಡ್ಡ ದೊಡ್ಡ ವಿಮಾನಗಳನ್ನು ರವಾನಿಸಿದೆ. ಹೀಗೆ, ಸುಮಾರು 23 ವರ್ಷಗಳ ನಂತರ ಮತ್ತೊಂದು ಬೃಹತ್ ಸೇನಾ ಕಾರ್ಯಾಚರಣೆಗೆ ಅಮೆರಿಕ ಕೈಹಾಕಿದೆ. ಇದು ತೀವ್ರ ಚರ್ಚೆಯ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

US Military

ಬೃಹತ್ ಯುದ್ಧ ವಿಮಾನಗಳ ರವಾನೆ

ಈ ಬಗ್ಗೆ ಮಧ್ಯಪ್ರಾಚ್ಯ ಭಾಗದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಭೀತಿಯು ಹೆಚ್ಚಾಗಿದೆ. ಅಲ್ಲದೆ ಒಮಾನ್ ಸೇರಿದಂತೆ ಮಧ್ಯಪ್ರಾಚ್ಯ ಭಾಗದ ಶ್ರೀಮಂತ ದೇಶಗಳು ಗಂಭೀರ ಚಿಂತನೆ ನಡೆಸಿದ್ದು, ಯುದ್ಧ ನಡೆಯುವುದನ್ನು ತಪ್ಪಿಸೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿವೆ. ಆದರೂ ಅಮೆರಿಕ 2003ರ ನಂತರ ಇದೇ ಮೊದಲ ಬಾರಿಗೆ ತನ್ನಲ್ಲಿ ಇರುವ ಎಲ್ಲಾ ದೊಡ್ಡ ದೊಡ್ಡ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯ ಭಾಗಕ್ಕೆ ರವಾನಿಸಿದೆ.

ಇದು ಜಗತ್ತನ್ನೇ ಸುಡುವ ಬೆಂಕಿ?

ಅಮೆರಿಕ ಸೇನೆಯಲ್ಲಿ ಇರುವ ಎಲ್ಲಾ ಯುದ್ಧ ವಿಮಾನಗಳು ತುಂಬಾ ಶಕ್ತಿಶಾಲಿ ಅಂತಾ ಹೇಳಬಹುದು. ಎಫ್-22 ಎಸ್, ಎಫ್-35 ಎಸ್, ಎಫ್-16 ಎಸ್ ಯುದ್ಧ ವಿಮಾನಗಳು ದಿಢೀರ್ ಇರಾನ್ ಕಡೆಗೆ ಹಾರಿ ಬಂದಿವೆ. ಮತ್ತೊಂದು ಕಡೆ ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಇನ್ನಷ್ಟು ಭದ್ರ ಮಾಡಿದ್ದು, ಯಾವುದೇ ಸಮಯವೂ ಎದುರಾಗುವ ಸೂಕ್ಷ್ಮ ಪರಿಸ್ಥಿತಿ ಮಧ್ಯಪ್ರಾಚ್ಯದಲ್ಲಿ ನಿರ್ಮಾಣ ಆಗಿದೆ. ಹಾಗೇ ಇರಾನ್ ಜನ ಪಲಾಯನದ ಚಿಂತೆ ಮಾಡುತ್ತಿದ್ದಾರೆ. ಕೂಡಲೇ ಯುದ್ಧ ನಿಲ್ಲಿಸಲು ಕ್ರಮ ಕೈಗೊಳ್ಳದೇ ಇದ್ದರೆ ಇದು ಇಡೀ ಜಗತ್ತನ್ನೇ ಸುಡುವ ಬೆಂಕಿ ಆದರೂ ಅಚ್ಚರಿ ಇಲ್ಲ ಅಂತಿದ್ದಾರೆ ತಜ್ಞರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-military-may-take-a-very-big-decision-about-iran-by-this-weekend-and-here-is-present-situation-444311.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo