
Sports
oi-Madhusudhan KR
Romario Shepherd: ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026 ಸೂಪರ್ 8 ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ವೆಸ್ಟ್ ಇಂಡೀಸ್ ಪರ ಕರ್ನಾಟಕದ ಆರ್‌ಸಿಬಿಯ ರೊಮಾರಿಯೋ ಶೆಫರ್ಡ್ ಸ್ಫೋಟಕ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ತಂಡ ಬೃಹತ್ ರನ್ ಕಲೆಹಾಕಲು ಪ್ರಮುಖ ಪಾತ್ರವಹಿಸಿದರು.
ಟಾಸ್ ಸೋತು ಮೊಲದು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ ನಿಗದಿ 20 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡು 176 ರನ್‌ಗಳನ್ನು ಕಲೆಹಾಕಿತು. ಅದರಲ್ಲೂ ಸ್ಫೋಟಕ ಇನ್ನಿಂಗ್ ಆಡಿದ ರೊಮಾರಿಯೋ ಶೆಫರ್ಡ್, 37 ಎಸೆತಗಳಲ್ಲಿ 3 ಬೌಂಡರಿ, 4 ಸಕ್ಸರ್‌ಗಳೊಂದಿಗೆ ಅಜೇಯ 52 ರನ್ ಕಲೆಹಾಕಿದರು. ಇವರು ಐಪಿಎಲ್‌ನಲ್ಲಿ ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಕಳೆದ ಬಾರಿಯ ಸೀಸನ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಇವರು ಬ್ಲ್ಯಾಕ್ ಡ್ರ್ಯಾಗನ್ ಅಂತಲೇ ಹೆಸರುವಾಸಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ಶೆಫರ್ಡ್
ಇದೀಗ ತಮ್ಮ ದೇಶದ ವೆಸ್ಟ್ ಇಂಡೀಸ್ ಪರ ಟಿ20 ವಿಶ್ವಕಪ್‌ನಲ್ಲೂ ಕೂಡ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಾಗೆಯೇ ಇಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡದ ಪರ ಅತೀ ಹೆಚ್ಚು ರನ್ ಗಳಿಸಿ ಗಮನ ಸೆಳೆದಿದ್ದಾರೆ. ಹಾಗಾದಾರೆ ಯಾರೆಲ್ಲಾ ಎಷ್ಟು ರನ್‌ಗಳನ್ನು ಬಾರಿಸಿದ್ದಾರೆ ಎನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ತಿಳಿಯಿರಿ.
ವೆಸ್ಟ್ ಇಂಡೀಸ್ ಪರ ಯಾರು ಎಷ್ಟು ರನ್ ಬಾರಿಸಿದರು?
ವೆಸ್ಟ್ ಇಂಡೀಸ್ ಪರ ಬ್ಯಾಟ್ ಬೀಸಿದ ಜೇಸನ್ ಹೋಲ್ಡರ್ 49(31), ಬ್ರಾಂಡನ್ ಕಿಂಗ್ 21(11), ಶೆರ್ಫೇನ್ ರುದರ್‌ಫೋರ್ಡ್ 12(10), ಮ್ಯಾಥ್ಯೂ ವಾಲ್ಟರ್ ಫೋರ್ಡ್ 11(9), ರೊಮಾರಿಯೋ ಶೆಫರ್ಡ್ ಅಜೇಯ 52(37) ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-rcb-s-romario-shines-with-blazing-half-century-for-west-indies-against-south-africa-445213.html. xn--babytilbehr-pgb.com does not claim ownership of this content. All rights remain with the original publisher.
