
India
oi-Madhusudhan KR
Monalisa Marriage: ತಿರುವನಂತಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಭೋಂಸ್ಲೆ ಮತ್ತು ಅವರ ಪತಿ ಫರ್ಹಾನ್ ಖಾನ್ ತಮ್ಮ ಮದುವೆಯ ಕುರಿತು ಹರಿದಾಡುತ್ತಿದ್ದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ‘ಲವ್ ಜಿಹಾದ್ ನಡೆದಿದೆ’ ಅಥವಾ ‘ಮತಾಂತರ ಮಾಡಲಾಗಿದೆ’ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ದಂಪತಿ, ತಮ್ಮ ಮದುವೆ ಪರಸ್ಪರ ಒಪ್ಪಿಗೆಯೊಂದಿಗೆ ನಡೆದಿದೆ ಮತ್ತು ಇದರಲ್ಲಿ ಯಾವುದೇ ಬಲವಂತ ಅಥವಾ ಮತಾಂತರದ ವಿಷಯವೇ ಇಲ್ಲ ಎಂದು ಹೇಳಿದರು. ಜೊತೆಗೆ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿದೆ ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಲವು ತಪ್ಪು ಮಾಹಿತಿಗಳು ಹರಿದಾಡುತ್ತಿದ್ದ ಹಿನ್ನೆಲೆ, ಜನರಲ್ಲಿ ಗೊಂದಲ ನಿವಾರಣೆ ಮಾಡಲು ಅವರು ಮಾಧ್ಯಮಗಳ ಮುಂದೆ ಬಂದಿರುವುದಾಗಿ ಎಂದು ತಿಳಿಸಿದರು. ಈ ಕುರಿತು ನಡೆದ ಪತ್ರಿಕಾಗೋಷ್ಠಿಯ ವಿಡಿಯೋವನ್ನು “All Location” ಎಂವ ಗ್ರೂಪ್ನಲ್ಲಿ ಹಂಚಿಕೊಳ್ಳಲಾಗಿದೆ.
“ಯಾರೂ ಮತಾಂತರಗೊಂಡಿಲ್ಲ”
ಮೊನಾಲಿಸಾ ಅವರು ‘ಲವ್ ಜಿಹಾದ್’ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ತಮ್ಮಿಬ್ಬರಲ್ಲಿ ಯಾರೂ ಮತಾಂತರಗೊಂಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಫರ್ಹಾನ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ತಮ್ಮದೇ ಆಗಿತ್ತು. ಆರಂಭದಲ್ಲಿ ಫರ್ಹಾನ್ ಅವರಿಗೆ ಮದುವೆಯ ಬಗ್ಗೆ ಹಿಂಜರಿಕೆ ಇತ್ತಾದರೂ, ತಾವು ಪಟ್ಟು ಹಿಡಿದು ಈ ಮದುವೆಯಾಗಿದ್ದೇವೆ,” ಎಂದು ತಿಳಿಸಿದ್ದಾರೆ.
“ಹಿಂದೂ ಸಂಪ್ರದಾಯದಂತೆ ವಿವಾಹ”
“ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ನಡೆದಿದೆ. ಮೊನಾಲಿಸಾ ಅವರ ಕೋರಿಕೆಯ ಮೇರೆಗೆ ಅವಳು ಬಯಸಿದಂತೆಯೇ ವಿವಾಹದ ವಿಧಿವಿಧಾನಗಳನ್ನು ಅನುಸರಿಸಲು ನಾನು ಒಪ್ಪಿಕೊಂಡೆ. ತಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ,” ಎಂದು ಫರ್ಹಾನ್ ಖಾನ್ ತಿಳಿಸಿದ್ದಾರೆ.
ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ದಂಪತಿ ಮನವಿ
“ಮೊನಾಲಿಸಾ ಅಪ್ರಾಪ್ತ ವಯಸ್ಕಳು ಎಂಬ ಆರೋಪಗಳನ್ನು ತಳ್ಳಿಹಾಕಲು ಫರ್ಹಾನ್ ಅವರು ಆಕೆಯ ಆಧಾರ್ ಕಾರ್ಡ್ ಮತ್ತು ಜನ್ಮ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಹಾಜರುಪಡಿಸಿದರು. ಆಕೆ ವಯಸ್ಕಳಾಗಿದ್ದಾಳೆ ಮತ್ತು ಈ ವಿವಾಹವು ಕೇರಳ ಸರ್ಕಾರದ K-SMART ಆ್ಯಪ್ ಮೂಲಕ ಕಾನೂನುಬದ್ಧವಾಗಿ ನೋಂದಣಿಯಾಗಿದೆ,” ಎಂದು ಅವರು ತಿಳಿಸಿದರು. ಇದೇ ವೇಳೆ “ಉತ್ತರ ಭಾರತದ ಕೆಲವು ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ,” ಎಂದು ದಂಪತಿಗಳು ಮನವಿ ಮಾಡಿದ್ದಾರೆ.
ವೈರಲ್ ಸ್ಟಾರ್ನಿಂದ ದಾಂಪತ್ಯದವರೆಗೆ
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ, ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವಾಗ ಸೆರೆಹಿಡಿಯಲಾದ ವಿಡಿಯೋದಿಂದಾಗಿ ಅವರ ಸುಂದರ ಕಣ್ಣುಗಳು ಮತ್ತು ಆಕರ್ಷಕ ನಗು ಇಡೀ ದೇಶದ ಗಮನ ಸೆಳೆದಿತ್ತು. ಅಂದಿನಿಂದ ಅವರು ಸಾಮಾಜಿಕ ಜಾಲತಾಣದಲ್ಲಿ ಅವರು ‘ಕುಂಭಮೇಳದ ಮೊನಾಲಿಸಾ’ ಎಂದೇ ಪ್ರಸಿದ್ಧರಾದರು.
ವೈರಲ್ ಆದ ನಂತರ ಚಿತ್ರರಂಗದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದ ಮೊನಾಲಿಸಾ, ಒಂದು ಚಿತ್ರೀಕರಣದ ಸಂದರ್ಭದಲ್ಲಿ ಮಹಾರಾಷ್ಟ್ರ ಮೂಲದ ನಟ ಫರ್ಮಾನ್ ಖಾನ್ ಅವರನ್ನು ಭೇಟಿಯಾದರು. ಕಳೆದ ಆರು ತಿಂಗಳಿಂದ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಇದೇ ಪ್ರೀತಿ ಮದುವೆವರೆಗೂ ಕರೆದುಕೊಂಡು ಹೋಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ವಿವಾಹ ಮತ್ತು ಸವಾಲುಗಳು
ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಮಾರ್ಚ್ 11, 2026ರಂದು ಕೇರಳದ ತಿರುವನಂತಪುರದ ಪೂವಾರ್ ಬಳಿಯ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದ ಒತ್ತಡ ಮತ್ತು ಬೆದರಿಕೆಯ ಕಾರಣದಿಂದಾಗಿ, ದಂಪತಿಗಳು ಕೇರಳದ ಥಂಪನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಲವ್ ಜಿಹಾದ್’ ಎಂಬ ಆರೋಪಗಳನ್ನು ಮೊನಾಲಿಸಾ ನಿರಾಕರಿಸಿದ್ದಾರೆ. ಇದು ಕೇವಲ ಪರಸ್ಪರ ಪ್ರೀತಿಯಿಂದಾದ ವಿವಾಹ. ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ತಾನು ಅಪ್ರಾಪ್ತೆ ಎಂಬ ವದಂತಿಗಳಿ ಕೂಡ ಸುಳ್ಳೆಂದು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/monalisa-bhonsle-and-husband-farhan-khan-deny-love-jihad-conversion-claims-in-thiruvananthapuram-446835.html. xn--babytilbehr-pgb.com does not claim ownership of this content. All rights remain with the original publisher.
