ಪಕ್ಕದಲ್ಲಿ ಹುಡುಗಿ ಇದ್ದಾಗ ಗಂಡಸರಾಗ್ತಾರೆ, ದರ್ಶನ್‌ ಅಣ್ಣನ ಕಷ್ಟಕ್ಕೆ ಒಬ್ಬನೂ ಬರಲಿಲ್ಲ: ನಟ ಧನ್ವೀರ್‌ | Dhanveer Gowda slams Men Act Tough Only in Front of Camera No One Stood by Darshan In Bad time

Entertainment

oi-Manohara M

ಸ್ಯಾಂಡಲ್‌ವುಡ್‌ ನಟರಾದ ಧನ್ವೀರ್‌ ಗೌಡ ಹಾಗೂ ಝೈದ್‌ ಖಾನ್‌ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇದರ ನಡುವೆ ಇತ್ತೀಚೆಗೆ “ಹಯಗ್ರೀವ” ಸಿನಿಮಾದ ಸಾಂಗ್‌ ಲಾಂಚ್‌ ವೇಳೆ ನಟ ಧನ್ವೀರ್‌ ಗೌಡ ಅವರು ನಟ ದರ್ಶನ್‌ ಫೋಟೋ ಹಿಡಿದುಕೊಂಡು “ಮೀಟರ್‌ ಬೇಕು, ಮೀಟರ್‌” ಎಂದು ಯಾರಿಗೋ ಕೌಂಟರ್‌ ಕೊಟ್ಟಿದ್ದರು. ಈ ವಿಡಿಯೋ ವೈರಲ್‌ ಕೂಡ ಆಗಿತ್ತು. ಈ ಮಾತು ಹೇಳಿದ್ದು ಯಾರಿಗೆ? ಎಂದು ಧನ್ವೀರ್‌ ಸ್ಪಷ್ಟನೆ ನೀಡಿದ್ದಾರೆ.

‘ದರ್ಶನ್‌ ಅಣ್ಣನ ವಿಚಾರವಾಗಿ ನಾನು ಎಲ್ಲೂ ಏನೂ ಹೇಳಿಕೊಂಡಿಲ್ಲ. ನಾನು ಬಂದು ಅದು ಮಾಡ್ದೆ, ಇದು ಮಾಡ್ದೆ ಅಂತ ಹೇಳಿಕೊಳ್ಳೋದೂ ಇಲ್ಲ. ಅದು ಭಗವಂತನಿಗೆ ಬಿಟ್ಟಿದ್ದು. ಕೆಲವರು ಕೈಯಲ್ಲಿ ಕಿಸಿಯೋಕೆ ಆಗದೇ ಇರುವವರು, ಪಕ್ಕದಲ್ಲಿ ಯಾರಾದ್ರೂ ಹುಡುಗಿ ಇದ್ದಾಗ ಕ್ಯಾಮೆರಾ ಮುಂದೆ ಬಂದ ತಕ್ಷಣ ಗಂಡುಮಕ್ಕಳಾಗಿಬಿಡ್ತಾರೆ. ಆದರೆ ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು ಅನ್ನೋದು ತಿಳಿದಿರಬೇಕು’ ಎಂದು ಬಾಸ್‌ ಟಿವಿ ಯುಟ್ಯೂಬ್‌ ಸಂದರ್ಶನದಲ್ಲಿ ಧನ್ವೀರ್‌ ಹೇಳಿದ್ದಾರೆ.

Dhanveer Gowda

ಬಿರಿಯಾನಿ ಕಳಿಸೋಕೆ ಆಗುತ್ತೆ

‘ಅಷ್ಟು ಮಾತನಾಡಿ ಪೋಸ್‌ ಕೊಡುತ್ತಿರುವವರು ಕಷ್ಟ ಕಾಲದಲ್ಲಿ ಬಂದು ನಿಲ್ಲಬೇಕಿತ್ತು. ಸುಖದ ಸಮಯದಲ್ಲಿ ಚೆನ್ನಾಗಿ ಮಜಾ ಮಾಡಿ, ಕಷ್ಟಕ್ಕೆ ಯಾಕೆ ಆಗಲ್ಲ? ಈಗ ಮೀಡಿಯಾ ಮುಂದೆ ಬಂದು ಮಾತನಾಡ್ತಾರಲ್ಲ? ಅವರು ದರ್ಶನ್‌ ಅಣ್ಣಂಗೆ ಕಷ್ಟ ಇದ್ದಾಗ ಒಂದು ದಿನನೂ ಬಂದೋರಲ್ಲ. ದರ್ಶನ್‌ ಅಣ್ಣ ಜಾಮೀನಿನ ಮೇಲೆ ಹೊರಬಂದಾಗ ಮರುದಿನವೇ ಮನೆಗೆ ಬಿರಿಯಾನಿ ಕಳಿಸೋಕೆ ಆಗುತ್ತೆ. ಕಷ್ಟದಲ್ಲಿದ್ದಾಗ ಯಾಕೆ ಬಂದು ನಿಲ್ಲೋಕೆ ಆಗಲಿಲ್ಲ? ಇದರಲ್ಲೇ ಆ ವ್ಯಕ್ತಿಗಳ ವ್ಯಕ್ತಿತ್ವ ಗೊತ್ತಾಗುತ್ತೆ. ಬೇರೆಯವರ ಕ್ಯಾರೆಕ್ಟರ್‌ ಬಗ್ಗೆ ಅವರು ಮಾತನಾಡೋದಲ್ಲ, ಅವರದ್ದು ನೋಡಿಕೊಂಡರೆ ಸಾಕು’ ಎಂದು ತಿರುಗೇಟು ನೀಡಿದ್ದಾರೆ.

‘ಕ್ಯಾಮೆರಾ ಮುಂದೆ ಗಂಡಸ್ತನ ತೋರಿಸೋದಲ್ಲ’

‘ಕ್ಯಾಮರಾ ಇದೆ, ಪಕ್ಕದಲ್ಲಿ ಹುಡುಗಿ ಇದ್ದಾಳೆ ಅಂತ ಅವರ ಮುಂದೆ ಗಂಡಸ್ತನ ತೋರಿಸೋದಲ್ಲ. ಗಂಡಸ್ತನ ಅನ್ನೋದು ಇಲ್ಲಿ ಮಾಡಿ ತೋರಿಸಬೇಕು. ಕ್ಯಾಮರಾ ಮುಂದೆ ಬರುವ ಗಂಡಸರು ತುಂಬಾ ಜನರನ್ನ ಈಗಾಗಲೇ ನೋಡಿದ್ದೀನಿ. ಇದು ಯಾರಿಗೆ ಅರ್ಥವಾಗಬೇಕೋ ಅವರಿಗೆ ಅರ್ಥವಾಗಿದೆ, ಅವರ ಹೆಸರು ಉಲ್ಲೇಖ ಮಾಡಲೇಬೇಕು ಅಂತೇನಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ನಟ ಧನ್ವೀರ್‌.

‘ಸಾಯೋವರೆಗೂ ದರ್ಶನ್‌ ಅಣ್ಣನ ಜೊತೆ ಇರ್ತೀನಿ’

‘ನಾನು ದರ್ಶನ್‌ ಅವರ ವಿಚಾರದಲ್ಲಿ ಮುಂದೆ ಏನೆಲ್ಲ ಎದುರಾಗುತ್ತೆ ಅನ್ನೋದನ್ನ ತಿಳಿದೇ ಅವರ ಜೊತೆ ನಿಂತವನು. ಸುಮ್ಮನೆ ಮೀಡಿಯಾ ಮುಂದೆ ಮಾತನಾಡುವ ಮಕ್ಕಳಲ್ಲ ನಾವು. ನಾನು ಒಬ್ಬ ವ್ಯಕ್ತಿಯನ್ನ ಇಷ್ಟ ಪಡ್ತೀವಿ ಅಂದ್ರೆ ಅದೇನೇ ಬರಲಿ ಅವರ ಜೊತೆ ನಿಲ್ತೀನಿ. ನಾನು ಸಾಯೋವರೆಗೂ ದರ್ಶನ್‌ ಅಣ್ಣನ ಬಿಡೋದಿಲ್ಲ ಅಂತ ಅವತ್ತೇ ಹೇಳಿದ್ದೀನಿ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಇನ್ನು ಯಾವುದೇ ಸ್ಟಾರ್‌ವಾರ್‌ ಅನ್ನೋದು ಇಲ್ಲ. ಕೆಲವರು ಆಗದೇ ಇರೋರು ಮಾಡೋ ಕೆಲಸಗಳಿವು. ಎಲ್ಲರೂ ಅವರವರು ಚೆನ್ನಾಗೇ ಇರ್ತಾರೆ. ಮಧ್ಯದಲ್ಲಿ ನೌಟಂಕಿ ಆಟಗಳನ್ನ ಆಡೋರು ಮಾಡೋ ಕೆಲಸಗಳಿವು. ನಾನು ದರ್ಶನ್‌ ಅಣ್ಣನ ಜೊತೆ ನಿಂತ ಬಗ್ಗೆ ಕಿಚ್ಚ ಸುದೀಪ್‌ ಅವರು ಕೂಡ ಒಳ್ಳೆಯ ಮಾತಗಳನ್ನಾಡಿದ್ರು. ಅದು ಕೇಳಿ ನನಗೂ ಖುಷಿ ಆಯ್ತು, ಅದಕ್ಕೇ ಅವರು ದೊಡ್ಡ ಸ್ಥಾನದಲ್ಲಿದ್ದಾರೆ, ಅವರ ಮಾತುಗಳು ಹಾಗೆಯೇ ಬರುತ್ತೆ. ಸುಮ್ ಸುಮ್ಮನೆ ಮಾತನಾಡುವವರು ಸುದೀಪ್‌ ಅವರನ್ನ ನೋಡಿ ಕಲಿಯಬೇಕು‌’ ಎಂದಿದ್ದಾರೆ ನಟ ಧನ್ವೀರ್‌ ಗೌಡ.

ಇನ್ನು ನಟ ಝೈದ್‌ ಖಾನ್‌ ಅವರು ದರ್ಶನ್‌ ವಿಚಾರ ಪ್ರಸ್ತಾಪಿಸಿ, ‘ನಾನು ತಮ್ಮನ ತರ, ಟಿಆರ್‌ಪಿ ಅಂತೆಲ್ಲ ಹೇಳಿಕೊಳ್ಳಲ್ಲ’ ಎಂದು ಮಾಧ್ಯಮವೊಂದರ ಜೊತೆ ಮಾತನಾಡಿದ್ದರು. ಇದಾದ ಬಳಿಕ ಧನ್ವೀರ್‌ ಆಡಿದ್ದ ಮಾತುಗಳು ಒಂದಕ್ಕೊಂದು ಲಿಂಕ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ಕಿತ್ತಾಟಕ್ಕೂ ಕಾರಣವಾಗಿತ್ತು.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dhanveer-gowda-slams-men-act-tough-only-in-front-of-camera-no-one-stood-by-darshan-in-bad-time-442965.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo