
Karnataka
oi-Manohara M
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ನಿಂದ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಬಂಡಾಯ ಘೋಷಿಸಿ, ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಪರಮಾತ್ಮ ಬಂದು ಹೇಳಿದರೂ ನಾಮಪತ್ರ ವಾಪಸ್ ತಗೊಳ್ಳಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಬೆಂಬಲ ಸೂಚಿಸಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾದಿಕ್ ಪೈಲ್ವಾನ್, ರಾಜ್ಯದಲ್ಲಿ ಶಾಂತಿ ನೆಲೆಸಲು ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ಜಾತಿವಾದ
ಕಾಂಗ್ರೆಸ್ನಿಂದ ಬಂಡಾಯ ಘೋಷಣೆ ಮಾಡಿ ನಂತರ ಹಿಂದೆ ಸರಿದಿರುವ ಸಾದಿಕ್ ಪೈಲ್ವಾನ್, ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿ, ಬಿಜೆಪಿ ಅವರಿಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ಜಾತಿವಾದ ಮಾಡುತ್ತಾರೆ. ಅವರಿಗೆ ಅಧಿಕಾರ ಕೊಡಬಾರದು ಎಂದು ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ. ಇನ್ನು, ಇದೇ ವೇಳೆ ಸಮರ್ಥ ಶಾಮನೂರಿಗೆ ಬೆಂಬಲ ಕೊಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಬಹಿರಂಗವಾಗಿ ನಾನು ಕಾಂಗ್ರೆಸ್ ಪರ ಕೆಲಸ ಮಾಡುವೆ. ದಾವಣಗೆರೆ ದಕ್ಷಿಣದಲ್ಲಿ 40 ವರ್ಷದಿಂದ ಬಿಜೆಪಿ ಗೆಲ್ಲಿಸಿಲ್ಲ, ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂದು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲ ನಾಯಕರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವರು ಜಾತಿವಾದ ಮಾಡ್ತಾರೆ ಅವರಿಗೆ ಅಧಿಕಾರ ಕೊಡಬಾರದು ಎಂದು ನಮ್ಮ ನಿರ್ಧಾರ ಎಂದಿದ್ದಾರೆ.

ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತದೆ
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದ್ದರೆ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತದೆ. ನೂರಕ್ಕೆ ನೂರರಷ್ಟು ಶಾಂತಿ ಸಿಗುತ್ತದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಇರುವವರೆಗೂ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ. ಆ ನಿಟ್ಟಿನಲ್ಲಿ ನಾವು ಶಾಂತಿಗೊಸ್ಕರ ಸಮಾಜಕ್ಕೆ ಒಳಿತಾಗುವುದಕ್ಕೋಸ್ಕರ, ಧರ್ಮದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಈ ನಿರ್ಧಾರ ಮಾಡಿದ್ದೇವೆ. ರಾಜ್ಯಕ್ಕೆ ಹಾಗೂ ಎಲ್ಲ ಸಮಾಜದಲ್ಲಿ ಶಾಂತಿ ನೆಲೆಸುವಂತೆ ನಮ್ಮ ನಾಯಕರು ನಡೆದಿದ್ದಾರೆ. ನಾವು ಅವರ ಹಾದಿಯಲ್ಲಿ ನಡೆಯುತ್ತಿದ್ದೇವೆ. ಅದೇ ವಿಚಾರಕ್ಕೆ ನಾನು ಚುನಾವಣೆ ಕಣದಿಂದ ಹಿಂದೆ ಸರಿದಿದ್ದೇನೆ. ಅವರಿಗೆ ಅಧಿಕಾರ ಕೊಡಬಾರದು ಎಂದು ನಾನು ಪಕ್ಷಕ್ಕೆ ಮರಳಿ ಬಂದೆ ಎಂದು ಹೇಳಿದ್ದಾರೆ.
ಯಾವುದೇ ಜವಾಬ್ದಾರಿಯನ್ನು ಕೇಳಿಲ್ಲ
ಪಕ್ಷ ಸೇರ್ಪಡೆ ವೇಳೆ ರಾಜ್ಯ ನಾಯಕರು ನನಗೆ ಏನು ಬೇಕು ಎಂದು ಕೇಳಿದರು. ಆದರೆ ನಾನು ಯಾವುದೇ ಜವಾಬ್ದಾರಿಯನ್ನು ಕೇಳಿಲ್ಲ, ನಾನು ಹಳೆಯ ಕಾಂಗ್ರೆಸ್ಗೆ, ನಾನು ಮತ್ತೆ ಕಾಂಗ್ರೆಸ್ಗೆ ಮರಳಿ ಬರುತ್ತೇನೆ ಎಂದಿದ್ದೇನೆ. ಕಾಂಗ್ರೆಸ್ಗಾಗಿ ಕೆಲಸ ಮಾಡುವ ವಾಗ್ದಾನ ಮಾಡಿ ಬಂದಿದ್ದೇನೆ ಎಂದಿದ್ದಾರೆ. ನಾನು ಮಾಜಿ ನಗರಸಭಾ ಸದಸ್ಯ, ಮುಸ್ಲಿಂ ಸಮಾಜದ ಅಧ್ಯಕ್ಷ, 40 ವರ್ಷದಿಂದ ವಿವಿಧೆಡೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅದೇ ನಿಟ್ಟಿನಲ್ಲಿ ಎಲ್ಲ ಸಮುದಾಯದವರು ವಿಶ್ವಾಸ ಕೊಟ್ಟಿದ್ದರು. ಅದಕ್ಕಾಗಿ ಚುನಾವಣೆಗೆ ನಿಂತಿದ್ದು, ಆದರೆ ಈಗ ನಾನು ಕಾಂಗ್ರೆಸ್ಗೆ ಮರಳಿದ್ದೇನೆ. ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ನನ್ನ ಸೋಲಿಸುತ್ತಿದ್ರು
ನಾನು ಒಂದು ವೇಳೆ ಕಣದಲ್ಲಿ ಇದ್ದಿದ್ದರೆ, ಖಂಡಿತ ನನ್ನನ್ನು ಸೋಲಿಸುತ್ತಿದ್ದರು, ಬಿಜೆಪಿಗೆ ಗೆಲ್ಲಿಸುತ್ತಿದ್ದರು. ಈಗ ಸಮಾಜ ಯಾವ ಪಕ್ಷಕ್ಕೆ ತೀರ್ಮಾನ ಮಾಡಬೇಕು ಅದನ್ನು ಮಾಡುತ್ತದೆ. ನಾನು ಸಮಾಜದ ಮುಖಂಡನಿದ್ದೇನೆ, ಉಳಿದ 13 ಅಭ್ಯರ್ಥಿಗಳನ್ನು ಕರೆದು ಮಾತನಾಡಿಸುತ್ತೇನೆ. ಎಲ್ಲರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುವಂತೆ ಮಾಡಿಸುತ್ತೇನೆ ಎಂದು ಸಾದಿಕ್ ಪೈಲ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/why-sadiq-pailwan-withdraws-nomination-for-davanagere-south-by-election-backs-congress-candidate-448843.html. xn--babytilbehr-pgb.com does not claim ownership of this content. All rights remain with the original publisher.
