ಪ್ರಧಾನಿ ನರೇಂದ್ರ ಮೋದಿ ಜೊತೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ: ಪತ್ರದಲ್ಲಿ ಏನಿದೆ ಗೊತ್ತಾ? | Rashmika Mandanna–Vijay Deverakonda Wedding: PM Narendra Modi’s Letter, Photos Viral on Social media

Entertainment

oi-Madhusudhan KR

Rashmika Mandanna-Vijay Deverakonda: ದಕ್ಷಿಣ ಭಾರತದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ಫೆಬ್ರವರಿ 26ರ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಜೋಡಿಗೆ ಪತ್ರ ಬರೆದು ಶುಭಾಹಾರೈಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಅವರ ಜೊತೆಗಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಹಾಗಾದ್ರೆ, ಅಸಲಿ ಸತ್ಯ ಏನೆಂದು ಇಲ್ಲಿ ತಿಳಿಯಿರಿ.

ಈ ಫೋಟೋಗಳಲ್ಲಿ ರಶ್ಮಿಕಾ ಮದಣ್ಣ ಮತ್ತು ವಿಜಯ್ ದೇವರಕೊಂಡ ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು, ಮದುವೆ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿರುವ ಅವರ ರಿಸೆಪ್ಷನ್ ಕಾರ್ಯಕ್ರಮಕ್ಕೆ ಆಹ್ವಾನ ನಿಡಿದ್ದಾರೆ ಎಂದು ವರದಿಯಾಗಿದೆ. ಮೋದಿ ಜೊತೆಗಿನ ಈ ಫೋಟೋಗಳನ್ನು THE SAMEER⭐ ಎಂಬ ಹೆಸರಿನ ಟ್ಟಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Rashmika Mandanna Vijay Deverakonda Wedding PM Narendra Modi s Letter Photos Viral on Social media

ಮೂಲಗಳ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಅವರು 2026 ಫೆಬ್ರವರಿ 21ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ಬಳಿಕ, ಒಂದು ದಿನದ ನಂತರ ಅಂದರೆ ಶುಕ್ರವಾರ ಅವರಿಬ್ಬರ ಮೋದಿ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿವೆ.

ಮದುವೆ ಹಾಗೂ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು ಎಂದು ತಿಳಿದುಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಹಳದಿ ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದು, ವಿಜಯ್ ದೇವರಕೊಂಡ ಬಿಳಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮೋದಿ ಅವರಿಗೆ ಶಾಲ್ ಹೊದಿಸಿ ಸನ್ಮಾನಿಸುತ್ತಿರುವ ದೃಶ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಈ ಭೇಟಿ ಅವರ ವಿವಾಹಕ್ಕೂ ಮುನ್ನ ದೆಹಲಿಯಲ್ಲಿ ನಡೆದಿತ್ತು ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರಿಂದ ಶುಭಾಶಯ ಪತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 25ರ ಬುಧವಾರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಪತ್ರ ಕಳುಹಿಸಿದ್ದು, ಈ ಜೋಡಿಗೆ ದಾಂಪತ್ಯ ಜೀವನದ ಹೊಸ ಅಧ್ಯಾಯಕ್ಕೆ ಹೃತ್ಪೂರ್ವಕ ಶುಭಾಶಯಗಳು. ಅವರ ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತುಂಬಿರಲಿ ಎಂದು ಆಶೀರ್ವಾದ ಕೋರಿದರು.

ಮೋದಿ ಅವರ ಪತ್ರದಲ್ಲಿ ಏನಿದೆ?

ಮೂಲಗಳ ಪ್ರಕಾರ, “ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಸಮಾರಂಭಕ್ಕೆ ಆಹ್ವಾನಿಸಿರುವುದು ನನಗೆ ಸಂತೋಷದ ವಿಚಾರ. ಈ ಅತ್ಯಂತ ಸಂತೋಷಕರ ಮತ್ತು ಶುಭ ಸಂದರ್ಭದಲ್ಲಿ ಇಬ್ಬರ ಕುಟುಂಬಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು,” ಎಂದು ಬರೆದಿದ್ದಾರೆ.

“ಸಿನಿಮಾ ರಂಗಕ್ಕೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹೊಸಬರು ಅಲ್ಲ. ಆದರೆ, ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುವ ಅವರ ನಿಜ ಜೀವನದ ಈ ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯವು, ಅವರು ಬೆಳ್ಳಿ ಪರದೆಯಲ್ಲಿ ಸೃಷ್ಟಿಸಿದ ಮ್ಯಾಜಿಕ್ ಅನ್ನು ಖಂಡಿತವಾಗಿ ಮೀರಿಸುತ್ತದೆ,” ಎಂದು ತಿಳಿಸಿದ್ದಾರೆ.

“ಮುಂದಿನ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಂಡ ಕನಸುಗಳು ಹಾಗೂ ಅವುಗಳ ನೆರವೇರಿಕೆಯಿಂದ ತುಂಬಿರಲಿ. ಚಿಂತನಶೀಲತೆ ಮತ್ತು ಪ್ರೀತಿಯಿಂದ ಜವಾಬ್ದಾರಿಗಳನ್ನು ಹಂಚಿಕೊಂಡು, ನಿಜವಾದ ಜೀವನ ಸಂಗಾತಿಗಳಾಗಿ ಜೀವನ ಪಯಣ ಸಾಗಿಸಲಿ,” ಎಂದು ಅವರು ಜೋಡಿ ಹಾಗೂ ಅವರ ಕುಟುಂಬಗಳಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಆಶೀರ್ವಾದ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-vijay-deverakonda-wedding-pm-narendra-modi-s-letter-photos-viral-on-social-media-445349.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo