ಬ್ರೋ.. ಒಂದು ವಿಕೆಟ್‌ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್‌ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ | Krunal Pandya Playfully Questions Dinesh Karthik Over Missing Bowling Photo After RCB Win vs MI

Sports

oi-Madhusudhan KR

Krunal Pandya: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 12) ನಡೆದ ಐಪಿಎಲ್‌ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟರ್‌ ಬಗ್ಗೆ ಕೃನಾಲ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ನಡೆದ ಒಂದು ಆಸಕ್ತಿದಾಯಕ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆರ್‌ಸಿಬಿ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ, ತಮ್ಮ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮಾಷೆಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Krunal Pandya Playfully Questions Dinesh Karthik Over Missing Bowling Photo After RCB Win vs MI

ಪಂದ್ಯ ಗೆದ್ದ ನಂತರ ದಿನೇಶ್ ಕಾರ್ತಿಕ್ ಅವರು ಆರ್‌ಸಿಬಿ ತಂಡದ ಸಂಭ್ರಮಾಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಆ ಪೋಸ್ಟ್‌ನಲ್ಲಿ ಕೃನಾಲ್ ಪಾಂಡ್ಯ ಅವರು ಬೌಲಿಂಗ್ ಮಾಡುತ್ತಿರುವ ಫೋಟೋ ಇರಲಿಲ್ಲ. ಇದನ್ನು ಗಮನಿಸಿದ ಕೃನಾಲ್, ದಿನೇಶ್ ಕಾರ್ತಿಕ್ ಅವರ ಪೋಸ್ಟ್‌ನ ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ತಮಾಷೆಯಾಗಿ ಡಿಕೆ ಕಾಲೆಳೆದ ಕೃನಾಲ್ ಪಾಂಡ್ಯ

“ನನ್ನ ಬೌಲಿಂಗ್ ಫೋಟೋ ಎಲ್ಲಿದೆ ಡಿ.ಕೆ? ಎಂದು ಪ್ರಶ್ನಿಸುವ ಕೇಳುವ ಮೂಲಕ ತಮಾಷೆಯಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಕೃನಾಲ್ ಅವರ ಈ ಕಾಮೆಂಟ್ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಈ ಸೋಷಿಯಲ್ ಮೀಡಿಯಾ ಕಿರಿಕ್ ಕೇವಲ ತಮಾಷೆಯಾಗಿದ್ದು, ಇದು ಆಟಗಾರರ ನಡುವಿನ ಉತ್ತಮ ಬಾಂಧವ್ಯವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮೈದಾನದ ಒಳಗಿನ ಆಟದ ಜೊತೆಗೆ, ಮೈದಾನದ ಹೊರಗಿನ ಇಂತಹ ಸಣ್ಣಪುಟ್ಟ ಪ್ರಸಂಗಗಳು ಕೂಡ ಐಪಿಎಲ್ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿವೆ.

ಸೂರ್ಯಕುಮಾರ್ ವಿಕೆಟ್ ಕಿತ್ತ ಕೃನಾಲ್

ಮುಂಬೈ ಇಂಡಿಯನ್ಸ್ ತಂಡವು ಎಂಟನೇ ಓವರ್ ವೇಳೆಗೆ 74 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 33 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಅವರನ್ನು ಕೃನಾಲ್ ಪಾಂಡ್ಯ ಔಟ್ ಮಾಡುವ ಮೂಲಕ ಇವರ ಜೊತೆಯಾಟಕ್ಕೆ ಬ್ರೇಕ್‌ ಹಾಕಿದರು.

ಕೃನಾಲ್‌ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 26 ರನ್ ನೀಡಿ 1 ವಿಕೆಟ್ ಪಡೆದರು. ಆ ಮೂಲಕ 6.5 ರ ಎಕಾನಮಿಯೊಂದಿಗೆ ತಂಡದ ಅತ್ಯಂತ ಆಕ್ರಮಣಕಾರಿ ಬೌಲರ್ ಎನಿಸಿಕೊಂಡರು. ಪಂದ್ಯದ ನಂತರ ದಿನೇಶ್ ಕಾರ್ತಿಕ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ಮತ್ತೆ 2 ಅಂಕಗಳೊಂದಿಗೆ ಮನೆಗೆ ಮರಳುತ್ತಿದ್ದೇವೆ,” ಎಂದು ಹಾರ್ಟ್‌, ಫೈರ್ ಸಿಂಬಲ್ ಹಾಕಿಕೊಂಡು ಗಮನ ಸೆಳದರು.

ಆ ಪೋಸ್ಟ್‌ನಲ್ಲಿ ನಾಯಕ ರಜತ್ ಪಾಟಿದಾರ್, ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಟಿಮ್ ಡೇವಿಡ್ ಮತ್ತು ಆರ್‌ಸಿಬಿ ಆಟಗಾರರ ಗುಂಪಿನ ಫೋಟೋಗಳಿದ್ದವು. ಆದರೆ, ಅದರಲ್ಲಿ ಕೃನಾಲ್ ಪಾಂಡ್ಯ ಅವರ ಮಾರಕ ಬೌಲಿಂಗ್ ಪ್ರದರ್ಶನದ ಬಗ್ಗೆ ಎಲ್ಲಿಯೂ ಇರಲಿಲ್ಲ. ಇದನ್ನು ಕಂಡು ಕೃನಾಲ್ ಪಾಂಡ್ಯ ಅವರು, “ಬ್ರೋ ಬೌಲರ್‌ಗಳ ಬಗ್ಗೆ ಯಾವುದೇ ಪೋಸ್ಟ್ ಇಲ್ವಾ?,” ಎಂದು ಕಾಮೆಂಟ್‌ ಸೆಕ್ಸನ್‌ನಲ್ಲಿ ಪ್ರಶ್ನಿಸಿದ್ದಾರೆ. ಅತಿ ಕಡಿಮೆ ರನ್ ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ ತಮ್ಮನ್ನು ಗುರುತಿಸದಿದ್ದಕ್ಕೆ ಕೃನಾಲ್ ಈ ರೀತಿ ತಮಾಷೆಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ತಮಾಷೆಯ ಘಟನೆಗಳು ಆಟಗಾರರು ಹಾಗೂ ಮೆಂಟರ್ ನಡುವಿನ ಆಳವಾದ ಬಾಂಧವ್ಯವನ್ನು ಎತ್ತಿತೋರಿಸುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/krunal-pandya-playfully-questions-dinesh-karthik-over-missing-bowling-photo-after-rcb-win-vs-mi-450337.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo