
International
oi-Malathesha M
ಇರಾನ್ ಮೇಲೆ ಮುಗಿಬಿದ್ದು ದಾಳಿ ಮಾಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಭಾರಿ ದೊಡ್ಡ ಹಾನಿ ಮಾಡುತ್ತಿದ್ದು, ನೋಡ ನೋಡುತ್ತಲೇ ಇಬ್ಬರ ನಡುವಿನ ವಾರ್ ಇಡೀ ಜಗತ್ತನ್ನು ಆರ್ಥಿಕವಾಗಿ ಬೀದಿಗೆ ಬೀಳುವಂತೆ ಮಾಡುತ್ತಿದೆ. ಈಗಾಗಲೇ, ಭಾರತ ಸೇರಿದಂತೆ ದೊಡ್ಡ ದೊಡ್ಡ ದೇಶಗಳ ಷೇರು ಮಾರುಕಟ್ಟೆಗಳು ಪರದಾಡಿ ಹೋಗಿದ್ದು ಹೂಡಿಕೆದಾರರಿಗೆ ಭಯ ಶುರುವಾಗಿದೆ. ಇಂತಹ ಸಮಯದಲ್ಲೇ ತೈಲ ಎಂದರೆ ಪೆಟ್ರೋಲ್ ಹಾಗೂ ಡೀಸೆಲ್ ಸಿಗದೆ ಜಗತ್ತಿನ ಬಹುತೇಕ ದೇಶಗಳು ಪರದಾಡುತ್ತಿವೆ. ಈ ಸಮಯದಲ್ಲೇ ಭಾರತಕ್ಕೆ ಕೂಡ ತೈಲ ಸಮಸ್ಯೆ ಎದುರಾಗುವ ಅಪಾಯ ಇತ್ತು, ಆದರೆ ಈ ವಿಚಾರದಲ್ಲಿ ಪಕ್ಕಾ ಪ್ಲಾನ್ ಮಾಡಿದ್ದ ಭಾರತ ರಷ್ಯಾ ಮೂಲಕ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಆಮದನ್ನು ಮಾಡಿಕೊಂಡಿದೆ.
ಅಮೆರಿಕ ಹಾಗೂ ಇರಾನ್ ನಡುವೆ ನೇರ ಯುದ್ಧ ಶುರುವಾಗಿ, ಈ ವಿಚಾರದಲ್ಲಿ ಇಸ್ರೇಲ್ ಕೂಡ ಸಾಥ್ ಕೊಟ್ಟು ಹತ್ತಿರ ಹತ್ತಿರ 2 ವಾರ ತುಂಬುತ್ತಿದೆ. ಮೊದಲನೇ ದಿನವೇ ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ಮಾಡಿದ್ದ ಇಸ್ರೇಲ್ ಸೇನೆ, ಇಡೀ ಇರಾನ್ ದೇಶ ಅಮೆರಿಕ ಹಾಗು ಇಸ್ರೇಲ್ ಎದುರು ಶರಣಾಗಿ ಕ್ಷಮೆ ಕೇಳುವ ನಿರೀಕ್ಷೆಯಲ್ಲಿ ಇತ್ತು. ಆದರೆ ತಮ್ಮ ದೇಶದ ಸರ್ವೋಚ್ಛ ನಾಯಕನ ಹತ್ಯೆ ಮಾಡಿದ್ದು ತಪ್ಪು ಎಂದು ಇರಾನ್ ಕೂಡ ಮರುದಾಳಿ ಆರಂಭ ಮಾಡಿತ್ತು. ಹೀಗಾಗಿ ನೋಡ ನೋಡುತ್ತಾ ಇಡೀ ಮಧ್ಯಪ್ರಾಚ್ಯ ಕೊತ ಕೊತ ಕುದಿಯುತ್ತಿದೆ. ಅದರಲ್ಲೂ ಇರಾನ್ ನಡೆಸುತ್ತಿರುವ ದಾಳಿ ಪರಿಣಾಮವಾಗಿ ಈಗ ಅರಬ್ ದೇಶಗಳು ಅಲ್ಲಾಡಿ ಹೋಗಿದ್ದು, ಲಕ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಹೀಗೆ ಇದ್ದರೂ ಭಾರತ ಮಾತ್ರ ಭರ್ಜರಿಯಾಗಿ ಲಾಭ ಮಾಡುತ್ತಿದ್ದು, ರಷ್ಯಾ ಸಾಥ್ ನೀಡಿದೆ.

ರಷ್ಯಾ ಜೊತೆಗೆ ಮತ್ತೆ ತೈಲ ಒಪ್ಪಂದ
ಮಧ್ಯಪ್ರಾಚ್ಯ ಮೂಲಕ ಭಾರತ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿತ್ತು, ಆದರೆ ಈ ಸಮಯದಲ್ಲಿ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣಕ್ಕೆ ಭಾರತಕ್ಕೆ ಅರಬ್ ದೇಶಗಳಿಂದಲೂ ತೈಲ ಬರುತ್ತಿಲ್ಲ. ಮತ್ತೊಂದು ಕಡೆ ಕಳೆದ ತಿಂಗಳು ಅಮೆರಿಕ ಕಿರಿಕ್ ಮಾಡಿದ್ದ ಕಾರಣಕ್ಕೆ ರಷ್ಯಾದ ಮೂಲಕ ಖರೀದಿ ಮಾಡುತ್ತಿದ್ದ ತೈಲವನ್ನು ಕೂಡ ಭಾರತ ನಿಲ್ಲಿಸಿತ್ತು. ಆದರೆ ಇದೀಗ ಅಮೆರಿಕಗೆ ಸೆಡ್ಡು ಹೊಡೆದು ಭಾರತ ನೇರವಾಗಿ ರಷ್ಯಾ ಜೊತೆಗೆ ತೈಲ ಖರೀದಿ ಶುರು ಮಾಡಿದೆ. ಈ ಮೂಲಕ, ಭಾರತ ಮೂಲದ ತೈಲ ಶುದ್ಧೀಕರಣ ಕಂಪನಿಗಳು ಈಗ ಸುಮಾರು 30 ಮಿಲಿಯನ್ ಬ್ಯಾರಲ್ ರಷ್ಯಾ ತೈಲವನ್ನು ಖರೀದಿಸಿವೆ ಎನ್ನಲಾಗಿದೆ. ಮಧ್ಯಪ್ರಾಚ್ಯ ಮೂಲಕ ಬರುತ್ತಿದ್ದ ತೈಲ ಸರಬರಾಜಿನಲ್ಲಿ ಉಂಟಾದ ಕೊರತೆ ನಿಭಾಯಿಸಲು ಈ ಖರೀದಿ ನೆರವಾಗುತ್ತಿದೆ.
ಭಾರತೀಯರಿಗೆ ಭರ್ಜರಿ ಲಾಭ!
ಮಧ್ಯಪ್ರಾಚ್ಯ ಪ್ರಮುಖ ತೈಲ ಉತ್ಪಾದಕ ಪ್ರದೇಶವಾಗಿದ್ದು, ಪ್ರಮುಖ ಮಾರ್ಗ ಹೋರ್ಮುಜ್ ಜಲಸಂಧಿ ಮೂಲಕ ಅರಬ್ ದೇಶಗಳು ತೈಲ ಸರಬರಾಜು ಮಾಡುತ್ತಾ ಬಂದಿದ್ದವು. ಆದರೆ ಅಮೆರಿಕ & ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಈ ಜಲಸಂಧಿ ದಿಢೀರ್ ಬಂದ್ ಆಗಿದೆ. ಹೀಗಾಗಿಯೆ ಭಾರಿ ದೊಡ್ಡ ಸಮಸ್ಯೆ ಉಂಟಾಗುತ್ತಿದ್ದು, ಭಾರತಕ್ಕೆ ಕೂಡ ತೈಲ ಕೊರತೆ ಎದುರಾಗಿತ್ತು. ಆದರೆ ಭಾರತದ ಅಧಿಕಾರಿಗಳು ಕೇಂದ್ರ ಸರ್ಕಾರದ ಆದೇಶದಂತೆ ರಷ್ಯಾ ಜೊತೆಗೆ ಚರ್ಚೆ ನಡೆಸಿ ಭಾರಿ ಪ್ರಮಾಣದಲ್ಲೇ ತೈಲ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಅತ್ಯಂತ ಸೂಕ್ಷ್ಮ ಸಮಯದಲ್ಲಿ ರಷ್ಯಾ ದೇಶ ಮತ್ತೊಮ್ಮೆ ಭಾರತದ ಸಹಾಯಕ್ಕೆ ಬಂದಿದ್ದು, ಇದರಿಂದ ದೊಡ್ಡ ಮಟ್ಟದಲ್ಲಿ ಭಾರತೀಯರಿಗೆ ಕೂಡ ಲಾಭವಾಗ್ತಾ ಇದೆ. ಇಲ್ಲವಾದರೆ ಭಾರತದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಬೆಲೆ ಏರಿಕೆ ಕಾಣುತ್ತಿತ್ತು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-the-iran-and-this-is-how-the-russian-oil-is-helping-india-now-446675.html. xn--babytilbehr-pgb.com does not claim ownership of this content. All rights remain with the original publisher.
