ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದ ಉಕ್ರೇನ್ | Ukraine And Russia | Ukraine And Russia Issue Will Affect On The Paralympics For This Reason At Present Situation

International

-Malathesha M

ಉಕ್ರೇನ್ ಈಗ ರೊಚ್ಚಿಗೆದ್ದು, ರಷ್ಯಾ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದು ಕೂತಿದೆ. ತಮ್ಮ ಮೇಲೆ ಈ ರೀತಿ ಘೋರವಾಗಿ ದಾಳಿ ಮಾಡುತ್ತಿರುವ ರಷ್ಯಾಗೆ ಹೇಗಾದರೂ ಮಾಡಿ ಸೂಕ್ತ ಪಾಠ ಕಲಿಸಬೇಕು, ಆ ಮೂಲಕ ರಿವೇಂಜ್ ತೆಗೆದುಕೊಳ್ಳಬೇಕು ಎಂಬುದು ಉಕ್ರೇನ್ ಪ್ಲಾನ್. ಆದರೆ ಪದೇ ಪದೇ ಉಕ್ರೇನ್‌ನ ಈ ಪ್ಲಾನ್ ಕೈಕೊಡುತ್ತಿದೆ. ಇಷ್ಟೆಲ್ಲದರ ನಡುವೆ ಒತ್ತಡದ ಪರಿಣಾಮ ರಷ್ಯಾ ಜೊತೆಗೆ ಹಲವು ಕಡೆ, ವೇದಿಕೆ ಹಂಚಿಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಿತ್ತು. ಆದರೆ ಇದೀಗ ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದೆ ಉಕ್ರೇನ್.

ರಷ್ಯಾ ಕೈಯಿಂದ ಯುದ್ಧದಲ್ಲಿ ಪೆಟ್ಟು ತಿಂದು ಒದ್ದಾಡುತ್ತಿರುವ, ಯುದ್ಧಪೀಡಿತ ಉಕ್ರೇನ್‌ ದೇಶದ ಕ್ರೀಡಾ ಸಚಿವ ಮತ್‌ವೀ ಬಿಡ್ನಿ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಈಗ ಕೆಲವು ರಷ್ಯಾ ಮತ್ತು ಬೆಲಾರಸ್ ಕ್ರೀಡಾಪಟು ಭಾಗವಹಿಸುವಿಕೆ ವಿರೋಧಿಸಿ, ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಉಕ್ರೇನ್ ಭಾಗವಹಿಸಲ್ಲ ಎಂದು ಘೋಷಿಸಿದ್ದಾರೆ. ಮುಂದಿನ ತಿಂಗಳು ಎಂದರೆ ಮಾರ್ಚ್ 6 ರಿಂದ ಇಟಲಿಯಲ್ಲಿ ಶುರುವಾಗುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಮಾರ್ಚ್ 15 ತನಕ ನಡೆಯಲಿದೆ. ಹೀಗಿದ್ದಾಗ ದಿಢೀರ್ ಇಂದು ಉಕ್ರೇನ್ ತನ್ನ ನಿರ್ಧಾರ ಪ್ರಕಟಿಸಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗೇ ಈ ನಿರ್ಧಾರದ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಉಕ್ರೇನ್.

Ukraine And Russia

ಉದ್ಘಾಟನಾ ಸಮಾರಂಭಕ್ಕೂ ಹಾಜರ್ ಆಗಲ್ಲ!

ರಷ್ಯಾ & ಬೆಲಾರಸ್ ದೇಶಗಳ ಕ್ರೀಡಾಪಟುಗಳನ್ನು ರಾಷ್ಟ್ರೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸರಿಯಲ್ಲ. ಪ್ಯಾರಾಲಿಂಪಿಕ್ಸ್ ಆಯೋಜಕರ ಈ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನ್ ಅಧಿಕಾರಿಗಳು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಹಾಜರಾಗಲ್ಲ ಎಂದು ಕೂಡ ಉಕ್ರೇನ್‌ ದೇಶದ ಕ್ರೀಡಾ ಸಚಿವ ಮತ್‌ವೀ ಬಿಡ್ನಿ ಇದೀಗ ಮಾಹಿತಿ ನೀಡಿದ್ದಾರೆ. ಈ ಮೂಲಕ ರಷ್ಯಾ ಹಾಗೂ ಉಕ್ರೇನ್ ಯುದ್ಧ ಇದೀಗ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಮೇಲೆ ಕೂಡ ದೊಡ್ಡದಾದ ಪರಿಣಾಮ ಬೀರಿದೆ. ಉದ್ಘಾಟನಾ ಸಮಾರಂಭ ಸೇರಿದಂತೆ ಕ್ರೀಡಾಕೂಟದ ಎಲ್ಲಾ ಹಂತವನ್ನೂ ಉಕ್ರೇನ್ ಬಹಿಷ್ಕರಿಸಿ ಹೊರ ನಡೆದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/ukraine-and-russia-issue-will-affect-on-the-paralympics-for-this-reason-at-present-situation-011-444245.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo