ಶಾಸಕರ ಪ್ರಶ್ನೆಗೆ ಉತ್ತರ ಕೊಡಲು ಸಚಿವರ ನಿರಾಸಕ್ತಿ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ | Karnataka Assembly Speaker | Karnataka Assembly Speaker UT Khader Name Is On Trend For This Biggest Reason At Present Situation

Karnataka

-Malathesha M

ಕರ್ನಾಟಕ ನಮ್ಮ ದೇಶದಲ್ಲೇ ಅತ್ಯಂತ ಶ್ರೀಮಂತ ರಾಜ್ಯಗಳ ಪೈಕಿ ಒಂದಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ಆದಾಯ ಸೃಷ್ಟಿಸುವ ರಾಜ್ಯವಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ರಾಜಕೀಯ ಹಾಗೂ ವಿಧಾಸಭೆ ಕಲಾಪಗಳ ಬಗ್ಗೆ ಇಡೀ ದೇಶ ಗಮನ ಇಡುತ್ತದೆ. ಹೀಗಿದ್ದಾಗ ಕರ್ನಾಟಕ ವಿಧಾನಸಭೆ ದೊಡ್ಡ ಇತಿಹಾಸ ಹೊಂದಿದ್ದು, ಹೀಗಿದ್ದಾಗ ಕರ್ನಾಟಕದ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಘಟನೆ ಸಂಭವಿಸಿದೆ. ಸಭಾಧ್ಯಕ್ಷರಿಂದಲೇ ದಿಢೀರ್ ಸಭಾತ್ಯಾಗ ನಡೆದಿರುವುದು ಇದೀಗ ಗಮನ ಸೆಳೆದಿದೆ. ಹಾಗಾದರೆ ಸಭಾಧ್ಯಕ್ಷರು ದಿಢೀರ್ ಸಭಾತ್ಯಾಗ ಮಾಡಿದ್ದು ಏಕೆ? ಬನ್ನಿ ತಿಳಿಯೋಣ.

ಅಂದಹಾಗೆ ಕರ್ನಾಟಕದಲ್ಲಿ ಇದೀಗ ಆಯವ್ಯಯ ಎಂದರೆ ವಾರ್ಷಿಕ ಬಜೆಟ್ ಕುರಿತು ಅಧಿವೇಶನವನ್ನ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಶಾಸಕರು ಪ್ರಶ್ನೆಗಳನ್ನ ಮುಂದಿಡುತ್ತಿದ್ದಾರೆ. ಆದರೆ ವಿಧಾನಸಭೆಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಚಿವರು & ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣಕ್ಕೆ ದಿಢೀರ್ ವಿಧಾನಸಭೆ ಸಭಾಧ್ಯಕ್ಷರು ಕೋಪಗೊಂಡಿದ್ದಾರೆ. ಅಲ್ಲದೆ ಸಚಿವರು & ಅಧಿಕಾರಿಗಳ ವರ್ತನೆಯ ಕಾರಣ ಬೇಸರಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಾವೇ ಸಭಾತ್ಯಾಗ ಮಾಡಿ ಕಲಾಪ ಮುಂದೂಡಿಕೆ ಮಾಡಿದರು. ಈ ಮೂಲಕ ಕರ್ನಾಟಕ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಘಟನೆಯು ನಡೆದಿದೆ.

Karnataka Assembly Speaker

230 ಪ್ರಶ್ನೆಗಳಲ್ಲಿ 80ಕ್ಕೆ ಉತ್ತರ

ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರು & ಅಧಿಕಾರಿಗಳು ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ, ಇನ್ನು ಸರ್ಕಾರ ಲಿಖಿತ ಉತ್ತರ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. ಈ ಅಧಿವೇಶನದಲ್ಲೇ ಹಲವು ಬಾರಿ ಅವರ ಸೂಚನೆ ಕಡೆಗಣಿಸಲಾಗಿದ್ದು, 230 ಪ್ರಶ್ನೆಗಳ ಪೈಕಿ ಕೇವಲ 80 ಪ್ರಶ್ನೆಗೆ ಗೃಹ ಸಚಿವರು ಉತ್ತರವನ್ನ ನೀಡಿದ್ದಾರೆ. ಇದನ್ನ ವಿರೋಧಿಸಿ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿ, ಆಕ್ರೋಶವನ್ನ ಹೊರ ಹಾಕಿದ್ದಾರೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಅತ್ತ ಸಭಾಧ್ಯಕ್ಷರು ಕೂಡ ಸಭಾತ್ಯಾಗ ಮಾಡಿದ್ದಾರೆ.

ಸ್ಪೀಕರ್ ಮನವೊಲಿಸಲು ಸಿಎಂ ಯಶಸ್ವಿ

ಯು.ಟಿ. ಖಾದರ್ ಅವರು ಕೋಪ ಮಾಡಿಕೊಂಡು ಸಭಾತ್ಯಾಗ ಮಾಡಿದ ನಂತರ, ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಮನವೊಲಿಸಲು ಮುಂದಾದರು. ಈ ಬಗ್ಗೆ ಚರ್ಚೆ ನಡೆಸಿ ಕೊನೆಗೂ, ಸ್ಪೀಕರ್ ಯು.ಟಿ. ಖಾದರ್ ಅವರ ಮನವೊಲಿಸುವಲ್ಲಿ ಕೂಡ ಸಿಎಂ ಯಶಸ್ವಿಯಾದರು. ಉತ್ತರ ನೀಡದ 4 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈಗ ನೋಟಿಸ್​ ಜಾರಿ ಮಾಡಲು ಸೂಚನೆ ನೀಡಿರುವ ಸಿಎಂ, ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ವಿಚಾರ ಸಂಬಂಧ ಇದೀಗ 3 ಅಧಿಕಾರಿಗಳನ್ನ ಅಮಾನತು ಮಾಡಿ ಗೇಟ್‌ಪಾಸ್ ಕೂಡ ನೀಡಲಾಗಿದ್ದು, ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಹಾಗೇ ಇನ್ನೊಂದು ಕಡೆ ವಿರೋಧ ಪಕ್ಷಗಳು ಇದೇ ಅಸ್ತ್ರವನ್ನು ಸರ್ಕಾರದ ವಿರುದ್ಧ ಪ್ರಯೋಗಿಸಲು ಸಜ್ಜಾಗಿದ್ದು, ಅಧಿವೇಶನ ಮುಂದಿನ ದಿನಗಳಲ್ಲಿ ಮತ್ತಷ್ಟು ತಿಕ್ಕಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-assembly-speaker-ut-khader-name-is-on-trend-for-this-biggest-reason-at-present-situation-011-447335.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo