ಶ್ರೀ ಕೃಷ್ಣನ ಪರೀಕ್ಷೆ: ಧರ್ಮರಾಯನ ಗುಣಗಳಿಂದ ಕಲಿಯುವ ಜೀವನ ಪಾಠ: ವಿಶ್ವನಾಥ್ ಬಿ ಬರಹ | Sri Krishna Test: Life Lessons to Learn from Dharmaraya’s Positive Mindset and Power of Perception

Karnataka

oi-Shiddalingesh S

ಮಾನವನ ದೃಷ್ಟಿಕೋನವೇ ಅವನ ಜಗತ್ತನ್ನು ರೂಪಿಸುತ್ತದೆ ಎಂಬುದನ್ನು ಮಹಾಭಾರತದ ಈ ಪ್ರಸಂಗವು ಸರಳವಾಗಿ ಹೇಳುತ್ತದೆ. ಶ್ರೀ ಕೃಷ್ಣನು ಮಾಡಿದ ಸಣ್ಣ ಪರೀಕ್ಷೆಯ ಮೂಲಕ ದುರ್ಯೋಧನ ಮತ್ತು ಧರ್ಮರಾಯನ ಮನಸ್ಥಿತಿಯ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಒಬ್ಬನು ಜಗತ್ತಿನಲ್ಲೆಲ್ಲ ಕೆಡುಕನ್ನು ಕಂಡರೆ, ಮತ್ತೊಬ್ಬನು ಪ್ರತಿಯೊಬ್ಬರಲ್ಲೂ ಒಳ್ಳೆಯತನವನ್ನು ಕಾಣುತ್ತಾನೆ. ಈ ಕಥೆ ನಮ್ಮ ಮನಸ್ಸಿನ ಶುದ್ಧತೆ ಮತ್ತು ದೃಷ್ಟಿಯ ಮಹತ್ವವನ್ನು ತಿಳಿಸುತ್ತದೆ.(ಬರಹ: ವಿಶ್ವನಾಥ್ ಬಿ.)

ಶ್ರೀ ಕೃಷ್ಣನು ದುರ್ಯೋಧನ ಹಾಗೂ ಧರ್ಮರಾಯನ್ನು ಒಮ್ಮೆ ಪರೀಕ್ಷಿಸಲು ನಿರ್ಧರಿಸಿದ. ಇಬ್ಬರೂ ಒಂದೊಂದು ಟಾಸ್ಕ್‌ ಕೊಟ್ಟ. ಈ ಜಗತ್ತಿನಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಹುಡುಕಿಕೊಂಡು ಬಾ ಅಂತ ದುರ್ಯೋಧನನಿಗೆ ಹೇಳಿದ. ಅದರಂತೆ, ಈ ಜಗತ್ತಿನಲ್ಲಿ ಒಬ್ಬ ಕೆಟ್ಟ ವ್ಯಕ್ತಿಯನ್ನು ಹುಡುಕಿ ಬಾ ಎಂದು ಧರ್ಮರಾಯನಿಗೆ ಹೇಳಿದ.

Sri Krishna Test

ಇಬ್ಬರೂ ಅಲ್ಲಿಂದ‌ ಹೊರಟರು. ತಮಗೆ ನೀಡಿದ ಟಾಸ್ಕ್ ಮುಗಿಸಿಕೊಂಡು ಬಂದು ತಾವು ಕಂಡಿದ್ದನ್ನು ಹೇಳಲು ಮುಂದೆ ಬಂದರು.‌ ಮೊದಲಿಗೆ ದುರ್ಯೋದನನ ಸರದಿ. ಪ್ರಭು ನನಗೆ ಯಾರೂ ಒಳ್ಳೆಯವರು ಕಾಣಲಿಲ್ಲ. ಎಲ್ಲರೂ ಕೆಟ್ಟವರೇ. ಈ ಜಗತ್ತೇ ಕೆಟ್ಟತನದಿಂದ ತುಂಬಿದೆ ಎಂದ. ಅವನು ಎಲ್ಲ ಕಡೆಗೆ ಹುಡುಕಿದರೂ ಒಬ್ಬರೂ ಒಳ್ಳೆಯವರು ಕಾಣಿಸಿರಲಿಲ್ಲ.

ಮುಂದಿನ ಸರದಿ ಧರ್ಮರಾಯನದು. ಕೃಷ್ಣಾ, ಪ್ರತಿಯೊಬ್ಬರಲ್ಲೂ ಯಾವುದೇ ಒಂದು ಒಳ್ಳೆಯ ಗುಣವಿದೆ. ಹೀಗಾಗಿ ನನಗೆ ಯಾರೂ ಸಹ ಕೆಟ್ಟವರಾಗಿ ಕಾಣಿಸಲಿಲ್ಲ ಎಂದನು. ಎಲ್ಲ‌ ಹುಡುಕಿದರೂ ಧರ್ಮರಾಯನಿಗೆ ಒಬ್ಬರೂ ಕೆಟ್ಟವರು ಕಾಣಿಸಲಿಲ್ಲ.

Sri Krishna Test

ಶ್ರೀ ಕೃಷ್ಣ ಮುಗುಳುನಗೆ ನಕ್ಕು ಸುಮ್ಮನಾಗುತ್ತಾನೆ.

ಇದರ ತಾತ್ಪರ್ಯವನ್ನು ಈಗಾಗಲೇ ಅನೇಕ ಸಂತರು, ಜ್ಞಾನಿಗಳು ವಿವರಿಸಿದ್ದಾರೆ.

ದುರ್ಯೋಧನನ ಮನಸ್ಸು ದೋಷಗಳಿಂದ ತುಂಬಿತ್ತು. ಹೀಗಾಗಿ ಆತನಿಗೆ ಎಲ್ಲರಲ್ಲೂ ದೋಷಗಳೇ ಕಾಣಿಸಿತು. ಯಾರೂ ಸಹ ಒಳ್ಳೆಯವರು ಕಾಣಿಸಲೇ ಇಲ್ಲ.

ಧರ್ಮರಾಯನ ಮನಸ್ಸು ಸದ್ಗುಣಗಳಿಂದ ತುಂಬಿತ್ತು. ಹೀಗಾಗಿ ಆತನಿಗೆ ಎಲ್ಲರಲ್ಲೂ ಒಳ್ಳೆಯ ಗುಣಗಳೇ ಕಾಣಿಸಿದವು. ಎಲ್ಲರೂ ಒಳ್ಳೆಯವರೇ ಅನಿಸಿದರು.

ನಾವು ಹೇಗಿದ್ದೇವೆಯೋ ಹಾಗೆಯೇ ನಮಗೆ ಜಗತ್ತು ಕಾಣಿಸುತ್ತದೆ. ನಮ್ಮ‌ ಮನಸ್ಸೇ ನಮ್ಮ ಜಗತ್ತನ್ನು ರೂಪಿಸುವುದು. ಇದನ್ನು ಮನಃಶಾಸ್ತ್ರವೂ ಸಹ ಒಪ್ಪಿದೆ.

ನಮ್ಮ ಕಣ್ಣಿಗೆ ಎಲ್ಲರೂ ಕೆಟ್ವವರಾಗಿ ಕಂಡರೆ, ಅದು ಅವರ ತಪ್ಪಲ್ಲ. ನಮ್ಮೊಳಗಿನ ಅಂತಃಕರಣ ಶುದ್ದವಾಗಿಲ್ಲ ಎಂದರ್ಥ. ಮನಸ್ಸಿನ ಶುದ್ದೀಕರಣವೇ ಎಲ್ಲದಕೂ ಪರಿಹಾರ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/sri-krishna-test-life-lessons-to-learn-from-dharmaraya-s-positive-mindset-and-power-of-perception-448425.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo