
India
oi-Shankrappa Parangi
Stock Market Crash Today: ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಪ್ರಭಾವವು ಇಂದು ಸೋಮವಾರ (ಮಾ.23) ಷೇರು ಪೇಟೆಯ ಮೇಲೆ ಉಂಟಾಗಿದೆ. ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಉದ್ವಿಗ್ನತೆ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ನೆಗಟಿವ್ ಟ್ರೆಂಡ್ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ತೀವ್ರವಾಗಿ ಕುಸಿತ ಕಂಡಿವೆ.
ಎಂದಿನಂತೆ 9.30ಕ್ಕೆ ಷೇರು ಪೇಟೆ ತೆರೆಯಿತು. ಬೆಳಗ್ಗೆ 10:29 ಗಂಟೆ ಹೊತ್ತಿಗೆ ಎಸ್ ಆಂಡ್ ಪಿ ಬಿಎಸ್ಐ ಸೆನ್ಸೆಕ್ಸ್ 1,822.25 ಪಾಯಿಂಟ್ಳ ಕುಸಿತದೊಂದಿಗೆ 72,710.71ಕ್ಕೆ ತಲುಪಿತು. ಎನ್ಎಸ್ಐ ನಿಫ್ಟಿ 50 533.30 ಪಾಯಿಂಟ್ಗಳ ಕುಸಿತದೊಂದಿಗೆ 22,581.20 ಕ್ಕೆ ಮುಟ್ಟಿದೆ. ಎರಡೂ ಸೂಚ್ಯಂಕಗಳು ಶೇಕಡಾ 2.4ಕ್ಕಿಂತ ಹೆಚ್ಚು ಇಳಿಕೆ ಆಗಿದೆ. ಇದು ಮಾರುಕಟ್ಟೆಯಲ್ಲಿ ಇಂದಿನ ವ್ಯಾಪಕ ಮಾರಾಟದ ಪ್ರತಿಬಿಂಬವಾಗಿದೆ.

ಷೇರುಗಳ ಮಾರಾಟದ ಪರಿಣಾಮವಾಗಿ, ಬಿಎಸ್ಇ ಮಾರುಕಟ್ಟೆ ಬಂಡವಾಳೀಕರಣವು ಗಣನೀಯವಾಗಿ ಕುಸಿದಿದೆ, ಹೂಡಿಕೆದಾರರು ಒಟ್ಟು ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ವರದಿ ಆಗಿದೆ.
ಇಂದು ಪ್ರಮುಖ ಷೇರುಗಳ ಪೈಕಿ HDFC ಬ್ಯಾಂಕ್ ಶೇ.2.43, ICICI ಬ್ಯಾಂಕ್ ಶೇ. 1.37ರಷ್ಟು ಮತ್ತು ಎಕ್ಸಿಸ್ ಬ್ಯಾಂಕ್ ಶೇ.1.80ರಷ್ಟು ಕುಸಿತ ಕಂಡಿವೆ. ಐಟಿ ಷೇರುಗಳು ಕುಸಿತದ ಒತ್ತಡ ಎದುರಿಸುತ್ತಿವೆ. ಇನ್ಫೋಸಿಸ್ ಶೇ.0.72ರಷ್ಟು ಹಾಗೂ ಟಿಸಿಎಸ್ ಷೇರುಗಳಲ್ಲಿ ಶೇ. 0.28ರಷ್ಟು ಇಳಿಕೆ ಆಗಿವೆ.
ಆಟೋ ಮತ್ತು ಬಳಕೆ ಷೇರುಗಳಲ್ಲಿಯೂ ಭಾರಿ ಮಾರಾಟ ಕಂಡುಬಂದಿದೆ. ಮಾರುತಿ ಸುಜುಕಿ ಶೇ.1.15ರಷ್ಟು, ಟೈಟಾನ್ ಶೇ.2.53 ಮತ್ತು ಏಷ್ಯನ್ ಪೇಂಟ್ಸ್ ಷೇರಿನಲ್ಲಿ ಶೇ.1.39ರಷ್ಟು ಕುಸಿತ ಕಂಡಿವೆ ಎಂದು ವರದಿ ಆಗಿದೆ.
ಷೇರು ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕಾ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಹಾಗೆ ಕಾಣುತ್ತಿಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳು ಜಾಗತಿಕ ಮಾರುಕಟ್ಟೆಗಳನ್ನು ಸಂಕಷ್ಟಕ್ಕೆ ತಳ್ಳಿವೆ. ಅದರಲ್ಲೂ ವಿಶೇಷವಾಗಿ ಜಾಗತಿಕ ತೈಲ ಪೂರೈಕೆಗೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಯುದ್ಧದ ಪ್ರಮುಖ ಕೇಂದ್ರ ಬಿಂದುವೇ ಆಗಿಬಿಟ್ಟಿದೆ.
ಯುದ್ಧದ ಉದ್ವಿಘ್ನತೆ ಹಾಗೂ ಅದರ ಸುತ್ತಲಿನ ಅನಿಶ್ಚಿತತೆಯು ಜಾಗತಿಕವಾಗಿ ಅಪಾಯ ತಂದೊಡ್ಡುತ್ತಿದ್ದೆ. ಯುದ್ಧನಿರತ ರಾಷ್ಟ್ರಗಳ ಜೊತೆಗೆ ಇತರ ದೇಶಗಳ ಮೇಲೆ, ಷೇರು ಮಾರುಕಟ್ಟೆ ಮೇಲೆ ನಿರಂತರ ಪರಿಣಾಮ ಬೀರುತ್ತಿದೆ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ.ಕೆ. ವಿಜಯಕುಮಾರ್ ಹೇಳಿದರು.
ಇರಾನ್, ಇಸ್ರೇಲ್ -ಅಮೆರಿಕಾ ನಡುವಿನ ಸಂಘರ್ಷ ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಯುಎಸ್ ಅಧ್ಯಕ್ಷ ಟ್ರಂಪ್ ಮುಂದಿನ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಇರಾನ್ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ತೈಲ ಪೂರೈಕೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಕ್ರೂಡ್ ಆಯಿಲ್ ಬೆಲೆ ಏರಿಕೆಯಿಂದ ಒತ್ತಡ
ಮಾರುಕಟ್ಟೆ ಕುಸಿತಕ್ಕೆ ಕಚ್ಚಾ ತೈಲ ಬೆಲೆ ಏರಿಕೆಯು ಷೇರು ಪೇಟೆ ಮೇಲೆ ವ್ಯತಿರಿಕ್ತ ಪ್ರಮುಖ ಉಂಟಾಗಲು ಕಾರಣ ಎನ್ನಲಾಗಿದೆ. ಇಂದಿನ ವಹಿವಾಟಿನ ಪ್ರಕಾರ, ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ಗೆ ಶೇ. 0.67ರಷ್ಟು ಏರಿಕೆಯಾಗಿದ್ದು, 112.94 ಕ್ಕೆ ಮಾರಾಟವಾಗಿದೆ. ಡಬ್ಲುಟಿಐ ಕಚ್ಚಾ ತೈಲ ಬ್ಯಾರೆಲ್ಗೆ ಶೇ.1.02ರಷ್ಟು ಹೆಚ್ಚಾಗಿ 99.23 ಕ್ಕೆ ತಲುಪಿದೆ. ಸಂಘರ್ಷದಿಂದ ಈ ತಿಂಗಳ ತೈಲ ಬೆಲೆಗಳು ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಪ್ರಸ್ತುತ ಬಿಕ್ಕಟ್ಟು 1970ರ ನಂತರ ಕಂಡು ಬಂದ ಕೆಟ್ಟ ಪರಿಸ್ಥಿತಿ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಹೇಳಿದೆ.
-

Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
-

Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ
-

ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್
-

Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
-

‘ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ’: ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್
-

ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ
-

Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ
-

SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ
-

March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ
-

ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: ‘ಬೇಬಿ ಡಾಲ್’ ಡ್ಯಾನ್ಸ್ ವಿಡಿಯೋ ಸಖತ್ Viral
-

Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ
-

India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ
-

ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: ‘ರಾಮಾಯಣ ಪರೀಕ್ಷೆ’ ಬರೆದು 50 ಸಾವಿರ ರೂ. ನಗದು ಗೆಲ್ಲಿ
-

Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ
-

Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/stock-market-crash-today-march-23-sensex-drops-1-800-points-investors-lose-rs-10-lakh-crore-448029.html. xn--babytilbehr-pgb.com does not claim ownership of this content. All rights remain with the original publisher.
