ಅದಾನಿ ಫೌಂಡೇಶನ್ ಮಹತ್ವದ ಕಾರ್ಯ, 10 ಲಕ್ಷ ಮಹಿಳಾ ಉದ್ಯಮಿಗಳನ್ನು ಬೆಳೆಸುವ ಗುರಿ | Swabhimaan Programme | Swabhimaan Programme Expansion to Empower 10 Lakh Women Entrepreneurs Across India

Business

-Malathesha M

ಅದಾನಿ ಫೌಂಡೇಶನ್ ವತಿಯಿಂದ ಮಹಿಳಾ ಸಬಲೀಕರಣಕ್ಕೆ ನಡೆಸುತ್ತಿರುವ ಸ್ವಾಭಿಮಾನ ಕಾರ್ಯಕ್ರಮ, ಇದೀಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದಾಗಿ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮ ಭಾರತದಲ್ಲಿ 10 ಲಕ್ಷ ಮಹಿಳಾ ಉದ್ಯಮಿಗಳ ಬೆಳೆಸುವ ಗುರಿ ಹೊಂದಿದೆ. ಮುಂಬೈ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಡೆದ “ಸ್ವಾಭಿಮಾನ – ದಿ ರೈಸ್ ಆಫ್ ಶೀ” ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಲಾಗಿತು.

ಅದಾನಿ ಫೌಂಡೇಶನ್ ವತಿಯಿಂದ ಈ ಯೋಜನೆ ಜಾರಿಗೆ ತಂದಿರುವುದರ ಮುಖ್ಯ ಉದ್ದೇಶ ಮಹಿಳೆಯರ ಜೀವನೋಪಾಯ ಬಲಪಡಿಸುವುದು. ಇದರ ಭಾಗವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ತರಬೇತಿ, ಹಣಕಾಸು ಜ್ಞಾನ ಸೇರಿದಂತೆ ಡಿಜಿಟಲ್ ಸಾಕ್ಷರತೆ ನೀಡಲಾಗುತ್ತದೆ. 2026ರ ಆಗಸ್ಟ್ 11 ರಂದು ಅದಾನಿ ಫೌಂಡೇಶನ್ 30ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸಜ್ಜಾಗಿರುವ ಹಿನ್ನೆಲೆ ಈಗ ಮಹತ್ವದ ಘೋಷಣೆ ಹೊರಡಿಸಲಾಗಿದೆ. ಕಾರ್ಯಕ್ರಮದ ಮೊದಲ ಹಂತ ಮಹಾರಾಷ್ಟ್ರದಲ್ಲಿ ಜಾರಿಗೆ ಬರಲಿದ್ದು, ಮೊದಲ ವರ್ಷದಲ್ಲೇ 1 ಲಕ್ಷ ಮಹಿಳೆಯರ ಸಬಲಗೊಳಿಸುವ ಗುರಿ ಹೊಂದಲಾಗಿದೆ. ಮಹಿಳೆಯರು ಮುನ್ನಡೆಸುವ ಸಣ್ಣ ಉದ್ಯಮ & ತಳಮಟ್ಟದ ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನ ಸೃಷ್ಟಿಸುವುದೇ ಯೋಜನೆಯ ಉದ್ದೇಶವಾಗಿದೆ.

Swabhimaan Programme

4,500ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ

ಸ್ವಾಭಿಮಾನ ಕಾರ್ಯಕ್ರಮ ಮಹಾರಾಷ್ಟ್ರ ಸರ್ಕಾರದ ಮಹಿಳಾ ಆರ್ಥಿಕ ಸಬಲೀಕರಣ & ಸ್ವಸಹಾಯ ಗುಂಪುಗಳ ಅಭಿವೃದ್ಧಿಗೆ ಸಂಬಂಧಿಸಿ ನೋಡೆಲ್ ಸಂಸ್ಥೆ ಆದ ಮಹಾರಾಷ್ಟ್ರ ಮಹಿಳಾ ಆರ್ಥಿಕ ಅಭಿವೃದ್ಧಿ ಮಹಾಮಂಡಳ (MAVIM) ಜೊತೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಮುಂಬೈನ ಹಿಂದುಳಿದ ಸಮುದಾಯಗಳ 4,500ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ, ಉದ್ಯಮ ಅಭಿವೃದ್ಧಿ ಹಾಗೂ ಹಣಕಾಸು ಅರಿವು ಮೂಲಕ ಸ್ಥಿರ ಜೀವನೋಪಾಯ ನಿರ್ಮಿಸಲು ಈ ಯೋಜನೆ ನೆರವಾಗಿದೆ.

ಕಾರ್ಯಕ್ರಮದಲ್ಲಿ ಅದಾನಿ ಫೌಂಡೇಶನ್ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಹಾಗೂ ಟ್ರಸ್ಟಿ ಶಿಲಿನ್ ಅದಾನಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆದಿತಿ ತಟ್ಕರೆ, ಮುಂಬೈ ಮೇಯರ್ ರಿತು ತಾವಡೆ ಹಾಗೂ ಮಹಾರಾಷ್ಟ್ರ ಮಹಿಳಾ ಆರ್ಥಿಕ ಅಭಿವೃದ್ಧಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕಿ ನಂದಿನಿ ಅವಡೆ ಕೂಡ ಭಾಗವಹಿಸಿದ್ದರು.

ತುರ್ತು ಸಭೆ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು, ಅದಾನಿ ಗ್ರೂಪ್ & ಅದಾನಿ ಫೌಂಡೇಶನ್ ಕೈಗೊಂಡಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು.

‘ಸ್ವತೇಜಾ ಮಾರ್ಟ್’ ಉದ್ಘಾಟನೆ

ಮುಂಬೈನ ಮಹಿಳೆಯರು ನಡೆಸುವ ಸಮುದಾಯ ಮಾರುಕಟ್ಟೆ ‘ಸ್ವತೇಜಾ ಮಾರ್ಟ್’ ಉದ್ಘಾಟನೆಯೂ ಈ ಸಮಯದಲ್ಲಿ ನೆರವೇರಿತು. ಈ ಮಾರುಕಟ್ಟೆ ಮಹಿಳಾ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರುಕಟ್ಟೆ ಪ್ರವೇಶ ಮತ್ತು ಆನ್‌ಲೈನ್ ಸೇರಿ ಆಫ್‌ಲೈನ್ ಮಾರ್ಗಗಳ ಮೂಲಕ ತಮ್ಮ ಉತ್ಪನ್ನ ಮಾರಾಟ ಮಾಡುವ ವೇದಿಕೆ ಒದಗಿಸಲಾಗುತ್ತೆ. ಸ್ವತೇಜಾ ಮಾರ್ಟ್ ಯೋಜನೆ ಅಡಿ ಕಾರ್ಯನಿರ್ವಹಿಸುವ ಕ್ಲೌಡ್ ಕಿಚನ್‌ನ್ನೂ ಇದೇ ವೇಳೆ ಪ್ರಾರಂಭಿಸಲಾಯಿತು.

ಮಹತ್ವದ ಪುಸ್ತಕ ಬಿಡುಗಡೆ

ಸ್ವಾಭಿಮಾನ ಕಾರ್ಯಕ್ರಮದಿಂದ ಜೀವನದಲ್ಲಿ ಬದಲಾವಣೆ ಕಂಡ ಮಹಿಳೆಯರ ಕಥೆಗಳನ್ನೊಳಗೊಂಡ ಕಾಫಿ ಟೇಬಲ್ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಈ ಯೋಜನೆಯ ಮೂಲಕ ಈಗಾಗಲೇ ಮುಂಬೈನಲ್ಲಿ 800ಕ್ಕೂ ಹೆಚ್ಚು ಮಹಿಳೆಯರು “ಲಖಪತಿ ದಿದಿ”ಗಳಾಗಿ ರೂಪಾಂತರಗೊಂಡಿದ್ದು, ಸಂಘಟಿತ ಜೀವನೋಪಾಯ ಹಾಗೂ ಉದ್ಯಮ ಬೆಂಬಲದಿಂದ ಕುಟುಂಬ ಆದಾಯ ಹೆಚ್ಚಿಸುವ ಸಾಧ್ಯತೆ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ.

ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆದಿತಿ ತಟ್ಕರೆ ಮಾತನಾಡಿ, ಹಣಕಾಸು ಸಾಕ್ಷರತೆ ಮತ್ತು ಉದ್ಯಮಶೀಲತಾ ಸಾಮರ್ಥ್ಯವನ್ನು ಬಲಪಡಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಈ ಕಾರ್ಯಕ್ರಮ ಪರಿಣಾಮಕಾರಿ ಮಾದರಿಯಾಗಿದೆ ಎಂದು ಹೇಳಿದರು. ಇಂತಹ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಪೂರಕವಾಗಿವೆ ಎಂದು ಅವರು ಹೇಳಿದರು.

ಮುಂಬೈ ಮೇಯರ್ ರಿತು ತಾವಡೆ, ಧಾರಾವಿ ಸೇರಿ ಮುಂಬೈನ ಹಲವೆಡೆ ಮಹಿಳೆಯರು ಉದ್ಯಮಶೀಲತೆ ಕಡೆಗೆ ಹೆಚ್ಚಾಗಿ ತೊಡಗುತ್ತಿರುವುದು ಸಮುದಾಯಗಳಲ್ಲಿ ಸ್ಪಷ್ಟ ಬದಲಾವಣೆ ತೋರಿಸುತ್ತಿದೆ ಎಂದರು. ಸ್ವಾಭಿಮಾನಂಥ ಯೋಜನೆಗಳು ಹಿಂದುಳಿದ ಮಹಿಳೆಯರಿಗೆ ಆರ್ಥಿಕ ಆತ್ಮವಿಶ್ವಾಸ ನೀಡುವ ಜೊತೆಗೆ ಉದ್ಯಮ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.

ಡಾ. ಪ್ರೀತಿ ಅದಾನಿ ಅವರು ಮಾತನಾಡಿ, ಮಹಿಳೆಯರನ್ನ ಸಬಲಗೊಳಿಸುವುದು ಸಮುದಾಯಗಳನ್ನು ಬಲಪಡಿಸಲು & ಸ್ಥಳೀಯ ಆರ್ಥಿಕತೆಯನ್ನು ಸ್ಥಿರಗೊಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದರು. ಮುಂಬೈನ ಮಹಿಳಾ ಉದ್ಯಮಿಗಳ ಯಶೋಗಾಥೆ ಸಂಘಟಿತ ಬೆಂಬಲ ವ್ಯವಸ್ಥೆಗಳ ಪರಿಣಾಮ ಸ್ಪಷ್ಟವಾಗಿ ತಿಳಿಸುತ್ತದೆ ಎಂದರು.

ಸಮೂಹ ಆಧಾರಿತ ಉದ್ಯಮ

ಈ ಯೋಜನೆ ಅಡಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಉದ್ಯಮಶೀಲತೆ, ಹಣಕಾಸು ನಿರ್ವಹಣೆ ಸೇರಿ ಜೀವನೋಪಾಯ ಕೌಶಲ್ಯದಲ್ಲಿ ತರಬೇತಿ ನೀಡಲಾಗುತ್ತೆ. ಇದರ ಜೊತೆಗೆ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ & ಉದ್ಯಮ ಅಭಿವೃದ್ಧಿಗೆ ಸಹಾಯ ಒದಗಿಸಲಾಗುತ್ತದೆ. ಈಗಾಗಲೇ ಅನೇಕ ಮಹಿಳೆಯರು ಮನೆಯಿಂದಲೇ ಸಣ್ಣ ಉದ್ಯಮಗಳನ್ನ ಆರಂಭಿಸಿದ್ದು, ಕೆಲ ಸಮೂಹ ಆಧಾರಿತ ಉದ್ಯಮಗಳನ್ನ ಕೂಡ ಆರಂಭಿಸಿ ಕುಟುಂಬ ಆದಾಯ ಹಾಗೂ ಸಮುದಾಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ.

ಅದಾನಿ ಫೌಂಡೇಶನ್ ಪ್ರಸ್ತುತ ಶಿಕ್ಷಣ, ಆರೋಗ್ಯ, ಸ್ಥಿರ ಜೀವನೋಪಾಯ, ಹವಾಮಾನ ಕ್ರಿಯಾಶೀಲತೆ ಹಾಗು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೈಗೊಳ್ಳುತ್ತಿರುವ ವಿವಿಧ ಯೋಜನೆಗಳ ಮೂಲಕ ಒಟ್ಟಾರೆ 22 ರಾಜ್ಯಗಳ 7,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸುಮಾರು 96 ಲಕ್ಷ ಜನರನ್ನು ತಲುಪುತ್ತಿದೆ.

ಸ್ವಾಭಿಮಾನ ಕಾರ್ಯಕ್ರಮದ ರಾಷ್ಟ್ರೀಯ ಮಟ್ಟದ ವಿಸ್ತರಣೆ ಮೂಲಕ ಮಹಿಳೆಯರನ್ನ ಉದ್ಯಮಿಗಳಾಗಿ ಮತ್ತು ಸಮುದಾಯ ನಾಯಕರಾಗಿ ಹಾಗೂ ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಶಕ್ತಿಯಾಗಿ ರೂಪಿಸುವ ದೇಶದ ಅತಿ ದೊಡ್ಡ ಮಹಿಳಾ ಜೀವನೋಪಾಯ ಚಳವಳಿಗಳಲ್ಲಿ ಒಂದಾಗಿ ಬೆಳೆಯುವ ಗುರಿ ಈ ಯೋಜನೆ ಹೊಂದಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/business/swabhimaan-programme-expansion-to-empower-10-lakh-women-entrepreneurs-across-india-011-446937.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo