ಅಮೆರಿಕ ಜೊತೆಗೆ ಕೊನೆಗೂ ಸಂಧಾನಕ್ಕೆ ಸಿದ್ಧವಾದ ಇರಾನ್, ಯುದ್ಧ ಭೀತಿ ನಡುವೆ ಗುಡ್ ನ್ಯೂಸ್ | US Military | US Military Sending Another Aircraft Carrier Near Iran And This Is What Iran’s New Decision

International

oi-Malathesha M

ಅಮೆರಿಕ ಯಾವುದೇ ಕ್ಷಣದಲ್ಲಿ ತನ್ನ ಸೇನೆಗೆ ಆದೇಶ ನೀಡಬಹುದು, ಅಮೆರಿಕ ಬಳಿ ಇರುವ ಎಲ್ಲಾ ಪ್ರಬಲ ಮತ್ತು ವಿನಾಶಕಾರಿ ಕ್ಷಿಪಣಿಗಳು ನೇರವಾಗಿ ಇರಾನ್‌ಗೆ ನುಗ್ಗಬಹುದು. ಇಂತಹ ವಾತಾವರಣ ನಿರ್ಮಾಣ ಆಗಿರುವ ಸಮಯದಲ್ಲಿ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು ನೆಮ್ಮದಿಯಾಗಿ ನಿದ್ದೆಯನ್ನ ಕೂಡ ಮಾಡಲು ಆಗುತ್ತಿಲ್ಲ. ಇನ್ನು ಜನರು ಕೂಡ ಚಿಂತೆಯಲ್ಲಿ ದಿನದೂಡುತ್ತಾ ಇದ್ದು, ಇರಾನ್‌ನ ಪ್ರಜೆಗಳು ಪಲಾಯನ ಮಾಡುವ ಪ್ರಯತ್ನದಲ್ಲಿ ಇದ್ದಾರೆ. ಹೀಗೆಲ್ಲಾ ಅಮೆರಿಕ ಮತ್ತು ಇರಾನ್ ತಿಕ್ಕಾಟ ತೀವ್ರ ಭೀತಿ ಕೂಡ ಹುಟ್ಟುಹಾಕಿದೆ. ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು, ಎಂಬುದೇ ಈ ಭಯಕ್ಕೆ ಕಾರಣವಾಗಿದೆ. ಆದರೆ ಇದೇ ಸಮಯದಲ್ಲಿ ದಿಢೀರ್ ಇರಾನ್ ತನ್ನ ರಾಗ ಬದಲಿಸಿದೆ.

ಇರಾನ್ ಬೆನ್ನಿಗೆ ರಷ್ಯಾ ಮತ್ತು ಚೀನಾ ದೇಶಗಳ ನಾಯಕರು ನಿಂತ ನಂತರ ಪರಿಸ್ಥಿತಿ ಬದಲಾಗಿತ್ತು. ಈ ವಿಚಾರದಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಟ್ಟಾಗಿ ನಿಂತು, ಇರಾನ್ ಮೇಲೆ ಈ ಬಾರಿ ಬೃಹತ್ ಸೇನಾ ಕಾರ್ಯಾಚರಣೆ ನಡೆಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಕಾರಣಕ್ಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್ ಎಂಬ ಅಮೆರಿಕದ ಬೃಹತ್ ಹಾಗೂ ಶಕ್ತಿಶಾಲಿ ಯುದ್ಧ ನೌಕೆ ಈಗಾಗಲೇ ಇರಾನ್ ಸಮೀಪ ಬಂದು ಬಿಡಾರ ಹೂಡಿದೆ. ಇದೇ ಸಮಯದಲ್ಲಿ ಮತ್ತೊಂದು ಯುದ್ಧ ನೌಕೆ ಇರಾನ್ ಕಡೆಗೆ ಬರುತ್ತಾ ಇದ್ದು, ಇಂತಹ ಪರಿಸ್ಥಿತಿಯಲ್ಲಿ ಇರಾನ್ ತಾನು ಶಾಂತಿ ಒಪ್ಪಂದಕ್ಕೆ ಸಿದ್ಧ ಎಂಬ ಸಂದೇಶವನ್ನ ಈಗ ರವಾನಿಸಿದೆ.

US Military

ಅಮೆರಿಕ & ಇರಾನ್ ಮಾತುಕತೆಗೆ ಜಿನೆವಾ ಸಜ್ಜು

ಅಮೆರಿಕ ಯಾವಾಗ ಘೋರ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಸಾರಿದೆಯೋ, ಆ ನಂತರ ಇರಾನ್ ಕೂಡ ಸೈಲೆಂಟ್ ಆಗಿ ದಾರಿಗೆ ಬರಲು ಸಜ್ಜಾದಂತೆ ಕಾಣುತ್ತಿದೆ. ಇದರ ಭಾಗವಾಗಿ ಇದೀಗ ದಿಢೀರ್, ತಾನು ಶಾಂತಿ ಮಾತುಕತೆ ಮಾಡಲು ಸಿದ್ಧ ಎಂದು ಇರಾನ್ ಸಚಿವರೇ ಒಪ್ಪಿಕೊಂಡಿದ್ದು, ಈ ಹಿನ್ನೆಲೆ ಅಮೆರಿಕ & ಇರಾನ್ ಮಧ್ಯೆ 2ನೇ ಸುತ್ತಿನ ಮಾತುಕತೆ ಜಿನೆವಾದಲ್ಲಿ ನಡೆಯಲಿದೆ ಎಂಬ ಮಾಹಿತಿಯು ಈಗ ಹೊರಬಿದ್ದಿದೆ. ಖುದ್ದಾಗಿ ಸ್ವಿಝರ್ಲ್ಯಾಂಡ್‍ ವಿದೇಶಾಂಗ ಸಚಿವಾಲಯ ಈ ಬಗ್ಗೆ ಮಾಹಿತಿಯನ್ನ ಈಗ ನೀಡಿದ್ದು, ಈಗಾಗಲೇ ಫೆಬ್ರವರಿ 6ಕ್ಕೆ ಒಂದು ಸುತ್ತಿನ ಮಾತುಕತೆ ಅಮೆರಿಕ & ಇರಾನ್ ಮಧ್ಯೆ ನಡೆದು ಭಾಗಶಃ ಸಕ್ಸಸ್ ಕೂಡ ಆಗಿತ್ತು.

ಒಮಾನ್ ಮಧ್ಯಸ್ಥಿಕೆಯಲ್ಲಿ ಮಹತ್ವದ ಸಭೆ

ಮತ್ತೊಂದು ಗಮನ ಸೆಳೆಯುವ ಸಂಗತಿ ಏನೆಂದರೆ, ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಈಗ ಇರಾನ್ & ಅಮೆರಿಕ ನಡುವೆ ಸಂಧಾನ ಮಾತುಕತೆ ನಡೆಯುತ್ತಿದ್ದರೂ ಅದರ ಮಧ್ಯಸ್ಥಿಕೆ ಒಮಾನ್ ವಹಿಸಲಿದೆ. ಏಕೆಂದರೆ ಮೊದಲ ಸುತ್ತಿನ ಮಾತುಕತೆಗೂ ಇರಾನ್ & ಅಮೆರಿಕ ನಡುವೆ ಇದೇ ಒಮಾನ್ ಮಧ್ಯಸ್ಥಿಕೆ ವಹಿಸಿತ್ತು. ಹೀಗಾಗಿ ಅಮೆರಿಕ & ಇರಾನ್ ಮಧ್ಯೆ 2ನೇ ಸುತ್ತಿನ ಮಾತುಕತೆ ಜಿನೆವಾದಲ್ಲಿ ನಡೆದರೂ ಅದರ ಮಧ್ಯಸ್ಥಿಕೆ ಒಮಾನ್ ವಹಿಸಲಿದೆ ಎಂದು ತಿಳಿಸಲಾಗಿದೆ. ಸಭೆಯ ನಿಖರ ದಿನಾಂಕದ ಕುರಿತು ಮಾಹಿತಿ ಇನ್ನೂ ಸಿಕ್ಕಿಲ್ಲ, ಆದರೂ ಇದೇ ವಾರದಲ್ಲಿ ಸಭೆ ನಡೆಯುವುದು ಪಕ್ಕಾ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-military-sending-another-aircraft-carrier-near-iran-and-this-is-what-irans-new-decision-443821.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo