
International
-Malathesha M
ಡೊನಾಲ್ಡ್ ಟ್ರಂಪ್ ಅವರು & ಇರಾನ್ ನಡುವೆ ನಡೆಯುತ್ತಿರುವ ಮಾತಿನ ಯುದ್ಧ ನಿಂತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಮತ್ತೆ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಂತರ ಇರಾನ್ ಬಳಿ ಅಮೆರಿಕದ ಸೇನಾ ಜಮಾವಣೆ ಕೂಡ ಹೆಚ್ಚಾಗಿ ಸಾಗಿದ್ದು, ಇರಾನ್ ಪರವಾಗಿ ರಷ್ಯಾ & ಚೀನಾ ನಿಲ್ಲುವ ಮುನ್ಸೂಚನೆ ದಟ್ಟವಾಗಿದೆ. ಇದೆಲ್ಲಾ ಅತ್ತ ಮಧ್ಯಪ್ರಾಚ್ಯ ಭಾಗದ ನೆಮ್ಮದಿ ಹಾಳು ಮಾಡುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಕೂಡ ಭೀತಿಯನ್ನು ಹುಟ್ಟುಹಾಕಿದೆ. ಮತ್ತೊಂದು ಕಡೆ 3ನೇ ಮಹಾಯುದ್ಧದ ಆತಂಕ ಕೂಡ ಇದೀಗ ಶುರುವಾಗಿದ್ದು, ಈ ಸಮಯದಲ್ಲಿ ಪರಮಾಣು ಅಸ್ತ್ರಗಳ ಬಗ್ಗೆ ಕೂಡ ಟೆನ್ಷನ್ ಹೆಚ್ಚಾಗಿದೆ.
ಇರಾನ್ ಮಾತ್ರವಲ್ಲ ಮಧ್ಯಪ್ರಾಚ್ಯದ ಗಾಜಾ ಹಾಗೂ ಲೆಬನಾನ್ ಭಾಗದಲ್ಲೂ ನೆಮ್ಮದಿ ಇಲ್ಲ ಈಗ. ಹೀಗಾಗಿ ಮಧ್ಯಪ್ರಾಚ್ಯದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಪದೇ ಪದೇ ಈ ಭಾಗದಲ್ಲೇ ಯುದ್ಧ ಆರಂಭ ಆಗುತ್ತಿವೆ. ಒಂದೆಡೆ ಇರಾನ್ ಮತ್ತು ಅಮೆರಿಕ ಯಾವುದೇ ಕ್ಷಣದಲ್ಲಿ ಭಾರಿ ರಣಕಾಳಗ ಶುರು ಮಾಡಬಹುದು ಎಂಬ ಆತಂಕ ಆವರಿಸಿದ ಸಮಯದಲ್ಲೇ ಒಂದೊಂದೇ ದೇಶಗಳು ಇರಾನ್ ಬೆನ್ನಿಗೆ ನಿಲ್ಲುತ್ತಿವೆ. ರಷ್ಯಾ ಮತ್ತು ಚೀನಾ ಈ ವಿಚಾರದಲ್ಲಿ ಗಟ್ಟಿ ನಿರ್ಧಾರ ಮಾಡಿರುವುದು ಅಮೆರಿಕ ಸೇನೆ ಚಿಂತೆ ಮಾಡುವಂತೆ ಆಗಿದೆ. ಇದೆಲ್ಲವನ್ನೂ ಮೀರಿ ಇದೀಗ 3ನೇ ಮಹಾಯುದ್ಧದ ಆತಂಕ ಕೂಡ ಶುರು ಆಗಿದೆ. ಇದೇ ರೀತಿಯಾಗಿ ಜಗತ್ತು ಇರಾನ್ ವಿಚಾರದಲ್ಲಿ ವಿಭಜನೆ ಆಗುತ್ತಾ ಹೋದರೆ ಮುಂದೆ ಅದು ಘೋರ ಕಾಳಗಕ್ಕೆ ದಾರಿ ಮಾಡಿಕೊಡಬಹುದು ಎಂಬ ಆತಂಕ ಆವರಿಸಿದೆ.

ಟ್ರಂಪ್ ಕೊಟ್ಟಿದ್ದರು 10 ದಿನಗಳ ಗಡುವು
ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಸ್ವಲ್ಪ ಕೂಡ ಕಡಿಮೆ ಆಗುತ್ತಿಲ್ಲ, ಬದಲಾಗಿ ತಿಕ್ಕಾಟವು ಇನ್ನಷ್ಟು ತೀವ್ರಗೊಂಡಿದೆ. ಇರಾನ್ ವಿಶ್ವಸಂಸ್ಥೆ ಮುಖ್ಯಸ್ಥರು & ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ವಿಶೇಷ ಪತ್ರ ಬರೆದಿದ್ದು, ಪತ್ರದಲ್ಲಿ ಬಲವಾದ ಪ್ರತೀಕಾರದ ಎಚ್ಚರಿಕೆ ನೀಡಿದೆ. ಈ ಮೂಲಕ ಆತಂಕ ಇನ್ನಷ್ಟು ಹೆಚ್ಚಾಗಿದ್ದು, ಮತ್ತೊಂದು ಮಹಾಯುದ್ಧ ಎಂದರೆ 3ನೇ ಮಹಾಯುದ್ಧದ ಆತಂಕ ಇದೀಗ ಭುಗಿಲೆದ್ದಿದೆ. ಹೊಸ ಪರಮಾಣು ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ 10 ದಿನಗಳ ಗಡುವು ನೀಡಿದ್ದು, ಆ ಗಡುವು ಸಮೀಪಕ್ಕೆ ಬರುತ್ತಿರುವ ಸಮಯದಲ್ಲೇ ಇರಾನ್ ಪತ್ರವು ಭಾರಿ ಗಮನ ಸೆಳೆದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-military-is-getting-more-power-day-by-day-near-iran-and-this-is-what-can-happen-in-few-days-011-444665.html. xn--babytilbehr-pgb.com does not claim ownership of this content. All rights remain with the original publisher.
