‘ಅವತ್ತು ಬ್ರೇಕಪ್ ಆಗಿದ್ದೇ ಒಳ್ಳೆಯದಾಯಿತು’: ರಶ್ಮಿಕಾ ತಾಯಿಯದ್ದೆ ಎನ್ನಲಾದ ಸ್ಫೋಟಕ ಆಡಿಯೋ ವೈರಲ್‌ | Rashmika Mother’s Viral Audio on Rakshit Breakup Resurfaces After Wedding: Know Complete details

Entertainment

oi-Madhusudhan KR

ದಕ್ಷಿಣ ಭಾರತದ ಖ್ಯಾತ ನಟಿ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಅದ್ಧೂರಿ ವಿವಾಹ ಹಾಗೂ ರಿಸೆಪ್ಷನ್ ಫೋಟೋಗಳು ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲಿವೆ. ಈ ಸಂತಸದ ನಡುವೆಯೇ ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಅವರದ್ದೆನ್ನಲಾದ ಹಳೆಯ ಆಡಿಯೋವೊಂದು ಈಗ ಮತ್ತೆ ವೈರಲ್ ಆಗುತ್ತಿದ್ದು, ಹೊಸ ಸಂಚಲನ ಸುಷ್ಟಿಸಿದೆ.

ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರ ಹಳೆಯ ಸಂದರ್ಶನದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿರುವುದರ ಬಗ್ಗೆ ಇರುವ ವರದಿಯಾಗಿದೆ. ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ಬಗ್ಗೆ ಸುಮನ್ ಮಂದಣ್ಣ ಅವರು ಮಾತನಾಡಿದ್ದಾರೆನ್ನಲಾದ ಅಂಶಗಳು ಇದರಲ್ಲಿವೆ.

Rashmika Mother s Viral Audio on Rakshit Breakup Resurfaces After Wedding Know Complete details

ಆಡಿಯೋದಲ್ಲಿ ಏನಿದೆ?

“ಮದುವೆಯ ನಂತರ ರಶ್ಮಿಕಾ ಸಿನಿಮಾದಿಂದ ದೂರ ಸರಿಯಬೇಕು ಹಾಗೂ ಆ ನಿರ್ಧಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಬೇಕು ಎಂದು ರಕ್ಷಿತ್ ಕುಟುಂಬದವರು ಒತ್ತಾಯಿಸಿದ್ದರು.” ಎಂದು ಆರೋಪ ಮಾಡಿದ್ಧಾರೆ. “ವಿವಾದ ಉಂಟಾದಾಗ ರಕ್ಷಿತ್ ಶೆಟ್ಟಿ ಅವರು ರಶ್ಮಿಕಾ ಬೆಂಬಲಕ್ಕೆ ನಿಲ್ಲುವ ಬದಲು ವಾದಕ್ಕೆ ಇಳಿಯುತ್ತಿದ್ದರು. ಅಷ್ಟೇ ಅಲ್ಲದೆ, ರಕ್ಷಿತ್ ಅವರ ತಾಯಿ ಸುಮನ್ ಅವರನ್ನೇ ಕ್ಷಮೆಯಾಚಿಸುವಂತೆ ಹೇಳಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು,” ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ.

“ಒಳಗಡೆ ತುಂಬಾ ನಡೆದಿದೆ. ನಾನು ಸ್ಟ್ರಾಂಗ್‌ ಆಗಿರೋದಕ್ಕೆ ಬಚಾವ್. ಇಡೀ ಕರ್ನಾಟಕನೇ ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಹೇಳುತ್ತಿದೆ. ಖುಷಿ ಪಡಬೇಕು. ಏನು ವಿಷಯ ಇದ್ರು ಇವನು ತಲೆ ಹಾಕೋದು ಯಾಕೆ? ನಾನು ಯಾವ ಗ್ಯಾರೆಂಟಿಯಲ್ಲಿ ಮದುವೆ ಮಾಡಿಕೊಡಲಿ ಇವರಿಗೆ? ಒಂದು ಹೆಣ್ಣುಮಗುವನ್ನು ಕೊಡೋದು ಬೇಡ್ವಾ ಅವರಿಗೆ? ನಾನು ಕೊಡೋದು ಹುಡುಗನಿಗೆ ಹೊರತು, ಇವರ ಮ್ಯಾನೇಜರ್ ಪ್ರೋಡೂಸರ್‌ಗೆ ಅಲ್ಲ,” ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.

“21 ವರ್ಷದ ಹುಡುಗಿಯನ್ನ 35 ವರ್ಷ ಹುಡುಗನಿಗೆ ಮದುವೆ ಮಾಡಿ ಕೊಡಲು ಒಪ್ಪಿದ್ದೆ ನನ್ನ ದೊಡ್ಡತನ. ಆವತ್ತು ಒಂದಿನ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಇನ್ನೋವಾ ಕಾರು ತಗೊಂಡು ಬಾ ಬೆಂಗಳೂರಿಗೆ ನನ್ನನ್ನ ನೋಡೋಕೆ ಬಾ. ಬೆಳಗ್ಗೆ ಮತ್ತೆ 8 ಗಂಟೆಗೆ ಹೈದರಾಬಾದ್‌ಗೆ ಹೋಗುವಂತೆ ಹೇಳಿದರು. ಇವರೇನು ಮನುಷ್ಯರಾ? ನಿನಗೇನು ಸಾವಿರ ಹುಡುಗಿಯರು ಸಿಗ್ತಾರೆ ಮದುವೆಯಾಗ್ತಾರೆ. ನನ್ನ ಮಗಳಿಗೆ ರೋಡಲ್ಲಿ ತೊಂದರೆ ಆದ್ರೆ ಯಾರು ಹೊಣೆ? ಎಂದು ಹೇಳಿದ್ದು, ರಶ್ಮಿಕಾ ನಾನು ಬರುವುದಕ್ಕೆ ಆಗಲ್ಲ, ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಮುಖ್ಯ,” ಅಂತಾ ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಸಂಚಲನ ಸೃಷ್ಟಿಸಿದ ಬ್ರೇಕಪ್‌ ಆಡಿಯೋ

“ನನ್ನ ಮಗಳು ಏನು ತಪ್ಪು ಮಾಡಿದ್ದಾಳೆ? ಆಕೆ ಇನ್ನೂ ಚಿಕ್ಕವಳು. ಇಷ್ಟೆಲ್ಲಾ ಕಟ್ಟುಪಾಡುಗಳ ನಡುವೆ ಅವರು ಬ್ರೇಕಪ್ ಮಾಡಿಕೊಂಡಿದ್ದೇ ಒಳ್ಳೆಯದಾಯಿತು” ಎಂದು ಸುಮನ್ ಮಂದಣ್ಣ ಅಂದು ಆಕ್ರೋಶ ಹೊರಹಾಕಿದ್ದರು ಎಂದು ಆಡಿಯೋದಲ್ಲಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಇನ್ನೂ ಆ ಸಮಯದಲ್ಲಿ ‘ಗೀತಾ ಗೋವಿಂದಂ’ ಸಿನಿಮಾದ ದೃಶ್ಯದ ಬಗ್ಗೆ ಕೇಳಿಬಂದ ಟೀಕೆಗಳ ಬಗ್ಗೆಯೂ ಇದೇ ಆಡಿಯೋದಲ್ಲಿ ಮಾತನಾಡಿದ್ದಾರೆ ಎಂದು ಮಾತನಾಡಿದ್ದು, ತಮ್ಮ ಮಗಳ ವೃತ್ತಿಪರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಅಂತಲೂ ಬಹುತೇಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದೀಗ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಿ ಹೊಸ ಜೀವನ ಆರಂಭಿಸಿರುವ ಈ ಸಂದರ್ಭದಲ್ಲಿ, ಈ ಆಡಿಯೋವ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದು ರಶ್ಮಿಕಾ ಮತ್ತು ರಕ್ಷಿತ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳನ್ನು ಆಗುತ್ತಿವೆ. ಮತ್ತೊಂದೆಡೆ, ಈಗಾಗಲೇ ಮದುವೆಯಾಗಿದೆ. ಆ ಬಗ್ಗೆ ಯಾಕೆ ಚರ್ಚೆ ಅಂತಲೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಆಡಿಯೋದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ

ಒಟ್ಟಿನಲ್ಲಿ ಈ ವಿಡಿಯೋ ಹಳೆಯದಾಗಿದ್ದರೂ, ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಅವರ ಹಳೆಯ ಸಂಬಂಧದ ಕಹಿ ಘಟನೆಗಳನ್ನು ಇದು ಮತ್ತೆ ನೆನಪಿಸಿದೆ. ಸದ್ಯಕ್ಕೆ ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ರಕ್ಷಿತ್ ಶೆಟ್ಟಿ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಶ್ಮಿಕಾ ತಾಯಿಯೇ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್‌ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mother-s-viral-audio-on-rakshit-breakup-resurfaces-after-wedding-know-complete-details-446753.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo