ಅಶ್ಲೀಲ ಕಂಟೆಂಟ್ ಪ್ರಸಾರ: ಭಾರತದಲ್ಲಿ ಈ 5 ಒಟಿಟಿ ವೇದಿಕೆಗಳು ಬ್ಯಾನ್ | India Blocks 5 OTT Platforms Over Obscene Content: Ministry of I&B Releases Full List of Apps

India

oi-Pragathi S

ನವದೆಹಲಿ: ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಕಂಟೆಂಟ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹುದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಐದು ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು (OTT Platforms) ಭಾರತದಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of I&B) ಮಂಗಳವಾರ ಆದೇಶ ಹೊರಡಿಸಿದೆ.

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನುಗಳು ಮತ್ತು ಕಂಟೆಂಟ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವ ನಿರಂತರ ಪ್ರಯತ್ನದ ಭಾಗವಾಗಿ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸಭ್ಯತೆಯನ್ನು ಕಾಪಾಡುವುದು ಮತ್ತು ವಿಶೇಷವಾಗಿ ಅಪ್ರಾಪ್ತ ವಯಸ್ಕರನ್ನು ಆನ್‌ಲೈನ್‌ನಲ್ಲಿನ ಇಂತಹ ಅಸಭ್ಯ ಕಂಟೆಂಟ್‌ಗಳಿಂದ ರಕ್ಷಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

India Blocks 5 OTT Platforms

ಈ 5 ಒಟಿಟಿ ಪ್ಲಾಟ್‌ಫಾರ್ಮ್‌ಗಳು ಯಾವುವು?

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಂಟರ್ನೆಟ್ ಸೇವಾ ಪೂರೈಕೆದಾರರು ಈ ಕೆಳಗಿನ ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರವೇಶವನ್ನು ನಿರ್ಬಂಧಿಸಿದ್ದಾರೆ:

1. ಮೂಡ್ ಎಕ್ಸ್‌ವಿಐಪಿ (MoodXVIP)
2. ಕೋಯಲ್ ಪ್ಲೇಪ್ರೊ (Koyal Playpro)
3. ಡಿಜಿ ಮೂವಿಪ್ಲೆಕ್ಸ್ (Digi Movieplex)
4. ಫೀಲ್ (Feel)
5. ಜುಗ್ನು (Jugnu)

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಈ ಐದೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಂಟೆಂಟ್ ನಿಯಂತ್ರಣ ನಿಯಮಗಳು ಮತ್ತು ಅಶ್ಲೀಲತೆ ತಡೆ ಕಾನೂನುಗಳನ್ನು ನೇರವಾಗಿ ಉಲ್ಲಂಘಿಸುವಂತಹ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದವು. ನಿರ್ಬಂಧದ ಆದೇಶ ಜಾರಿಯಾದ ಬೆನ್ನಲ್ಲೇ, ಭಾರತದಲ್ಲಿನ ಬಳಕೆದಾರರಿಗೆ ಈ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ.

ಐಟಿ ಕಾಯ್ದೆ ಅಡಿ ಕಠಿಣ ಕ್ರಮ

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ (Information Technology Act, 2000) ಸೆಕ್ಷನ್ 69A ಅಡಿಯಲ್ಲಿ ಈ ಆ್ಯಪ್‌ಗಳನ್ನು ಬ್ಲಾಕ್ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ, ಕಾನೂನುಬಾಹಿರ ಅಥವಾ ಸಮಾಜಕ್ಕೆ ಹಾನಿಕಾರಕವೆಂದು ಪರಿಗಣಿಸಲಾದ ಯಾವುದೇ ಆನ್‌ಲೈನ್ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಈ ಕಾಯ್ದೆಯು ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡುತ್ತದೆ.

ದೇಶದಲ್ಲಿ ಒಟಿಟಿ (OTT) ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ಇವುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಡಿಜಿಟಲ್ ಮನರಂಜನೆಯು ಕಾನೂನು ಮತ್ತು ನೈತಿಕತೆಯ ಚೌಕಟ್ಟಿನಲ್ಲೇ ಇರಬೇಕು ಎಂಬುದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ. ಸಾರ್ವಜನಿಕ ಸಭ್ಯತೆ ಮತ್ತು ವಯಸ್ಸಿಗೆ ಪೂರಕವಾದ ಕಂಟೆಂಟ್‌ಗಳ ಬಗ್ಗೆ ನೀಡಿರುವ ಮಾರ್ಗಸೂಚಿಗಳನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಈ ನಿಯಮಗಳನ್ನು ಮೀರಿ ಅಸಭ್ಯ ಕಂಟೆಂಟ್ ಪ್ರಸಾರ ಮಾಡಿದರೆ, ಮುಂದಿನ ದಿನಗಳಲ್ಲೂ ಇಂತಹ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಯುವಜನತೆ ಮತ್ತು ಮಕ್ಕಳು ಅಶ್ಲೀಲ ಕಂಟೆಂಟ್‌ಗಳಿಂದ ಹಾದಿ ತಪ್ಪದಂತೆ ರಕ್ಷಿಸುವುದು ಸರ್ಕಾರದ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಇಂದಿನ ಡಿಜಿಟಲ್ ಕಾಲದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಎಲ್ಲರಿಗೂ ಸುಲಭವಾಗಿ ಸಿಗುತ್ತಿರುವುದರಿಂದ, ಸುರಕ್ಷಿತ ಮತ್ತು ಜವಾಬ್ದಾರಿಯುತ ಮನರಂಜನೆ ನೀಡಲು ಸರ್ಕಾರ ಆದ್ಯತೆ ನೀಡಿದೆ. ಹೀಗಾಗಿ, ಒಟಿಟಿಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ನಿಯಮ ಮೀರುವ ಆ್ಯಪ್‌ಗಳ ವಿರುದ್ಧ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರದ ಈ ಇತ್ತೀಚಿನ ನಡೆಯು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಕಡ್ಡಾಯವಾಗಿ ಭಾರತೀಯ ನಿಯಮಗಳನ್ನು ಪಾಲಿಸಲೇಬೇಕು ಮತ್ತು ಜವಾಬ್ದಾರಿಯುತ ಕಂಟೆಂಟ್ ಮಾನದಂಡಗಳನ್ನು (Content standards) ಕಾಯ್ದುಕೊಳ್ಳಲೇಬೇಕು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/india-blocks-5-ott-platforms-over-obscene-content-ministry-of-i-b-releases-full-list-of-apps-445029.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo