
Karnataka
oi-Shankrappa Parangi
ಆಂಧ್ರಪ್ರದೇಶದಲ್ಲಿ 2024ರಲ್ಲಿ ನಡೆದ ವಿಧಾನಸಭಾ ಚುನಾವಣೆ ನಡೆದು ಎನ್‌ಡಿಎ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ (ಬಿಜೆಪಿ) ಮತ್ತು ಪವನ್ ಕಲ್ಯಾಣ್ (ಜನ ಸೇನಾ ಪಕ್ಷ) ಹಾಗೂ ಚಂದ್ರಬಾಬು ನಾಯ್ಡು (ಟಿಡಿಪಿ) ಅವರ ಮೈತ್ರಿಕೂಟವು ಅಧಿಕಾರಕ್ಕೆ ಬಂತು. ಆದರೆ ಈ ಗೆಲುವು ನ್ಯಾಯಯುತವಲ್ಲ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿವೂ ತಡರಾತ್ರಿವರೆಗೆ ಮತದಾನ ನಡೆದಿವೆ. ಅಕ್ರಮವಾಗಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ ಎಂದು ನವದೆಹಲಿಯಲ್ಲಿ ಪರಿಣಿತರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ ಎನ್‌ಡಿಎ ವಿರುದ್ಧ ದೂರಿದ್ದಾರೆ. ‘ಮತಗಳ್ಳತನ’ ಇದೇ ಸಾಕ್ಷಿ ಎನ್ನುತ್ತಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದು ಸುಮಾರು ಎರಡು ವರ್ಷಗಳ ಬಳಿಕ ಇಂಥದ್ದೊಂದು ಮತಗಳ್ಳತನದ ಗಂಭೀರ ಆರೋಪಗಳು ಎದುರಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಾ. ಸರ್ಕಾರ ಮುಂದುವರಿಯುತ್ತಾ? ಎಂಬ ಪ್ರಶ್ನೆಗಳು ಗರಿಗೆದರಿವೆ.

ಮತದಾನ ಜಿಗಿತಕ್ಕೆ ಸ್ಪಷ್ಟನೆ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ
ಆಂಧ್ರಪ್ರದೇಶದಲ್ಲಿ 2024ರ ಮೇ 13ರಂದು ಸಂಜೆ 5 ಕ್ಕೆ ಮತದಾನ ಮುಗಿದ ನಂತರ ಮುಖ್ಯ ಚುನಾವಣೆ ಆಯುಕ್ತರು ಶೇ. 68.4ರಷ್ಟು ಮತದಾನ ಆಗಿದೆ ಎಂದು ತಿಳಿಸಿದ್ದರು. ಮತ್ತೆ ರಾತ್ರಿ 8 ಗಂಟೆಗೆ ಅದೇ ಆಯುಕ್ತರು 68.12 ಮತದಾನವಾಗಿದೆ ಎಂದು ಹೇಳಿದ್ದಾರೆ. ರಾತ್ರಿ 11.45 ರ ಹೊತ್ತಿಗೆ ಅದನ್ನು 76.5ಶೇ ಕ್ಕೆ ಬದಲಾಯಿಸಿತು. ನಾಲ್ಕು ದಿನಗಳ ನಂತರ ಶೇ. 81.79ರಷ್ಟು ಮತದಾನ ಆಗಿದೆ ಎಂದರು. ಅಂದರೆ ಒಂದೇ ರಾತ್ರಿಯಲ್ಲಿ ಶೇ.13 ರಷ್ಟು ಮತದಾನ ಹೆಚ್ಚಾಗಿತ್ತು. ಈ ಬಗ್ಗೆ ಚುನಾವಣೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ ಎಂದು ಕಾಂಗ್ರೆಸ್ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಆಂಧ್ರ ಪ್ರದೇಶ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆಯವರು ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಮೇಲಿನ ಮೂವರು ಆರೋಪಗಳನ್ನು ಅವರು ಬೆಂಬಲಿಸಿದ್ದಾರೆ. ತಡರಾತ್ರಿ 2 ಗಂಟೆವರೆಗೆ ಮತಗಳು ಚಲಾವಣೆಯಾಗಿದೆ. ಮಧ್ಯರಾತ್ರಿಯ ನಂತರ ಸುಮಾರು 17 ಲಕ್ಷ ಮತಗಳು ಚಲಾವಣೆಯಾಗಿವೆ, ಮತ್ತು ಆಘಾತಕಾರಿ ಸಂಗತಿಯೆಂದರೆ ಮಧ್ಯರಾತ್ರಿಯ ನಂತರ ಪ್ರತಿ 20 ಸೆಕೆಂಡುಗಳಿಗೊಮ್ಮೆ ಮತ ಚಲಾಯಿಸಲಾಯಿತು ಎಂದು ಅವರು ಸಹ ವಿವರಿಸಿದ್ದಾರೆ.
ದೇಶದ ಜನರಿಗೆ ಮಾಹಿತಿ ಈವರೆಗೂ ನೀಡಿಲ್ಲ
ಯಾರಾದರೂ ಒಳಗೆ ಬಂದು ಆರು ಸೆಕೆಂಡ್‌ಗಳಲ್ಲಿ ಮತದಾನ ಮಾಡಿ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 68.04 ರಷ್ಟು ಮತದಾನ ಆಗಿದೆ ಎಂದ ಚುನಾವಣೆ ಆಯುಕ್ತರು ಯಾವುದೇ ಕಾರಣ ಇಲ್ಲದೇ ಮತದಾನ ಪ್ರಮಾಣವನ್ನು ಶೇ.81.79ರಷ್ಟು ಘೋಷಿಸಿದ್ದೇಕೆ. ಇಲ್ಲಿಯವರೆಗೆ ಈ ಎಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ. ಫಾರ್ಮ್ 17C ಅನ್ನು ಏಕೆ ಸಾರ್ವಜನಿಕಗೊಳಿಸಿಲ್ಲ. ಮತದಾರರ ಪಟ್ಟಿ ಯಂತ್ರ ಓದಬಹುದಾದ ಸ್ವರೂಪದಲ್ಲಿ ಏಕೆ ಲಭ್ಯವಿಲ್ಲ?
“ಚುನಾವಣೆ ನಡೆದು 2 ವರ್ಷಗಳ ನಂತರ ದತ್ತಾಂಶ ತರುವುದು ಅಸಂವಿಧಾನಿಕ” ಎಂದು ಚುನಾವಣಾ ಆಯೋಗವು ನಾಚಿಕೆಯಿಲ್ಲದೆ ವಾದಿಸಿದೆ. ಈ ಮೂಲಕ ಚುನಾವಣಾ ಆಯೋಗವು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಗಳ ಮೂಲಕ ಕಿಡಿ ಕಾರಿದ್ದಾರೆ.
ಅಸಲಿಗೆ ಆರೋಪವೇನು?
ದೆಹಲಿಯಲ್ಲಿ ಈಚೆಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಶಿ, ಅರ್ಥ ಶಾಸ್ತ್ರಜ್ಞ ಪ್ರಕಾಲ ಪ್ರಭಾಕರ್, ವಕೀಲ ಪ್ರಶಾಂತ್ ಭೂಷಣ್ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ವಂಚನೆ ಮಾಡಿ ಗೆಲ್ಲಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾಡಲಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕವು ಮತದಾನ ನಡೆದಿದೆ. 6 ಸೆಕೆಂಡ್ ಒಳಗೆ ಮತದಾನ ನಡೆದಿದೆ. ತಡರಾತ್ರಿವರೆಗೆ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿವೆ. ಆ ಲಕ್ಷಾಂತರ ಮತಗಳು ಎನ್‌ಡಿಎ ಪಾಲಾಗಿವೆ. ಹೀಗಾಗಿ ಎನ್‌ಡಿಎ ನೇತೃತ್ವದ ಮೈತ್ರಿಕೂಟ ಪಕ್ಷಗಳು ಅಧಿಕಾರ ಗದ್ದುಗೆ ಏರಿದ್ದಾರೆಂದು ಅವರು ವಿವರಿಸಿದ್ದಾರೆ.
ತಡರಾತ್ರಿವರೆಗೆ 52 ಲಕ್ಷ ಮತಗಳು ಚಲಾವಣೆ!
ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯರಾತ್ರಿ ನಂತರ ಶೇ.4ರಷ್ಟು ಮತದಾನಗಳು ನಡೆದಿವೆ. ಆರಂಭದಲ್ಲಿ 17 ಲಕ್ಷ ಮತಗಳು ಚಲಾವಣೆ ಆಗಿವೆ. ಟಿಡಿಪಿ ನೇತೃತ್ವದ ಎನ್‌ಡಿಎ 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆದ್ದು ನೀರ್ಣಾಯಕ ಮತಗಳನ್ನು ಪಡೆದಿತ್ತು. ಆದರೆ 3500 ಬೂತ್‌ಗಳಲ್ಲಿ ಮಧ್ಯರಾತ್ರಿ 2 ಗಂಟೆವರೆಗೆ ಮತದಾನ ಮುಂದುವರಿದಿತ್ತು ಎಂದು ಪ್ರಕಾಲ ಪ್ರಭಾಕರ್ ವಿವರಿಸಿದ್ದಾರೆ.
ರಾತ್ರಿ 4.16ರಷ್ಟು ಮತಗಳು ರಾತ್ರಿ 11.45 ರಿಂದ ಬೆಳಗಿನ ಜಾವ 2 ಗಂಟೆವರೆಗೆ ಮತದಾನ ಚಲಾವಣೆ ಆಗಿವೆ. ರಾತ್ರಿ 8 ಗಂಟೆಯಿಂದ ಬೆಳಗಿನ 2 ಗಂಟೆ ವರೆಗೆ 52 ಲಕ್ಷ ಮತಗಳು ಚಲಾವಣೆ ಆಗಿವೆ. ಮಧ್ಯಾರಾತ್ರಿ ಪ್ರತಿ 20 ಸೆಕೆಂಡ್‌ಗೆ ಮತ ಚಲಾವಣೆ ಆಗಿದ್ದು ಪತ್ತೆ ಯಾಗಿದೆ ಎಂದರು.
ಇವಿಎಂ ಮರು ಹೊಂದಿಸಲು 14 ಸೆಕೆಂಡ್ ಬೇಕು ಅನ್ನುವುದಾದರೆ. ಅಷ್ಟು ಸೆಕೆಂಡ್‌ಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ ಚಲಾವಣೆ ಆಗಿದ್ದೇಗೆ. ಮತದಾರರು ಪ್ರವೇಶಿಸಲು ಸಾಧ್ಯವಿಲ್ಲ ಅಲ್ಲವೇ ಎಂದು ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಮೈತ್ರಿ ಪಕ್ಷಗಳ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/andhra-election-votes-fraud-priyank-kharge-slams-nda-over-13pc-voter-turnout-jump-in-single-night-449451.html. xn--babytilbehr-pgb.com does not claim ownership of this content. All rights remain with the original publisher.
