ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ | SSLC Exam 2026: Ailing Student Writes Board Exam with Oxygen Support In Andhra, Inspires Many

India

oi-Madhusudhan KR

SSLC Examination 2026: ದೃಢ ಸಂಕಲ್ಪ ಮತ್ತು ಛಲವಿದ್ದರೆ ಎಂತಹ ಕಷ್ಟವನ್ನೂ ಎದುರಿಸಬಹುದು ಎಂಬುದಕ್ಕೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊತ್ತಪಟ್ನಂನ 10ನೇ ತರಗತಿ ವಿದ್ಯಾರ್ಥಿಯೊಬ್ಬ ಸಾಕ್ಷಿಯಾಗಿದ್ದಾನೆ. ತೀವ್ರ ಅನಾರೋಗ್ಯದ ನಡುವೆಯೂ ಈ ವಿದ್ಯಾರ್ಥಿ ಆಮ್ಲಜನಕದ (Oxygen) ಸಿಲಿಂಡರ್ ಇಟ್ಟುಕೊಂಡು ಮತ್ತು ಮುಖಕ್ಕೆ ಮಾಸ್ಕ್ ಧರಿಸಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಅನಾರೋಗ್ಯದಿಂದಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೂ, ಶಿಕ್ಷಣದ ಮೇಲಿನ ಆಸಕ್ತಿ ಮತ್ತು ಭವಿಷ್ಯದ ಕನಸಿನಿಂದಾಗಿ ಪರೀಕ್ಷೆಯನ್ನು ತಪ್ಪಿಸಿಕೊಳ್ಳಬಾರದು ಎಂದು ಈತ ನಿರ್ಧರಿಸಿದ್ದ. ಆಸ್ಪತ್ರೆಯ ಬೆಡ್‌ನಲ್ಲಿದ್ದು ವಿಶ್ರಾಂತಿ ಪಡೆಯುವ ಬದಲು, ಆಕ್ಸಿಜನ್ ಕಿಟ್‌ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಈತನ ಶ್ರದ್ಧೆಯನ್ನು ಕಂಡು ಶಿಕ್ಷಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತನ ಶ್ರದ್ಧೆ ಮತ್ತು ಧೈರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಈ ದೃಶ್ಯ ಕಂಡು ಶಿಕ್ಷಕರು ಹಾಗೂ ಪರೀಕ್ಷಾ ಅಧಿಕಾರಿಗಳು ಭಾವುಕರಾಗಿದ್ದಾರೆ.

SSLC Exam 2026 Ailing Student Writes Board Exam with Oxygen Support In Andhra Inspires Many

ಆಕ್ಸಿಜನ್ ನೆರವಿನೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿ

ಆಕ್ಸಿಜನ್ ಕಿಟ್‌ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಯ ಹೆಸರು ಕೌಶಿಕ್. ಈತ ಕಳೆದ ಕೆಲವು ದಿನಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆ. ವೈದ್ಯಕೀಯ ನೆರವಿಲ್ಲದೆ ಈತನಿಗೆ ಸಹಜವಾಗಿ ಉಸಿರಾಡಲು ಸಾಧ್ಯವಾಗದ ಸ್ಥಿತಿಯಿದೆ. ಆದರೂ, ತನ್ನ ಅನಾರೋಗ್ಯವು ಶಿಕ್ಷಣಕ್ಕೆ ಅಡ್ಡಿ ಆಗಬಾರದೆಂಬ ಛಲದಿಂದ ಆಮ್ಲಜನಕದ ಸಿಲಿಂಡರ್ ನೆರವಿನೊಂದಿಗೆ ಪರೀಕ್ಷೆ ಬರೆದು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಕೌಶಿಕ್ ಕುಟುಂಬ ಪರದಾಟ

ಕೌಶಿಕ್‌ನ ಈ ಪರಿಸ್ಥಿತಿಯ ಹಿಂದೆ ಒಂದು ಕರುಣಾಜನಕ ಕಥೆಯಿದೆ. ಆತನ ಕುಟುಂಬವು ಎದುರಿಸುತ್ತಿರುವ ಭಾರಿ ಆರ್ಥಿಕ ಸಂಕಷ್ಟವೇ ಈ ದುರಂತಕ್ಕೆ ಕಾರಣ. ಶ್ವಾಸಕೋಶದ ಕಸಿ ಒಂದೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಈ ಶಸ್ತ್ರಚಿಕಿತ್ಸೆಗೆ ಸರಿಸುಮಾರು 50ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಕೌಶಿಕ್ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯದ ಮಾತಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ, ತನ್ನ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ಕೌಶಿಕ್‌ನ ನಿರ್ಧಾರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭವಿಷ್ಯವನ್ನು ರೂಪಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಎಂತಹ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/sslc-exam-2026-ailing-student-writes-board-exam-with-oxygen-support-in-andhra-inspires-many-447639.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo