ಆರೋಗ್ಯ ಸಂಜೀವಿನಿ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ | Karnataka Government Enables KASS Opt-Out Facility on HRMS-1 Portal for Employees: Know details

Karnataka

oi-Madhusudhan KR

ಬೆಂಗಳೂರು, ಫೆಬ್ರವರಿ 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಹೊರಗುಳಿಯಲು ಬಯಸುವ ನೌಕರರಿಗಾಗಿ ಆರ್ಥಿಕ ಇಲಾಖೆ HRMS-1 ವೆಬ್ ಅಪ್ಲಿಕೇಶನ್ ಅಪ್ಲಿಕೇಶನ್‌ನಲ್ಲಿ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಯೋಜನೆಯಿಂದ ಹೊರಗುಳಿಯಲು ಏನು ಮಾಡಬೇಕು?

* ಲಾಗಿನ್ ಪ್ರಕ್ರಿಯೆ: ಮೊದಲಿಗೆ ಸಂಬಂಧಪಟ್ಟ DDO ಲಾಗಿನ್ ಕ್ರೆಡೆನ್ಶಿಯಲ್ ಬಳಸಿ HRMS-1 ಸೈಟ್‌ಗೆ ಲಾಗಿನ್ ಆಗಬೇಕು.
* ನ್ಯಾವಿಗೇಷನ್: ಸೈಟ್‌ನಲ್ಲಿ Service Register > Family Dependent Entry Form – KASS ಆಯ್ಕೆ ಮಾಡಿ.
* ನೌಕರರ ವಿವರ: ನೌಕರರ KGID ಸಂಖ್ಯೆಯನ್ನು ನಮೂದಿಸಿ GET ಮೇಲೆ ಕ್ಲಿಕ್ ಮಾಡಿ.
* ದೃಢೀಕರಣ: ಸ್ಕ್ರೀನ್‌ ಮೇಲೆ ಕಾಣಿಸುವ “Do you wish to OPT-OUT from the KASS Scheme?” ಎಂಬ ಪ್ರಶ್ನೆಗೆ ‘Yes’ ಎಂದು ಆಯ್ಕೆ ಮಾಡಬೇಕು.

Karnataka Government Enables KASS Opt-Out Facility on HRMS-1 Portal for Employees Know details

ಯಾವ ಕಾರಣಗಳನ್ನು ನೀಡಬಹುದು?

* ಈಗಾಗಲೇ KASS ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಫಲಾನುಭವಿಯಾಗಿದ್ದರೆ.
* ಪತಿ ಅಥವಾ ಪತ್ನಿ ರಾಜ್ಯ/ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಅಥವಾ ಇತರ ಕಾರಣಗಳಿದ್ದರೆ ಅವುಗಳನ್ನು ನಮೂದಿಸಬಹುದು.

ಈ ದಾಖಲೆ ಸಲ್ಲಿಕೆ ಕಡ್ಡಾಯ

* ಆಯ್ಕೆ ಮಾಡಿದ ಕಾರಣಕ್ಕೆ ಪೂರಕವಾಗಿ ದೃಢೀಕರಣ ಪ್ರಮಾಣ ಪತ್ರವನ್ನು PDF ರೂಪದಲ್ಲಿ (ಗರಿಷ್ಠ
500KB) ಅಪ್‌ಲೋಡ್ ಮಾಡಿ ‘Submit’ ಮೇಲೆ ಕ್ಲಿಕ್‌ ಮಾಡಬೇಕು. ಯಶಸ್ವಿಯಾಗಿ ಸಲ್ಲಿಕೆಯಾದ ನಂತರ “Successfully OPT-OUT saved” ಎಂಬ ಸಂದೇಶ ದೊರೆಯುತ್ತದೆ.

ವರದಿಗಳನ್ನು ವೀಕ್ಷಿಸುವುದು ಹೇಗೆ?

* ಯೋಜನೆಗೆ ಸೇರಿದ ಅಥವಾ ಹೊರಗುಳಿದವರ ವರದಿಯನ್ನು ವೀಕ್ಷಿಸಲು MIS Report -> KASS Report -> Opt-In/Opt-Out Report ಅನ್ನು ಅನುಸರಿಸಬಹುದು.

* ಹೆಚ್ಚಿನ ಮಾಹಿತಿಗಾಗಿ HRMS ಸಾಫ್ಟ್‌ವೇರ್‌ನ ಮುಖಪುಟದಲ್ಲಿರುವ KASS Manual ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆರೋಗ್ಯ ಸಂಜೀವಿನಿ ಕುರಿತು ಮಾಹಿತಿ

ಆರೋಗ್ಯ ಸಂಜೀವಿನಿ ಭಾರತದಲ್ಲಿ ಎಲ್ಲಾ ವಿಮಾ ಕಂಪನಿಗಳು ಒಂದೇ ಮಾದರಿಯಲ್ಲಿ ನೀಡುವ ಮೂಲಭೂತ ಆರೋಗ್ಯ ವಿಮಾ ಯೋಜನೆ. ಈ ಯೋಜನೆಯನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾನದಂಡದಂತೆ ರೂಪಿಸಿದ್ದು, ಸಾಮಾನ್ಯ ಜನರಿಗೆ ಸರಳ ಮತ್ತು ಉತ್ತಮ ಆರೋಗ್ಯ ವಿಮಾ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.

ಈ ಪಾಲಿಸಿಯಲ್ಲಿ ಆಸ್ಪತ್ರೆ ದಾಖಲಾತಿ ವೆಚ್ಚ, ಕೊಠಡಿ ಬಾಡಿಗೆ, ಶಸ್ತ್ರಚಿಕಿತ್ಸೆ, ವೈದ್ಯಕೀಯ ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಬಂಧಿತ ಖರ್ಚುಗಳಿಗೆ ಭದ್ರತೆ ಲಭ್ಯವಿರುತ್ತದೆ. ಸಾಮಾನ್ಯವಾಗಿ ₹1 ಲಕ್ಷದಿಂದ ₹5 ಲಕ್ಷವರೆಗೆ ವಿಮಾ ಮೊತ್ತವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ವೈಯಕ್ತಿಕ ಅಥವಾ ಕುಟುಂಬ ಫ್ಲೋಟರ್‌ ರೂಪದಲ್ಲೂ ಈ ಯೋಜನೆಯನ್ನು ಪಡೆಯಬಹುದು.

ಆರೋಗ್ಯ ಸಂಜೀವಿನಿ ಯೋಜನೆಯ ವಿಶೇಷತೆ ಎಂದರೆ ಎಲ್ಲ ಕಂಪನಿಗಳಲ್ಲೂ ನಿಯಮಗಳು ಬಹುತೇಕ ಒಂದೇ ರೀತಿಯಾಗಿರುವುದು. ಇದರಿಂದ ಗ್ರಾಹಕರು ಬೇರೆ ಬೇರೆ ಪಾಲಿಸಿಗಳನ್ನು ಹೋಲಿಕೆ ಮಾಡುವಲ್ಲಿ ಸುಲಭವಾಗುತ್ತದೆ. ಪ್ರೀಮಿಯಂ ಮೊತ್ತ ವಯಸ್ಸು ಹಾಗೂ ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದಲ್ಲಿ ಬದಲಾಗುತ್ತದೆ. ಆಸ್ಪತ್ರೆ ವೆಚ್ಚಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಆರೋಗ್ಯ ರಕ್ಷಣೆಗೆ ಈ ಯೋಜನೆ ಸಹಾಯಕವಾಗಿದೆ. ಹೊಸದಾಗಿ ಆರೋಗ್ಯ ವಿಮೆ ತೆಗೆದುಕೊಳ್ಳುವವರಿಗೆ ಇದು ಉತ್ತಮ ಆರಂಭಿಕ ಆಯ್ಕೆಯಾಗಬಹುದು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-government-enables-kass-opt-out-facility-on-hrms-1-portal-for-employees-know-details-444635.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo