ಇನ್ಮುಂದೆ ಸಿಮ್ ಇದ್ದರೆ ಮಾತ್ರ ವಾಟ್ಸಪ್‌, ಟೆಲಿಗ್ರಾಂ ವರ್ಕ್ ಆಗುತ್ತೆ! | SIM Binding Rule in India: No WhatsApp or Telegram Without Active SIM from March 1, Know more

India

oi-Shiddalingesh S

ನವದೆಹಲಿ: ಸಿಮ್ ಇಲ್ಲದೇ ಇನ್ನುಮುಂದೆ ಸಾಮಾಜಿಕ ಜಾಲ ತಾಣ ಕಾರ್ಯ ನಿರ್ವಹಿಸುವುದಿಲ್ಲ. ಮಾರ್ಚ್‌ 1ರಿಂದ ಸಿಮ್‌ ಇಲ್ಲದೆ ವಾಟ್ಸಾಪ್ , ಟೆಲಿಗ್ರಾಂ ಸೇರಿ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸಲು ಸಾಧ್ಯವಿಲ್ಲ. ಸಿಮ್ ಬೈಂಡಿಂಗ್ ಮೂಲಕ ಸೈಬರ್ ವಂಚನೆ ತಡೆಗೆ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಈ ಅಂಶವನ್ನು ಸಾಮಾಜಿಕ ಜಾಲತಾಣ, ವಾಟ್ಸಾಪ್ ಸೇರಿ ಇತರ ಆಪ್ ಬಳಕೆದಾರರು ಗಮನಿಸಬೇಕು.

ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್‌, ಸ್ನಾಪ್‌ಚಾಟ್, ಶೇರ್‌ಚಾಟ್‌, ಜಿಯೊಚಾಟ್‌, ಆರಟ್ಟೈ ಹಾಗೂ ಜೋಶ್‌ ಸೇರಿದಂತೆ ಮೊಬೈಲ್‌ಗಳ ನಡುವೆ ಸಂವಹನ ನಡೆಸಲು ಅವಕಾಶ ಕಲ್ಪಿಸುವ ಸೇವಾದಾರರಿಗೆ ದೂರಸಂಪರ್ಕ ಇಲಾಖೆಯು ಕಳೆದ ನವೆಂಬರ್ 28ರಂದು ಆದೇಶವನ್ನ ಹೊರಡಿಸಿತ್ತು. ಸರಿಯಾದ ಚಂದಾದಾರರ ಗುರುತಿನ ಮಾದರಿ (SIM) ಇದ್ದರಷ್ಟೇ ಸೇವೆಯನ್ನು ನೀಡಬೇಕು ಎಂದು ತಾಕೀತು ಮಾಡಿತ್ತು. ಅದರ ಜಾರಿಗೆ ನೀಡಿದ್ದ 90 ದಿನಗಳ ಗಡುವು ಫೆಬ್ರವರಿ 28ರಂದು ಕೊನೆಗೊಂಡಿದ್ದು, ಮಾರ್ಚ್‌ 1ರಿಂದ ಸಿಮ್‌ ಇಲ್ಲದಿದ್ದರೆ ವಾಟ್ಸಾಪ್ ಸಹಿತ ಪ್ರಮುಖ ಆ್ಯಪ್‌ಗಳು ಸಂವಹನಕ್ಕೆ ಸಾಧ್ಯವಾಗುವುದಿಲ್ಲ.

SIM Binding Rule

ಈ ನಿಯಮ ಜಾರಿಯ ವರದಿಯನ್ನು 120 ದಿನಗಳ ಒಳಗಾಗಿ ಇಲಾಖೆಗೆ ಸಲ್ಲಿಸುವಂತೆಯೂ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ದೂರಸಂಪರ್ಕ ಇಲಾಖೆ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಇಂಟೆಲಿಜೆನ್ಸ್‌ ವಿಭಾಗ ನೀಡಿದೆ. ಇಲ್ಲಿ ಫೋನ್‌ ಸಂಖ್ಯೆಯು ಬಳಕೆದಾರರ ಗುರುತಿನ ಮಹತ್ವದ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದೇಶ ಪಾಲಿಸದಿದ್ದರೆ ಟೆಲಿಕಾಂ ಸೈಬರ್‌ ಭದ್ರತಾ ಕಾನೂನನ್ವಯ ಕಠಿಣ ಕ್ರಮ ಜಾರಿಗೊಳಿಸುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.

ಈ ಹೊಸ ಸುರಕ್ಷತಾ ಮಾನದಂಡಗಳು ಜಾರಿಗೆ ಬಂದಲ್ಲಿ, ವಾಟ್ಸಾಪ್ ಸಹಿತ ಇತರ ಆ್ಯಪ್‌ಗಳು ಬೇರೆ ಸಾಧನದಲ್ಲಿ ಬಳಕೆಯಾಗುತ್ತಿದ್ದರೆ (ಉದಾಹರಣೆಗೆ ವಾಟ್ಸ್‌ಆ್ಯಪ್ ಆನ್‌ ವೆಬ್‌) ಅದು ಪ್ರತಿ ಆರು ಗಂಟೆಗೆ ಲಾಗ್‌ಔಟ್ ಆಗಲಿದೆ. ಆದರೆ ಸಿಮ್ ಇರುವ ಸಾಧನದಲ್ಲಿ ಅದು ಸಕ್ರಿಯವಾಗಿರಲಿದೆ. ಆದರೆ ಮೂಲ ಸಾಧನದಲ್ಲಿ ಸಿಮ್ ಇಲ್ಲದಿದ್ದರೆ ಈ ಸೌಲಭ್ಯಗಳು ಆ ತಕ್ಷಣದಿಂದಲೇ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಲಿವೆ. ಸಾಧನದಲ್ಲಿ ಸಿಮ್ ಕಾರ್ಡ್ ಸಕ್ರಿಯವಾಗಿದ್ದರೂ ರೋಮಿಂಗ್‌ನಲ್ಲಿರುವ ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಕೇಂದ್ರ ತಿಳಿಸಿದೆ.

ಸಿಮ್‌ ಬೈಂಡಿಂಗ್ ಎಂದರೇನು?

ಪ್ರಸ್ತುತ, ಯಾವುದೇ ಸಂವಹನ ಆ್ಯಪ್ ಬಳಕೆದಾರರನ್ನು ದೃಢಪಡಿಸಲು ಸೇವಾ ಸಂಸ್ಥೆಗಳು ಅವರ ಮೊಬೈಲ್‌ಗೆ ಒಂದು ಬಾರಿಯ ಪಾಸ್‌ವರ್ಡ್‌ (OTP) ಕಳುಹಿಸುವ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಹಂತದ ನಂತರ ಸಿಮ್ ಕಾರ್ಡ್‌ ತೆಗೆದರೂ, ವೈಫೈ ಸೌಲಭ್ಯ ಇದ್ದಲ್ಲಿ ಮೆಸೆಂಜರ್ ಆ್ಯಪ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು.

ಈಗ ಸಿಮ್ ಕಾರ್ಡ್‌ ತೆಗೆದರೆ ಅಥವಾ ನಿಷ್ಕ್ರಿಯೆಗೊಳಿಸದರೂ ಆ್ಯಪ್‌ ಕೂಡಾ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ವೆಬ್ ಅಥವಾ ಡೆಸ್ಕ್‌ಟಾಪ್ ಆವೃತ್ತಿಗಳು ಗರಿಷ್ಠ ಆರು ಗಂಟೆಯೊಳಗೆ ಸ್ವಯಂಚಾಲಿತವಾಗಿ ಲಾಗೌಟ್‌ ಆಗಬೇಕು. ಮರಳಿ ಬಳಸಲು ಮೊಬೈಲ್‌ನಿಂದ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮರುದೃಢೀಕರಣ ಅಗತ್ಯವಾಗಿರುತ್ತದೆ. ಹೀಗಾಗಿ ಇದನ್ನು ಸಿಮ್ ಬೈಂಡಿಂಗ್ ಎಂದು ಕರೆಯಲಾಗುತ್ತದೆ.

ಇಲ್ಲಿ ಸಂವಹನಕ್ಕೆ ವೇದಿಕೆ ಕಲ್ಪಿಸುವ ತಂತ್ರಾಂಶವು ಸಿಮ್ ಕಾರ್ಡ್‌ಗೆ ಜೋಡಿಸಲಾಗಿರುತ್ತದೆ. ಇಲ್ಲಿ ನೋಂದಾಯಿಸಿದ ಸಿಮ್ ಕಾರ್ಡ್ ಸಕ್ರಿಯಗೊಂಡ ನಂತರವಷ್ಟೇ ಆ ಸಾಧನದಲ್ಲಿ ಸಂವಹನ ಆ್ಯಪ್‌ಗಳ ಕಾರ್ಯಾರಂಭ ಆಗುತ್ತವೆ. ಹಾಗೆಯೇ, ಸಿಮ್ ಕಾರ್ಡ್ ತೆಗೆದರೆ ಆ್ಯಪ್‌ ಕೂಡಾ ನಿಷ್ಕ್ರಿಯಗೊಳ್ಳುತ್ತದೆ.

ಸಿಮ್ ಇಲ್ಲದ ಖಾತೆಗಳಿಂದ ದುರುಪಯೋಗ

ಸಿಮ್ ಇಲ್ಲದ ಸಂವಹನ ಆ್ಯಪ್‌ಗಳ ಖಾತೆಗಳನ್ನು ಸೈಬರ್‌ ಅಪರಾಧಿಗಳು, ವಿದೇಶದಿಂದ ಕಾರ್ಯನಿರ್ವಹಿಸಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವವರು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ಈ ನಿಟ್ಟಿನಲ್ಲಿ 2024ರ ನವೆಂಬರ್‌ನಲ್ಲಿ ಜಾರಿಗೆ ತಂದ ಸೈಬರ್ ಭದ್ರತಾ ಉಲ್ಲಂಘನೆಯ ಘಟನೆಗಳನ್ನು 24 ಗಂಟೆಯೊಳಗೆ ವರದಿ ಮಾಡಬೇಕು. ಟೆಲಿಕಾಂ ಕಂಪನಿಗಳು ಬಲಿಷ್ಠ ಸೈಬರ್ ಭದ್ರತಾ ವ್ಯವಸ್ಥೆ ಜಾರಿಗೆ ತರಬೇಕು, ದೂರಸಂಪರ್ಕ ಮುಖ್ಯ ಭದ್ರತಾ ಅಧಿಕಾರಿಯನ್ನು ನೇಮಕ ಮಾಡುವುದು ಕಡ್ಡಾಯ ಎಂದಿದೆ.

ಸಿಮ್ ಬೈಂಡಿಂಗ್ ಏಕೆ ಮುಖ್ಯ?

ಸರ್ಕಾರದ ಮಾಹಿತಿ ಪ್ರಕಾರ 2024ರಲ್ಲಿ ಸೈಬರ್ ವಂಚನೆ ಉಂಟಾದ ನಷ್ಟದ ಪ್ರಮಾಣ ₹22,800 ಕೋಟಿ. ಡಿಜಿಟಲ್ ಅರೆಸ್ಟ್‌ ಅನ್ನೂ ಒಳಗೊಂಡು ವಿವಿಧ ಸೈಬರ್ ಅಪರಾಧಗಳನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಕೂಡಾ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ರಾಜ್ಯಗಳನ್ನೂ ಪಕ್ಷಗಾರರನ್ನಾಗಿಸಿ ವಿಚಾರಣೆ ನಡೆಸುತ್ತಿದೆ. ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನು ವ್ಯಾಪ್ತಿಗೆ ತರಲು ಸಿಬಿಐಗೆ ಸಂಪೂರ್ಣ ಅಧಿಕಾರ ನೀಡಿದೆ. ಅಗತ್ಯ ಸಹಕಾರ ನೀಡಲು ಕೇಂದ್ರಕ್ಕೂ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಇದೇ ಆಧಾರದ ಮೇಲೆ ಜಾರಿಗೆ ಬರುತ್ತಿರುವ ಸಿಮ್ ಬೈಂಡಿಂಗ್‌ನಿಂದ ದೀರ್ಘಕಾಲ ಲಾಗಿನ್ ಆಗಿರುವ ವೆಬ್ ಅಥವಾ ಡೆಸ್ಕ್‌ಟಾಪ್‌ ಸೆಷನ್‌ಗಳಿಂದ ವಂಚಕರು ದೂರದಿಂದಲೇ ಖಾತೆಯನ್ನು ನಿರ್ವಹಿಸಲು ಅವಕಾಶ ನೀಡುತ್ತದೆ. ಆದರೆ ಸಿಮ್ ಬೈಂಡಿಂಗ್‌ನಿಂದ ನಿಯಮಿತ ಲಾಗೌಟ್‌ ಸಾಧ್ಯ.
ಸಿಮ್‌ ಬೈಂಡಿಂಗ್‌ನಿಂದ ದೂರ ಸಂಪರ್ಕ ಇಲಾಖೆಯ ಸೌಲಭ್ಯಗಳ ದುರುಪಯೋಗ ಕಡಿಮೆಯಾಗಲಿದೆ. ಪ್ರತಿಬಾರಿ ಸಿಮ್ ಮತ್ತು ಡಿವೈಸ್‌ ಮೇಲಿನ ಹಿಡಿತ ತೋರಿಸಬೇಕಾಗುತ್ತದೆ. ಕೆವೈಸಿ ಮೂಲಕ ಪರಿಶೀಲಿಸಲಾದ ಸಿಮ್‌ಗೆ ಖಾತೆ ಜೋಡಣೆಯಾಗುತ್ತದೆ. ಫಿಷಿಂಗ್, ಹೂಡಿಕೆ ವಂಚನೆ, ಡಿಜಿಟಲ್ ಅರೆಸ್ಟ್ ಮತ್ತು ಸಾಲ ವಂಚನೆಗಳಿಗೆ ತಡೆ ಬೀಳಲಿದೆ. ಈಗಾಗಲೇ ಬ್ಯಾಂಕಿಂಗ್ ಆ್ಯಪ್‌ಗಳು ಡಿವೈಸ್‌ ಬೈಂಡಿಂಗ್‌ ಮತ್ತು ಆಟೊ ಲಾಗ್‌ಔಟ್‌ ಜಾರಿಗೆ ತಂದಿವೆ. ಇದೇ ತತ್ವವು ಈಗ ಮೆಸೇಜಿಂಗ್ ಆ್ಯಪ್‌ಗಳಿಗೂ ವಿಸ್ತರಿಸಲಾಗುತ್ತಿದೆ.

ಕಂಪನಿಗಳ ಪ್ರತಿಕ್ರಿಯೆ ಏನು?

ವಾಟ್ಸಾಪ್ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು ಈಗಾಗಲೇ ಸಿಮ್ ಆಧಾರಿತ ಪರಿಶೀಲನಾ ವ್ಯವಸ್ಥೆಯ ಬಿಟಾ ಆವೃತ್ತಿಯನ್ನು ಪರಿಶೀಲಿಸುತ್ತಿದೆ. WABetaInfo ವರದಿ ಪ್ರಕಾರ, ಭಾರತದ ದೂರಸಂಪರ್ಕ ಇಲಾಖೆಯ ನಿಯಮಗಳ ಕಾರಣದಿಂದ SIM ಪರಿಶೀಲನೆ ಅಗತ್ಯ ಎಂದು ಬಳಕೆದಾರರಿಗೆ ಸೂಚನೆ ತೋರಿಸಲಾಗುತ್ತದೆ ಎಂದೆನ್ನಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/sim-binding-rule-in-india-no-whatsapp-or-telegram-without-active-sim-from-march-1-know-more-445685.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo