ಇರಾನ್ ನಾಯಕರಿಗೆ ಎಚ್ಚರಿಕೆ ನೀಡಲು ಶಕ್ತಿಶಾಲಿ ಯುದ್ಧ ವಿಮಾನಗಳನ್ನು ಕಳುಹಿಸಿದ ಅಮೆರಿಕ | US Military | US Military Has Been Sent Several Most Powerful Jets Near Iran And Explore The Middle East Situation

International

oi-Malathesha M

ಇರಾನ್ ಕೊನೆಗೂ ಮಂಡಿಯೂರಿ ಕೂರುವಂತೆ ಮಾಡುತ್ತಿದೆ ಅಮೆರಿಕ, ಅದರಲ್ಲೂ ತನ್ನ ಬಳಿ ಇದ್ದ ಎಲ್ಲಾ ಶಕ್ತಿಶಾಲಿ ಅಸ್ತ್ರಗಳನ್ನು ಹೊರಗೆ ತೆಗೆಯಲು ಅಮೆರಿಕ ಸೇನೆ ಸಜ್ಜಾಗಿದೆ. ಈಗಾಗಲೇ ಯುದ್ಧ ನೌಕೆ ಹಾಗೂ ಶಕ್ತಿಶಾಲಿ ಕ್ಷಿಪಣಿಗಳನ್ನು ಇರಾನ್ ಹತ್ತಿರಕ್ಕೆ ಕಳುಹಿಸಿದ್ದ ಅಮೆರಿಕ ಮಿಲಿಟರಿ, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಜಗತ್ತಿನ ಅತಿ ಶಕ್ತಿಶಾಲಿ ಯುದ್ಧ ವಿಮಾನಗಳು ಎಂದು ಕರೆಯುವ ಎಫ್-22 ಎಸ್, ಎಫ್-35 ಎಸ್, ಎಫ್-16 ಎಸ್ ಪಡೆಗಳನ್ನೇ ಇರಾನ್ ಕಡೆಗೆ ನುಗ್ಗಿಸಿದೆ. ಹೀಗಾಗಿ, ಮಧ್ಯಪ್ರಾಚ್ಯ ಮತ್ತೆ ಸೂಕ್ಷ್ಮ ವಲಯವಾಗಿ ಬದಲಾಗಿದ್ದು ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕ ಒಂದು ಕಡೆ ಪರಮಾಣು ವಿಚಾರದಲ್ಲಿ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಸುತ್ತಿದೆ. ಮತ್ತೊಂದು ಕಡೆ ಇದೀಗ ಇರಾನ್ ಸಮೀಪಕ್ಕೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಆಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ತೆರಳಿದ್ದು, ಇದರ ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಕೂಡ ಸಮೀಪಕ್ಕೆ ಸಾಗುತ್ತಿದೆ. ಈ ಮೂಲಕ ಪ್ರಸ್ತುತ ವಾತಾವರಣ ಹಾಗೇ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲ ಮೂಲಕ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಡೆಸುವ ಶಕ್ತಿ ಪಡೆದಿದೆ ಎಂಬುದು ತಜ್ಞರ ಮಾಹಿತಿ. ಇಷ್ಟೆಲ್ಲದರ ನಡುವೆ ಮತ್ತೊಂದು ಪ್ಲಾನ್ ಕೂಡ ಮಾಡಿರುವ ಅಮೆರಿಕ ಸೇನೆ ಎಫ್-22 ಎಸ್, ಎಫ್-35 ಎಸ್, ಎಫ್-16 ಎಸ್ ಯುದ್ಧ ವಿಮಾನ ಕಳುಹಿಸಿದೆ ಮಧ್ಯಪ್ರಾಚ್ಯ ಭಾಗಕ್ಕೆ.

US Military

ಸಂಧಾನ ಮಾತುಕತೆ ನಡುವೆ ಕಿರಿಕ್!

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದ ಸೇನೆ ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ. ಅಮೆರಿಕ & ಇರಾನ್ ನಡುವೆ ಒಂದು ಕಡೆ ಜಿನೇವಾದಲ್ಲಿ ಮಾತುಕತೆ ನಡೆಯುತ್ತಿದೆ. ಇದೀಗ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಎರಡು ದೇಶಗಳ ನಡುವೆ ಸಂಧಾನ ಮಾತುಕತೆ ಆಗಲಿ ಎಂದು ಒಮಾನ್ ಸೇರಿ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು ಕಾಯುತ್ತಾ ಕೂತಿವೆ. ಆದರೆ ಇಂತಹ ಸಮಯದಲ್ಲೇ ಈಗ ದಿಢೀರ್ ನಡೆಯಬಾರದ ಘಟನೆ ನಡೆದು ಹೋಗಿದ್ದು, ಯಾವಾಗ ಇರಾನ್ ಕ್ಷಿಪಣಿ ಪರೀಕ್ಷೆಗೆ ಕೈಹಾಕಿ ಸೆಡ್ಡು ಹೊಡೆಯಿತೋ ಆಗಿಂದಲೇ ಅಮೆರಿಕ ಇನ್ನಷ್ಟು ರೊಚ್ಚಿಗೆದ್ದಿದೆ.

ಸಾಮಾನ್ಯ ಜನರಿಗೆ ಪ್ರಾಣ ಸಂಕಟ

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲೇ ದಿಢೀರ್ ಎಫ್-22 ಎಸ್, ಎಫ್-35 ಎಸ್, ಎಫ್-16 ಎಸ್ ಯುದ್ಧ ವಿಮಾನಗಳು ದಿಢೀರ್ ಇರಾನ್ ಕಡೆಗೆ ಹಾರಿ ಬರುತ್ತಿವೆ. ಮತ್ತೊಂದು ಕಡೆ ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಇನ್ನಷ್ಟು ಭದ್ರ ಮಾಡಿದ್ದು, ಯಾವುದೇ ಸಮಯವೂ ಎದುರಾಗುವ ಸೂಕ್ಷ್ಮ ಪರಿಸ್ಥಿತಿ ಮಧ್ಯಪ್ರಾಚ್ಯದಲ್ಲಿ ನಿರ್ಮಾಣ ಆಗಿದೆ. ಹಾಗೇ ಜನರು ಕೂಡ ಊರು ಬಿಟ್ಟು ಹೋಗುವ ಚಿಂತೆ ಮಾಡಿ ನರಳುವಂತೆ ಆಗಿದೆ. ಇಬ್ಬರೂ ಕೂತು ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವ ಕನಸು ಕನಸಾಗಿ ಇದೀಗ ಉಳಿದುಕೊಳ್ಳಲಿದೆ. ಅಕಸ್ಮಾತ್ ಈ ಇಬ್ಬರ ನಡುವೆ ಯುದ್ಧ ಶುರುವಾದರೆ ಮುಂದೆ ಅದು ಭೀಕರ & ಯಾರೂ ಊಹಿಸದ ಘಟನೆಗಳಿಗೆ ನಾಂದಿ ಹಾಡುವುದು ಖಚಿತ.

ಒಮಾನ್ ನೇತೃತ್ವದಲ್ಲಿ 2ನೇ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಇರಾನ್ & ಅಮೆರಿಕ ಶೀಘ್ರ ಒಂದು ಮಹತ್ವದ ತೀರ್ಮಾನಕ್ಕೆ ಬರುವ ನಿರೀಕ್ಷೆ ಇತ್ತು. ಪ್ರಮುಖವಾಗಿ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಈಗ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕ ಅಧಿಕಾರಿಗಳ ಮಹತ್ವದ ಚರ್ಚೆ ನಿರ್ಣಾಯಕ ಎನ್ನಲಾಗುತ್ತಿದೆ ಇದೀಗ. ಇಬ್ಬರ ನಡುವೆ ತಿಕ್ಕಾಟವನ್ನ ನಿಲ್ಲಿಸಲು ಈ ಸಭೆ ಅರ್ಥಪೂರ್ಣವಾಗಿ ಯಶಸ್ಸು ಕಾಣಬೇಕಿದೆ, ಇಲ್ಲವಾದರೆ ಅಮೆರಿಕ ಸೇನೆ ನೇರವಾಗಿ ಇರಾನ್ ಒಳಗೆ ನುಗ್ಗಲು ಸಜ್ಜಾಗಿ ಗಡಿಯಲ್ಲೇ ಕೂತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-military-has-been-sent-several-most-powerful-jets-near-iran-and-explore-the-middle-east-situation-444249.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo