
International
-Malathesha M
ಇರಾನ್.. ಇರಾನ್.. ಇರಾನ್.. ಯಾವುದೇ ಟಿವಿ ಚಾನಲ್ ಸ್ವಿಚ್ ಮಾಡಿದರೂ, ವೆಬ್ಸೈಟ್ ತೆಗೆದು ಓದಿದರೂ, ಯುಟ್ಯೂಬ್ ವಿಡಿಯೋ ನೋಡಲು ಹೋದರೂ ನಿಮ್ಮ ಕಣ್ಣಿಗೆ ಬರೀ ಇದೇ ಇರಾನ್ನ ಬಗ್ಗೆ ನ್ಯೂಸ್ ಕಾಣಿಸುತ್ತಾ ಇದೆ. ಯಾಕಂದ್ರೆ ಜಗತ್ತಿನ ದೊಡ್ಡಣ್ಣ ಅಮೆರಿಕ ತನ್ನ ಗೆಳೆಯ ಇಸ್ರೇಲ್ ಸೇನೆ ಜೊತೆ ಸೇರಿಕೊಂಡು ಭರ್ಜರಿ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಹೀಗೆ ಯುದ್ಧ ಶುರುವಾದ ನಂತರ ಭಾರಿ ದೊಡ್ಡ ಮಟ್ಟದಲ್ಲಿ ಬಿರುಗಾಳಿ ಎದ್ದಿದ್ದು, ಇಡೀ ಮಧ್ಯಪ್ರಾಚ್ಯ ಮಾತ್ರವಲ್ಲ ಜಗತ್ತೇ ನಲುಗಿದೆ. ಅದರಲ್ಲೂ ಕಚ್ಚಾತೈಲ ಪೂರೈಕೆಯಲ್ಲಿ ಕೂಡ ಭಾರಿ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ. ಇದೇ ಸಮಯದಲ್ಲಿ ಇರಾನ್ ಪರವಾಗಿ ರಷ್ಯಾ & ಚೀನಾ ಬ್ಯಾಟಿಂಗ್ ಆರಂಭಿಸಿರುವುದು ಕುತೂಹಲ ಹೆಚ್ಚಿಸಿದೆ.
ರಷ್ಯಾ ಮತ್ತು ಚೀನಾ ದೇಶಗಳು ಇರಾನ್ ಪಾಲಿಗೆ ಅತ್ಯಾಪ್ತ ರಾಷ್ಟ್ರಗಳಾಗಿದ್ದು, ಪ್ರತಿ ಹಂತದಲ್ಲಿಯೂ ಈ ಎರಡೂ ದೇಶಗಳು ಇರಾನ್ ಬೆನ್ನಿಗೆ ನಿಂತಿವೆ. ಹೀಗೆ ರಷ್ಯಾ ಮತ್ತು ಚೀನಾ ಆಪ್ತ ಸ್ನೇಹವನ್ನ ಇರಾನ್ ಜೊತೆಗೆ ಬೆಸೆದುಕೊಂಡು ಬಂದಿರುವ ಕಾರಣ, ನೇರವಾಗಿ ಯುದ್ಧದ ಅಖಾಡಕ್ಕೆ ಇಳಿಯಬಹುದು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಈವರೆಗೂ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ, ರಷ್ಯಾ ಮತ್ತು ಚೀನಾ ನೇರವಾಗಿ ಯುದ್ಧದ ಅಖಾಡಕ್ಕೆ ಪ್ರವೇಶ ಮಾಡುವ ಬದಲಾಗಿ ಪರೋಕ್ಷವಾಗಿ ಹೊಸ ಆಟವನ್ನ ಶುರು ಮಾಡಿವೆ. ಇರಾನ್ ಬೆನ್ನಿಗೆ ನಿಂತು ಮಾತನಾಡುತ್ತಿರುವ ರಷ್ಯಾ ಮತ್ತು ಚೀನಾ ನಾಯಕರು, ಈ ಆಟದಲ್ಲಿ ನಾವು ಕೂಡ ಇದ್ದೇವೆ ಎಂಬ ಸಂದೇಶ ರವಾನೆ ಮಾಡಿರುವುದು 3ನೇ ಮಹಾಯುದ್ಧ ಬಗ್ಗೆ ಭೀತಿ ಹೆಚ್ಚಿಸಿದೆ.

3ನೇ ಮಹಾಯುದ್ಧದ ಭೀತಿ ಏಕೆ?
ಪರಮಾಣು ಯುದ್ಧ ಎಂಬ ಪದ ಕೇಳಿದರೆ ಸಾಕು ಭಯ ತಾನಾಗಿಯೇ ಹುಟ್ಟಿಕೊಳ್ಳುತ್ತದೆ, ಏಕೆಂದರೆ ಪರಮಾಣು ಯುದ್ಧ ಕ್ಷಣಮಾತ್ರದಲ್ಲಿ ಇಡೀ ಭೂಮಿಯನ್ನೇ ಸರ್ವನಾಶ ಮಾಡಿ ಹಾಕುವ ಶಕ್ತಿಯನ್ನು ಹೊಂದಿದೆ. ಅದರಲ್ಲೂ ಇರಾನ್ ತನ್ನ ನೆಲದಲ್ಲಿ ಪರಮಾಣು ಕಾರ್ಯಕ್ರಮ ಶುರು ಮಾಡಿ ಹಲವು ವರ್ಷ ಕಳೆದು ಹೋಗಿದೆ. ಆದರೆ ಇರಾನ್ ಈವರೆಗೆ ಪರಮಾಣು ಬಾಂಬ್ ಸಿದ್ಧಪಡಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಹೀಗಿದ್ದರೂ ರಷ್ಯಾ & ಚೀನಾ ನಾಯಕರು ಮೊದಲಿನಿಂದಲೂ ಇರಾನ್ ಪರಮಾಣು ಯೋಜನೆಗೆ ಬೆಂಬಲವಾಗಿ ನಿಂತಿದ್ದಾರೆ. ಅದರಲ್ಲಿಯೂ ರಷ್ಯಾ ಅಧ್ಯಕ್ಷ ಪುಟಿನ್ ನೇರ ಇರಾನ್ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ರಷ್ಯಾ ಮೂಲದ ಪರಮಾಣು ವಿಜ್ಞಾನಿಗಳು ಈಗಲೂ ಇರಾನ್ ಪರಮಾಣು ಕಾರ್ಯಕ್ರಮಗಳ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈಗ 3ನೇ ಮಹಾಯುದ್ಧದ ಆತಂಕ ಆವರಿಸಿದೆ.
ಯಾರು ಯಾರು ಯಾರ ಪರ?
3ನೇ ಮಹಾಯುದ್ಧ ಅಕಸ್ಮಾತ್ ಶುರುವಾದರೆ ಅದು ಪರಮಾಣು ಬಾಂಬ್ಗಳ ಮೂಲಕವೇ ಶುರುವಾಗಿ ಇಡೀ ಭೂಮಿಯನ್ನೇ ನಾಶ ಮಾಡಲಿದೆ ಎಂಬ ವಾದ ಇದೆ. ಇದಕ್ಕೆ ತಕ್ಕಂತೆಯೇ ಇದೀಗ ಘಟನೆಗಳು ನಡೆಯುತ್ತಾ ಇದ್ದು, ಇರಾನ್ ತನ್ನ ಬಳಿ ಇರುವ ಅಸ್ತ್ರಗಳನ್ನ ರೆಡಿ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಪರಮಾಣು ಬಾಂಬ್ ಕೂಡ ಇಟ್ಟುಕೊಂಡು ಇರಾನ್ ಕಾಯುತ್ತಾ ಇದೆ ಎನ್ನಲಾಗುತ್ತಿದ್ದು, ಈ ಮಾತು ಸತ್ಯವಾದರೆ ಆಗ ದೊಡ್ಡ ದೊಡ್ಡ ದೇಶಗಳ ನಡುವೆ ದೊಡ್ಡ ಕಾಳಗವೇ ಶುರುವಾಗಿ ಹೋಗಲಿದೆ. ಅದರಲ್ಲೂ ರಷ್ಯಾ ಮತ್ತು ಚೀನಾ ನಡೆ ಈ ಯುದ್ಧದ ಗತಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಲಿದೆ, ಇನ್ನೊಂದು ಕಡೆ ಎರಡೂ ದೇಶಗಳು ಅಳೆದು ತೂಗಿ ಹೆಜ್ಜೆ ಇಡುತ್ತಿರುವುದು ಕುತೂಹಲ ಕೆರಳಿಸುವ ಜೊತೆಗೆ ಆತಂಕವನ್ನೂ ಜಗತ್ತಿನಾದ್ಯಂತ ಸೃಷ್ಟಿ ಮಾಡಿದೆ.
-

ಯುದ್ಧ ಇನ್ನೂ ನಿಂತಿಲ್ಲ, ಇರಾನ್ ಸೇನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | Operation Roaring Lion
-

ಇರಾನ್ ನೆಲದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಕ್ರಿಯೆ, ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ಮರೀಚಿಕೆ | Operation Roaring Lion
-

ಇರಾನ್ ನೆಲದಲ್ಲಿ ದಿಢೀರ್ ಭೂಕಂಪನ, 4.3 ತೀವ್ರತೆಯ ಭೂಕಂಪನಕ್ಕೆ ಕಾರಣ ನಿಗೂಢ | Operation Roaring Lion
-

ಇರಾನ್ನಲ್ಲಿ 1000 ದಾಟಿದ ಸಾವು: ಯುಎಸ್- ಇಸ್ರೇಲ್ ತೀವ್ರ ವಾಯುದಾಳಿಗೆ ಸಜ್ಜು, 10 ಪ್ರಮುಖಾಂಶಗಳು
-

ಭಾರತಕ್ಕೆ ಇಲ್ಲ ಪೆಟ್ರೋಲ್ ಮತ್ತು ಡೀಸೆಲ್ ಟೆನ್ಷನ್, 74 ದಿನಗಳಿಗೆ ಬೇಕಾದಷ್ಟು ತೈಲ ಸಂಗ್ರಹ | Operation Roaring Lion
-

Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
-

ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ
-

ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಹಿಂದೆ ಅಮೆರಿಕ–ಇಸ್ರೇಲ್ ಮಾಸ್ಟರ್ ಪ್ಲ್ಯಾನ್, ಯುದ್ಧತಂತ್ರದ ರಹಸ್ಯ: ಆಶಿಶ್ ಸಾರಡ್ಕ ಬರಹ
-

ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ
-

Israel-Iran War: ಬೆಂಗಳೂರು ಏರ್ಪೋರ್ಟ್ನಲ್ಲಿ 15 ವಿಮಾನಗಳ ಹಾರಾಟ ದಿಢೀರ್ ರದ್ದು, ಪ್ರಯಾಣಿಕರ ಪರದಾಟ
-

Iran Vs Israel War: 7 ದೇಶಗಳಲ್ಲಿ ಇಂದಿನ CBSE ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ
-

ಮಧ್ಯಪ್ರಾಚ್ಯ ಸಂಘರ್ಷ: ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-what-is-russia-plans-for-future-if-this-conflict-continues-011-445905.html. xn--babytilbehr-pgb.com does not claim ownership of this content. All rights remain with the original publisher.
