
International
-Hitesh Y
ಇರಾನ್‌ನ ಸುಪ್ರೀಂ ನಾಯಕ ಯತೊಲ್ಲಾ ಅಲಿ ಖಮೇನಿ ಯುಗಾಂತ್ಯವಾಗಿದೆ. ಸದ್ಯದ ಮಟ್ಟಿಗೆ ಇರಾನ್ ಸರ್ವೋಚ್ಛ ನಾಯಕನ ಅಂತ್ಯವು ವಿಶ್ವದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ. ಇದರಿಂದ ಮುಂದೆ ಏನಾಗಬಹುದು ಎನ್ನುವ 5 ಪ್ರಮುಖ ವಿಷಯಗಳ ಬಗ್ಗೆ ಹವ್ಯಾಸಿ ಬರಹಗಾರರಾದ ಆಶಿಶ್ ಸರಡ್ಕ ಅವರ ಬರಹ ಇಲ್ಲಿದೆ.
ಇರಾನ್‌ನಿಂದ ಬಂದ ಸುದ್ದಿ ಸಣ್ಣದಲ್ಲ. ಸುಮಾರು 36 ವರ್ಷಗಳ ಕಾಲ ಇರಾನ್ ಅನ್ನು ತನ್ನ ಬೆರಳ ತುದಿಯಲ್ಲಿ ಕುಣಿಸಿದ್ದ ಅಯತೊಲ್ಲಾ ಅಲಿ ಖಮೇನಿ ಯುಗ ಅಂತ್ಯವಾಗಿದೆ. ಯಾರೋ ಸತ್ತರೆ ಯಾಕೆ worry ಅಂತಾ ಯೋಚನೆ ಮಾಡ್ತಾ ಇದ್ದೀರಾ. ಇದು ಕೇವಲ ಒಬ್ಬ ವ್ಯಕ್ತಿಯ ಸಾವಲ್ಲ, ಇಡೀ ಮಧ್ಯಪ್ರಾಚ್ಯದ ‘ಪವರ್ ಬ್ಯಾಲೆನ್ಸ್’ ಅದಲು ಬದಲಾಗುವ ಮುನ್ಸೂಚನೆ. ನಮಗೆ ಆಗಬಹುದಾದ ಲಾಭ ಲಾಭ-ನಷ್ಟ ಏನು ಅಂತಾ ವಿವರವಾಗಿ ನೋಡೋಣ:

1. ಧರ್ಮಗುರುಗಳ ಜಾಗಕ್ಕೆ ‘ಮಿಲಿಟರಿ’ ಎಂಟ್ರಿ
ಇಲ್ಲಿಯವರೆಗೆ ಇರಾನ್ ಅಲ್ಲಿದ್ದದ್ದು ಖಮೇನಿ ಆಡಳಿತ.. ಆತನದೇ ಅಂತಿಮ ನಿರ್ಧಾರ. ಆತ ಒಬ್ಬ ಧರ್ಮಗುರುವಾಗಿದ್ದ (Cleric) ಕಾರಣ ಸ್ವಲ್ಪ ಮಟ್ಟಿನ ಧಾರ್ಮಿಕ ಚೌಕಟ್ಟು ಅಲ್ಲಿರುತ್ತಿತ್ತು. ಆದರೆ ಈಗ ಆತನ ಜಾಗಕ್ಕೆ ಇರಾನಿನ ಪ್ರಬಲ ಸೇನೆ IRGC (Revolutionary Guard) ನುಗ್ಗುತ್ತಿದೆ. ಇವರು ಧರ್ಮಕ್ಕಿಂತ ಯುದ್ಧವೇ ಮೊದಲು ಎನ್ನುವ ಜಾಯಮಾನದವರು. ಅಂದರೆ, ಇನ್ನು ಮುಂದೆ ಇರಾನ್ ಮತ್ತಷ್ಟು ಅಗ್ರೆಸಿವ್ ಆಗಲಿದೆ. ಇದು ಇರಾನಿನಲ್ಲಿ ಸೇನಾ ಆಡಳಿತಕ್ಕೆ ಬುನಾದಿ ಹಾಕಿದರೂ ಹಾಕಬಹುದು.
2. ದುಬೈ ಕೂಡ ಸೇಫ್ ಅಲ್ವಾ
ವಿಶ್ವದ ‘ಸೆಕೆಂಡ್ ಸೇಫೆಸ್ಟ್ ಕಂಟ್ರಿ’ ಅಂತ ಕರೆಸಿಕೊಳ್ಳುತ್ತಿದ್ದ ಯುಎಇ (UAE) ಮತ್ತು ದುಬೈ ಮೇಲೆ ಇರಾನ್ ಅಟ್ಯಾಕ್ ಮಾಡಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಜಗತ್ತಿನ ಶ್ರೀಮಂತರೆಲ್ಲಾ ಆರಾಮಾಗಿ ಹೂಡಿಕೆ ಮಾಡ್ತಿದ್ದ ದುಬೈ ಮೇಲೆ ಕ್ಷಿಪಣಿ ಬಿದ್ದಿದೆ ಎಂದರೆ, ಅಲ್ಲಿನ ಬ್ಯುಸಿನೆಸ್ ಮತ್ತು ಟೂರಿಸಂಗೆ ದೊಡ್ಡ ಪೆಟ್ಟು ಬಿದ್ದಂತೆಯೇ. ಇದು ಇಡೀ ಗಲ್ಫ್ ರೀಜನ್‌ನಲ್ಲಿ ಅನಿಶ್ಚಿತತೆ ಮೂಡಿಸಿದೆ.
3. ಹಾರ್ಮುಜ್ ಜಲಸಂಧಿ ಬಂದ್: ಚೀನಾಗೆ ಫುಲ್ ಟೆನ್ಷನ್
ಜಗತ್ತಿನ 20% ತೈಲ ಸಾಗುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಮಾರ್ಗವನ್ನು ಇರಾನ್ ಮುಚ್ಚಿದೆ. ಇದರಿಂದ ಅತಿ ಹೆಚ್ಚು ಪೆಟ್ಟು ಬೀಳುವುದು ಚೀನಾಗೆ. ಯಾಕಂದ್ರೆ ಚೀನಾ ತನ್ನ ಅರ್ಧಕ್ಕಿಂತ ಹೆಚ್ಚು ತೈಲವನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ತೈಲ ಸಿಗದಿದ್ದರೆ ಚೀನಾದ ಫ್ಯಾಕ್ಟರಿಗಳು ಸ್ತಬ್ಧವಾಗಬಹುದು, ಇದು ಇಡೀ ವಿಶ್ವದ ಸಪ್ಲೈ ಚೈನ್ ಮೇಲೆ ಪ್ರಭಾವ ಬೀರಲಿದೆ.
4. ಷೇರು ಮಾರುಕಟ್ಟೆ ಕ್ರಾಶ್ ಆಗುತ್ತಾ
ಮಾರುಕಟ್ಟೆಗೆ ಅನಿಶ್ಚಿತತೆ ಎಂದರೆ ಆಗಲ್ಲ. ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟಿದರೆ, ಭಾರತದಲ್ಲಿ ಪೆಟ್ರೋಲ್ ರೇಟ್ ಏರುವುದು ಗ್ಯಾರಂಟಿ. ಇದು ನಮ್ಮ ಕಂಪನಿಗಳ ಲಾಭದ ಮೇಲೆ ಹೊಡೆತ ನೀಡುತ್ತದೆ. ಹೂಡಿಕೆದಾರರು ಗಾಬರಿಯಿಂದ ಷೇರುಗಳನ್ನು ಮಾರಿ ಚಿನ್ನದ (Gold) ಹಿಂದೆ ಓಡುತ್ತಿದ್ದಾರೆ. ಮಾರ್ಕೆಟ್‌ನಲ್ಲಿ ಒಂದು ದೊಡ್ಡ ‘ಕರೆಕ್ಷನ್’ ಅಥವಾ ‘ಕ್ರಾಶ್’ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹೂಡಿಕೆ ಮಾಡುವಾಗ ಈಗ ಸ್ವಲ್ಪ ಹ್ಯಾಂಡ್ ಬ್ರೇಕ್ ಹಾಕೋದು ಒಳ್ಳೆಯದು.
5. ಹೊಸ ರೂಪದ ISIS ಭಯ ?
ಇರಾನ್‌ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಶುರುವಾದಾಗ, ಅಲ್ಲಿನ ಭದ್ರತೆ ಸಡಿಲವಾಗುತ್ತದೆ. ಇದನ್ನೇ ಕಾಯುತ್ತಿರುವ ISIS ನಂತಹ ಸಂಘಟನೆಗಳು ಮತ್ತೆ ಹುಟ್ಟಿಕೊಳ್ಳಬಹುದು. ಇರಾನ್ ದೇಶದ ಮೇಲೆ ಸರ್ಕಾರಗಳ ಹಿಡಿತ ತಪ್ಪಿದರೆ ಮಧ್ಯಪ್ರಾಚ್ಯ ಮತ್ತೆ ಭಯೋತ್ಪಾದನೆಯ ತಾಣವಾಗುವ ಅಪಾಯವಿದೆ.
ಇದು ಕೇವಲ ಯುದ್ಧವಲ್ಲ, ಆರ್ಥಿಕ ಸಮರ ಕೂಡ ಹೌದು. ನಮ್ಮ ಪೋರ್ಟ್ಫೋಲಿಯೋ ಮತ್ತು ಜೇಬಿನ ಮೇಲೆ ಇದರ ಪರಿಣಾಮ ದೀರ್ಘಕಾಲ ಇರಬಹುದು. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ, ಜಾಗರೂಕರಾಗಿರಿ!
Disclaimer: This content was automatically imported from a third-party source via RSS feed. The original source is: https://kannada.oneindia.com/news/international/after-ali-khamenei-era-ends-5-possible-global-impacts-on-oil-gold-and-india-s-economy-ashish-sara-011-445627.html. xn--babytilbehr-pgb.com does not claim ownership of this content. All rights remain with the original publisher.
