
International
-Malathesha M
ಪ್ರಧಾನಿ ಮೋದಿ ಅವರು ಈಗ ಇಸ್ರೇಲ್ ಭೇಟಿ ಕೈಗೊಂಡಿದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಸಾಗುತ್ತಿದ್ದು, ಈಗ ಒಪ್ಪಂದಗಳನ್ನ ಮಾಡಿಕೊಳ್ಳಲು ಎರಡೂ ದೇಶಗಳು ಸಿದ್ಧತೆ ನಡೆಸಿವೆ. ಈ ಕಾರಣಕ್ಕೆ ಮಹತ್ವದ ಭೇಟಿ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಇನ್ನಷ್ಟು ಗಟ್ಟಿ ಮಾಡಲು ಮುಂದಾಗಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲಿ ಇರಾನ್ & ಅಮೆರಿಕ ನಡುವೆ ಘೋರ ತಿಕ್ಕಾಟ ನಡೆಯುತ್ತಿದ್ದು, ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಇಂತಹ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿರುವುದು ಪ್ರಪಂಚದ ಗಮನ ಸೆಳೆದಿದೆ.
2017 ಸಮಯದಲ್ಲಿ ಮೊದಲ ಬಾರಿಗೆ ಇಸ್ರೇಲ್ ದೇಶಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಆ ನಂತರ ಈಗ ಮತ್ತೆ ಸುಮಾರು 9 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಇಸ್ರೇಲ್ ಭೇಟಿಯನ್ನ ಕೈಗೊಂಡಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಇಂದು ಪ್ರಧಾನಿ ಮೋದಿ ಅವರು ಇಸ್ರೇಲ್ ನೆಸೆಟ್ ಅನ್ನ ಉದ್ದೇಶಿಸಿ ಮಾತನಾಡಲಿದ್ದು, ಇಸ್ರೇಲ್ ಸಂಸತ್ ಸದಸ್ಯರ ಎದುರು ಭಾರತ ಹಾಗೂ ಇಸ್ರೇಲ್ ಸ್ನೇಹ ಇನ್ನಷ್ಟು ಗಟ್ಟಿ ಮಾಡಲಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರು, ಇಸ್ರೇಲ್ ಸಂಸತ್ ‘ನೆಸೆಟ್’ ಅನ್ನ ಉದ್ದೇಶಿಸಿ ಮಾತನಾಡಲಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು. ಇದರ ಜೊತೆಗೆ ಹಲವು ಕ್ಷೇತ್ರಗಳಲ್ಲಿ ಭಾರತ ಹಾಗೂ ಇಸ್ರೇಲ್ ನಡುವೆ ಮಹತ್ವದ ಒಪ್ಪಂದ ಇದೀಗ ನಡೆಯಲಿದೆ. ಇದು ಆರ್ಥಿಕವಾಗಿ ಹಾಗೂ ಭಾರತಕ್ಕೆ ಭದ್ರತೆ ವಿಚಾರದಲ್ಲಿ ಕೂಡ ಲಾಭ ತರಲಿದೆ.

ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಪ್ಲಾನ್
ಪ್ರಧಾನಿ ಮೋದಿ ಅವರು ಇದೀಗ ಇಸ್ರೇಲ್ ಜೊತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ, ಈ ಪೈಕಿ ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಭಾರತ ಮತ್ತು ಇಸ್ರೇಲ್ ಒಟ್ಟಿಗೆ ಕೆಲಸ ಮಾಡುವುದು ಸೇರಿದಂತೆ ತಂತ್ರಜ್ಞಾನ, ಕೃಷಿ, ಸೈಬರ್ ಭದ್ರತೆ ಹಾಗೂ ವ್ಯಾಪಾರ ಸಂಬಂಧ ವೃದ್ಧಿ ವಿಚಾರವಾಗಿ ಕೂಡ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಜಗತ್ತಿಗೇ ತಲುಪಿದೆ ಹೊಸ ಸಂದೇಶ
ಬೆಂಜಮಿನ್ ನೆತನ್ಯಾಹು ಅವರು ಅದ್ಧೂರಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ್ದು, ಜಗತ್ತಿನ ಪ್ರತಿಯೊಂದು ದೇಶಕ್ಕೂ ಸಂದೇಶ ತಲುಪಿಸಿದಂತೆ ಆಗಿದೆ. ಮತ್ತೊಂದು ಕಡೆ ಇದೇ ವೇಳೆ ಇಸ್ರೇಲ್‌ನ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರ ಜೊತೆಗೆ ಕೂಡ ಪ್ರಧಾನಿ ಮೋದಿ ಅವರು ಚರ್ಚೆ ನಡೆಸಲಿದ್ದಾರೆ. ಹಾಗೆಯೇ ಇಸ್ರೇಲ್ ದೇಶದಲ್ಲಿ ಇರುವ ಭಾರತೀಯರ ಜೊತೆಯಲ್ಲಿ ಪ್ರಧಾನಿ ಅವರು ಮಾತನಾಡಲಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/pm-narendra-modi-israel-visit-is-attracting-the-world-and-several-subjects-will-be-discussed-011-445097.html. xn--babytilbehr-pgb.com does not claim ownership of this content. All rights remain with the original publisher.
