ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್‌ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ | Iran Appoints New Supreme Leader Mojtaba Hosseini Amid Escalating US-Israel Joint Military Attacks

International

oi-Shankrappa Parangi

Middle East War Update: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಡಿದೆ. ಇರಾನ್ ಮೇಲಿನ ಯುಎಸ್‌-ಇಸ್ರೇಲ್ ಜಂಟಿ ದಾಳಿ, ಪ್ರತಿದಾಳಿ ಮುಂದುವರಿದಿದೆ. ಈ ಮೂರು ರಾಷ್ಟ್ರಗಳು ಶಾಂತಿ ಸಂಧಾನ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಸೋಮವಾರ (ಮಾರ್ಚ್ 09) ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿದೆ. ಸಂಧಾನ ನಿರ್ಧಾರ ಇಸ್ರೇಲ್‌ ಅಧ್ಯಕ್ಷರ ಜತೆ ಸೇರಿ ನಿರ್ಧರಿಸುತ್ತೇವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತೈಲ ಕೇಂದ್ರಗಳ ಮೇಲೆನಾದರೂ ದಾಳಿ ನಡೆದಿದ್ದೇ ಆದಲ್ಲಿ ಪರಿಸರದ ಮೇಲೆ ಹಾನಿ ಆಗಲಿದ್ದು, ಭವಿಷ್ಯದಲ್ಲಿ ಸಾಕಷ್ಟು ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇಂದು ಯುದ್ಧದ ಮತ್ತದರ ಸುತ್ತಮುತ್ತ ಏನೆಲ್ಲ ಬೆಳವಣಿಗೆ ಆಗಿದೆ ಎಂಬುದರ ಪ್ರಮುಖಾಂಶಗಳು ಇಲ್ಲಿವೆ.

* ಇರಾನ್‌ ಮೇಲೆ ಯುಎಸ್‌ ಹಾಗೂ ಇಸ್ರೇಲ್ ಜಂಟಿ ವೈಮಾನಿಕ ದಾಳಿ ಮುಂದುವರಿಸಿವೆ. ಈ ಯುದ್ಧ ಯಾವಾಗ ಅಂತ್ಯಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ನಾನು ಹಾಗೂ ನೆತನ್ಯಾಹು ಇಲ್ಲದಿದ್ದರೆ ಇಸ್ರೇಲ್ ರಾಜ್ಯ ಸರ್ವನಾಶವಾಗುತ್ತಿತ್ತು ಎಂದಿದ್ದಾರೆ.

Iran

* ಜಂಟಿ ವೈಮಾನಿಕ ದಾಳಿಗೆ ಒಳಗಾದ ಇರಾನ್ ತನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ​​ಯನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೆ ಹಾಗೂ ಇಸ್ರೇಲ್ ಹತ್ಯೆ ಎಚ್ಚರಿಕೆ ನಡುವೆ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಿದೆ.

* ಇರಾನ್ ದೇಶ ಕಟ್ಟಿಹಾಕಲು ಅಮೆರಿಕ ಹಲವು ಮಾರ್ಗೋಪಾಯಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಪೈಕಿ ಇರಾನ್​ನ ಹಲವು ಮಿಲಿಟರಿ ಮತ್ತು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಂದ ಸಾಕಷ್ಟು ದಾಳಿ ಈಗಾಗಲೇ ನಡೆದಿದೆ. ಇದರ ಮಧ್ಯೆ ಇರಾನ್​ನ ಆರ್ಥಿಕತೆಯ ಬೆನ್ನೆಲುಬಾಗಿರುವ ಒಂದು ದ್ವೀಪದ ಮೇಲೆ ದಾಳಿಗೆ ಯುಎಸ್ ಸಂಚು ರೂಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

* ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡು ಒಂದು ವೇಳೆ ತೈಲ ಕೇಂದ್ರಗಳ ಮೇಲೆ ದಾಳಿ ನಡೆದಿದ್ದೇ ಆದಲ್ಲಿ ಸಾಕಷ್ಟು ಹಾನಿ ಉಂಟಾಗಲಿದೆ. ಅಂದರೆ ಆರ್ಥಿಕ ಹಾನಿ ಜೊತೆಗೆ ಪರಿಸರ ಹಾನಿ ಸಹ ಉಂಟಾಗಲಿದೆ. ತೈಲ ಬಾವಿಗಳಿಗೆ ಬೆಂಕಿ ಬಿದ್ದರೆ ಅದರ ಹೊಗೆ ನೂರಾರು ಕಿಲೋ ಮೀಟರ್ ದೂರದವರೆಗೆ ಹಬ್ಬುತ್ತದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ರೋಗದ ಭೀತಿ ಕಾರಣವಾಗಲಿದೆ.

* ಅಮೆರಿಕ 1991ರಲ್ಲಿ ಗಲ್ಫ್ ಯುದ್ಧದ ಸಂದರ್ಭದಲ್ಲಿ ಇರಾಕ್​​ ತೈಲ ಕೇಂದ್ರಗಳ ಮೇಲೆ ದಾಳಿ ಮಾಡಿತ್ತು. ಬಳಿಕ ಗಲ್ಫ್ ವಾರ್ ಸಿಂಡ್ರೋಮ್ ರೋಗ ಕಾಣಿಸಿಕೊಂಡಿತ್ತು. ಅಮೆರಿಕದ ಸಾವಿರಾರು ಸೈನಿಕರು 30 ವರ್ಷಗಳ ನಂತರವೂ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಅದೇ ರೀತಿ ಇರಾನ್‌ ಮೇಲೆ ನಡೆದರೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

* ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದೆ. ಈವರೆಗೆ ಸುಮಾರು 1,332 ಇರಾನ್ ನಾಗರಿಕರು ಮೃತಪಟ್ಟಿದ್ದಾರೆ. ಇರಾನ್‌ನ ತೈಲ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಿರಂತರ ದಾಳಿ ಮುಂದುವರಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಅವರು ನಾವು ಶರಣಾಗಲ್ಲ, ದಾಳಿಕೋರರಿಗೆ ತಕ್ಕ ಪಾಠ ಕಲಿಸುವುದಾಗಿ ತಿಳಿಸಿದ್ದಾರೆ.

* ಇಸ್ರೇಲ್ ವಾಯುಪಡೆಯು ಇರಾನ್ ದೇಶದ ಟೆಹರಾನ್‌ನಲ್ಲಿರುವ ಐದು ಪ್ರಮುಖ ತೈಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಶನಿವಾರದಿಂದ ದಾಳಿ ನಡೆಸುತ್ತಿದೆ. ಈ ದಾಳಿಯು ಮುಂದುವರಿದಿದೆ. ಭೀಕರ ದಾಳಿಗೆ ನಗರ ಕಾಣದಷ್ಟು ಎತ್ತರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ತೈಲ ಟ್ಯಾಂಕರ್‌ಗಳಿಂದ ತೈಲ ಸೋರಿಕೆ ಆಗಿದೆ. ವ್ಯಾಪಕ ಬೆಂಕಿ ಸಹ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-appoints-new-supreme-leader-mojtaba-hosseini-amid-escalating-us-israel-joint-military-attacks-446505.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo