
India
oi-Shankrappa Parangi
ಹೊಟ್ಟೆಪಾಡಿಗೆ ದೈನಂದಿನ ಜೀನವದಲ್ಲಿ ಒಂದಿಲ್ಲ ಒಂದು ಕೆಲಸ ಮಾಡುವ ಮನುಷ್ಯರಿಗೆ ಒಂದಿಲ್ಲೊಂದು ಅಪಾಯಗಳು ಎದುರಾಗುತ್ತವೆ. ಅದರಲ್ಲಿ ಕೆಲವು ಜೀವಕ್ಕೆ ಕಂಟಕಪ್ರಾಯವಾದವುಗಳು ಇರುತ್ತವೆ. ಕೊಂಚ ನಿರ್ಲಕ್ಷ್ಯ ವಹಿಸಿದರೂ ಸಾಕು ಪ್ರಾಣ ಪಕ್ಷಿ ಹಾರಿ ಹೋಗಿ ಬಿಡುತ್ತದೆ. ಅಂಥದ್ದೆ ಒಂದು ಘಟನೆ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದ್ದು, ಅನೇಕ ಮೂಟೆಗಳು ಮೈ ಮೇಲೆ ಬಿದ್ದರೂ ಸಹಿತ ಕಾರ್ಮಿಕ ಮಹಿಳೆ ಕ್ಷಣಾರ್ಧದಲ್ಲಿ ಪ್ರಾಣಾಪಾರದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಮಹಿಳೆ ಆಶ್ಚರ್ಯಕರವಾಗಿ ಬದುಕಿದ್ದಾರೆ.
ಈ ಘಟನೆ ಮುಂಬೈನ ವಾಶಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ವಿಡಿಯೋ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸೇರಿ ಇತರ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಎರಡು ಬದಿ ಅಕ್ಕಿ, ಇನ್ನಿತರ ಧವಸ ಧಾನ್ಯಗಳ ಮೂಟೆಗಳಿವೆ. ನಡುವೆ ಮಹಿಳಾ ಕಾರ್ಮಿಕಳೊಬ್ಬಳು ಎಂದಿನಂತೆ ಕಸ ಗುಡಿಸುತ್ತ ತಮ್ಮ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ.

ನೋಡ ನೋಡುತ್ತಿದ್ದಂತೆ ಒಂದು ಕಡೆಗಿನ ಧಾನ್ಯದ ಮೂಟೆಗಳು ಅವರ ಮೈ ಮೇಲೆ ಉರುಳಿ ಬೀಳುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಕೊಂಚ ದೂರದಲ್ಲಿ ಜನರಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ನಿರತಾದ ಮಹಿಳೆಗೆ ನಿಧಾನವಾಗಿ ಆಳೆತ್ತರದಲ್ಲಿ ಜೋಡಿಸಿ ಒಟ್ಟಲಾಗಿದ್ದ ಮೂಟೆಗಳು ತನ್ನತ್ತ ವಾಲುತ್ತಿರುವುದು ಗಮನಕ್ಕೆ ಬಂದಿರುವುದಿಲ್ಲ. ಇನ್ನೇನು ಕತ್ತು ಎತ್ತಿ ಮೇಲೆ ನೋಡುವಷ್ಟರಲ್ಲಿ ಮೂಟೆಗಳು ಅವರ ಮೇಲೆ ಬೀಳುತ್ತವೆ. ಕಿಟಾರನೇ ಮಹಿಳೆ ಚೀರಿದ್ದು, ಅಕ್ಕಪಕ್ಕದವರಿಗೆ ಕೇಳಿಸಿದೆ.
ಓಡೋಡಿ ಬಂದ ‘ನಿಜ ಜೀವನದ ನಾಯಕರು’
ಹತ್ತಾರು ಮೂಟೆಗಳು ಅವರ ಮೇಲೆ ಬೀಳುತ್ತಿದ್ದಂತೆ ಅಲ್ಲಿಯೇ ಇದ್ದ ಮೂಟೆ ಇಳಿಸುವ ಕೆಲವು ಮಥಾಡಿ ಪುರುಷ ಕಾರ್ಮಿಕರು ನೋಡಿದ್ದಾರೆ. ಒಂದು ಕ್ಷಣವು ವಿಳಂಬ ಮಾಡದೇ ಓಡೋಡಿ ಬಂದು ಮೂಟೆಗಳ ಮೇಲೆ ಕಾಲಿಟ್ಟು ಒಂದು ನಿಮಷಕ್ಕೂ ಕಡಿಮೆ ಸಮಯದಲ್ಲಿ ಮಹಿಳೆ ಮೇಲಿನ ಮೂಟೆಗಳನ್ನು ಸರಿಸಿ ಅವರನ್ನು ರಕ್ಷಿಸುತ್ತಾರೆ. ಕೊಂಚ ವಿಳಂಬವಾಗಿದ್ದರು ಆಕೆ ಚೀಲದಡಿ ಉಸಿರುಗಟ್ಟುತ್ತಿತ್ತು. ಜೀವಕ್ಕೆ ಹಾನಿ ಆಗುವ ಸಂಭವವಿತ್ತು. ಅದರೆ ಅಲ್ಲಿದ್ದ ಪುರುಷರು ತೋರಿದ ಸಮಯಪ್ರಜ್ಞೆ, ಕಾಳಜಿ, ಸಹಾಯಹಸ್ತದಿಂದ ಆ ಮಹಿಳೆ ಬದುಕಿದ್ದಾಳೆ. ಹೀಗಾಗಿ ಅವರಿಗೆ ‘ನಿಜ ಜೀವನದ ನಾಯಕರು’ ಎಂದು ವಿಡಿಯೋ ಶಿರ್ಷಿಕೆ ಬರೆಯಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು, ಕೆಲಸ ಕಡೆಗಳಲ್ಲಿ ಜಾಗರೂಕತೆ ವಹಿಸುವಂತೆ, ಸದಾ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ. ಮತ್ತೆ ಕೆಲವು ಪುರುಷ ಕಾರ್ಮಿಕರ ಸಮಯ ಪ್ರಜ್ಞೆ, ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
Real-life heroes in Mumbai’s Vashi APMC market: A woman gets buried under collapsing heavy grain sacks while cleaning. Fellow Mathadi workers rush in from all sides, climb over stacks & pull the bags off her in under a minut🫡
— Ghar Ke Kalesh (@gharkekalesh) April 10, 2026
Disclaimer: This content was automatically imported from a third-party source via RSS feed. The original source is: https://kannada.oneindia.com/news/india/video-viral-a-woman-miraculously-survives-after-sacks-collapse-on-her-at-mumbai-apmc-market-450113.html. xn--babytilbehr-pgb.com does not claim ownership of this content. All rights remain with the original publisher.
