ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಗಾಯದ ಬಿಸಿ; ಸ್ಟಾರ್ ವೇಗಿ ಹೇಜಲ್‌ವುಡ್ ಆಡುವುದು ಅನುಮಾನ | Josh Hazlewood Doubtful for Royal Challengers Bengaluru in IPL 2026 Opener vs Sunrisers Hyderabad

Sports

oi-Madhusudhan KR

IPL 2026 RCB: ಈಗಾಗಲೇ ಐಪಿಎಲ್ 2026 ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಈ ನಡುವೆಯೇ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮಾರ್ಚ್ 28ರ ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಪರ ಅವರು ಆಡುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ಹೇಜಲ್‌ವುಡ್ ಕಳೆದ ನವೆಂಬರ್‌ನಲ್ಲಿ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯದ ನಂತರ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಆ ಪಂದ್ಯದ ಸಮಯದಲ್ಲೇ ಗಾಯಗೊಂಡಿದ್ದ ಅವರು, 2025-26ರ ಆಶಸ್ ಸರಣಿಯಿಂದಲೂ ಹೊರಗುಳಿದಿದ್ದರು. ಇನ್ನೂ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯುವ ಸ್ಟಾರ್ ಬೌಲರ್ ಆಗಿದ್ದಾರೆ.

Josh Hazlewood Doubtful for Royal Challengers Bengaluru in IPL 2026 Opener vs Sunrisers Hyderabad

ಐಪಿಎಲ್ 2026ರ ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಹೇಜಲ್‌ವುಡ್ ಲಭ್ಯತೆ ಅತಿ ಮುಖ್ಯವಾಗಿದೆ. ಆದರೆ, ಅವರು ಗಾಯದಿಂದ ಬಳಲುತ್ತಿರುವ ಕಾರಣ ಅಂದಿನ ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬಂದಿವೆ.

ಟಿ20 ವಿಶ್ವಕಪ್ ವೇಳೆ ಹೇಜಲ್‌ವುಡ್ ಅವರನ್ನು ಆಸ್ಟ್ರೇಲಿಯಾ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೂ, ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಕೇವಲ ಐದು ದಿನಗಳ ಮೊದಲು ಅವರು ಮೊಣಕಾಲಿನ ಗಾಯಕ್ಕೆ ಒಳಗಾದರು. ನಂತರ ಅವರ ಬದಲಿಗೆ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ತಂಡವನ್ನು ಸೇರಿಕೊಂಡರು. ಆದರೂ, ಪ್ರಮುಖ ಆಟಗಾರರ ಅನುಪಸ್ಥಿತಿಯಿಂದಾಗಿ ಕಳಪೆ ಪ್ರದರ್ಶನ ನೀಡಿದ ಆಸ್ಟ್ರೇಲಿಯಾವು ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬೀಳಬೇಕಾಯಿತು.

ಗಾಯದ ಸಮಸ್ಯೆಗೆ ಒಳಗಾಗಿರುವ ಹೇಜಲ್‌ವುಡ್

“ಹೇಜಲ್‌ವುಡ್ ಕಳೆದ ಕೆಲವು ತಿಂಗಳುಗಳಿಂದ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಇನ್ನೂ ಫಿಸಿಯೋ ಆರೈಕೆಯಲ್ಲಿದ್ದಾರೆ. ಆದ್ದರಿಂದ ಐಪಿಎಲ್‌ನಲ್ಲಿ ಆಡುತ್ತಾರೆಯೇ ಎಂಬುದು ವೈದ್ಯಕೀಯ ಅನುಮತಿ ಸಿಗುವುದರ ಮೇಲೆ ಅವಲಂಬಿತವಾಗಿದೆ,” ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಸಮಯವಿದ್ದು, ಅವರು ಚೇತರಿಸಿಕೊಂಡು ತಂಡಕ್ಕೆ ಮರಳುವ ಭರವಸೆಯಲ್ಲಿ ಫ್ರಾಂಚೈಸಿ ಹಾಗೂ ಅಭಿಮಾನಿಗಳು ಇದ್ದಾರೆ.

ಹೇಜಲ್‌ವುಡ್ ಅವರ ಆಟದ ಭವಿಷ್ಯವು ಸಂಪೂರ್ಣವಾಗಿ ವೈದ್ಯಕೀಯ ಫಿಟ್ನೆಸ್ ವರದಿಯ ಮೇಲೆ ನಿಂತಿದೆ. ಆರ್‌ಸಿಬಿ ತಂಡವು ಅವರ ಚೇತರಿಕೆಗಾಗಿ ಕೊನೆಯ ಕ್ಷಣದವರೆಗೂ ಕಾಯುವ ಸಾಧ್ಯತೆಯಿದೆ. ಬಿಸಿಸಿಐ ಮಾರ್ಚ್ 11ರಂದು ಐಪಿಎಲ್ 2026ರ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ರಾಜ್ಯ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ ನಂತರ, ಸಂಪೂರ್ಣ ವೇಳಾಪಟ್ಟಿಯನ್ನು ಸಾರ್ವಜನಿಕಗೊಳಿಸಲಾಗುವುದು.

ಕ್ರೀಡಾಂಗಣ ಪರಿಶೀಲನೆ ಸಾಧ್ಯತೆ

ಆದಾಗ್ಯೂ, ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಕರ್ನಾಟಕ ಸರ್ಕಾರದ ತಜ್ಞರ ಸಮಿತಿಯು ಅನುಮೋದನೆ ನೀಡಬೇಕಿದೆ. ಕ್ರೀಡಾಂಗಣವು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಿದೆಯೇ ಎಂದು ನಿರ್ಧರಿಸಲು, ಸಮಿತಿಯು ಮಾರ್ಚ್ 13ರಂದು ಕ್ರೀಡಾಂಗಣವನ್ನು ಪರಿಶೀಲಿಸುವ ನಿರೀಕ್ಷೆಯಿದೆ ಮತ್ತು ಪಂದ್ಯದ ದಿನದ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ಅಣಕು ಪ್ರದರ್ಶನವನ್ನು ನಡೆಸಲಿದೆ ಎನ್ನುವ ಮಾಹಿತಿಯಿದೆ.

ಆರ್‌ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹೇಜಲ್​ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ನುವಾನ್ ತುಷಾರ, ಸಾತ್ವಿಕ್ ಡೆಸ್ವಾಲ್, ರಸಿಖ್ ಸಲಾಮ್ ದಾರ್, ಸುಯೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೇಕಬ್ ಡಫಿ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/josh-hazlewood-doubtful-for-royal-challengers-bengaluru-in-ipl-2026-opener-vs-sunrisers-hyderabad-446955.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo