ಐಪಿಎಲ್‌ 2026 ಉದ್ಘಾಟನಾ ಪಂದ್ಯಕ್ಕೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಆಟಗಾರ ಔಟ್‌ | Yash Dayal Missing from Royal Challengers Bengaluru Camp Ahead of IPL 2026 Amid Controversy

Sports

oi-Madhusudhan KR

RCB Yash Dayal: ಐಪಿಎಲ್ 19ನೇ ಸೀಸನ್‌ ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಎಸ್‌ಆರ್‌ಎಚ್‌ ಎದುರಿಸಲು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆದರೆ, ಕಳೆದ ಬಾರಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ವೇಗಿ ಯಶ್ ದಯಾಳ್ ಅವರ ಗೈರುಹಾಜರಿ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ತಂಡದ ಬಸ್ಸಿನ ಮೇಲೆ ಎಲ್ಲಾ ಪ್ರಮುಖ ಆಟಗಾರರ ಫೋಟೋಗಳನ್ನ ಹಾಕಲಾಗುತ್ತದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆರ್‌ಸಿಬಿ ತಂಡದ ಹೊಸ ಬಸ್ಸಿನ ಹೊರಭಾಗದಲ್ಲಿ ಯಶ್ ದಯಾಳ್ ಅವರ ಫೋಟೋ ಕಾಣಿಸುತ್ತಿಲ್ಲ. ಉಳಿದೆಲ್ಲಾ ಆಟಗಾರರ ಚಿತ್ರಗಳಿದ್ದರೂ ದಯಾಳ್ ಅವರ ಚಿತ್ರ ಇಲ್ಲದಿರುವುದು, ಅವರು ತಂಡದಿಂದ ಹೊರಬಿದ್ದಿದ್ದಾರೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ.

Yash Dayal Missing from Royal Challengers Bengaluru Camp Ahead of IPL 2026 Amid Controversy

ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌

ಜೈಪುರದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆ ಯಶ್‌ ದಯಾಳ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರು ಮದುವೆಯ ಆಮಿಷವೊಡ್ಡಿ ದೌರ್ಜನ್ಯ ಎಸಗಿದ ಆರೋಪ ಹೊರಿಸಿದ್ದಾರೆ. ಈ ಕಾನೂನು ಪ್ರಕ್ರಿಯೆಗಳ ಕಾರಣದಿಂದಾಗಿ ಅವರು ಕಳೆದ ವರ್ಷದ ಯುಪಿ ಟಿ20 ಲೀಗ್ ಮತ್ತು ದೇಶೀಯ ಕ್ರಿಕೆಟ್ ಸರಣಿಗಳಿಂದಲೂ ದೂರ ಉಳಿದಿದ್ದರು.

ತಂಡದ ಮ್ಯಾನೇಜ್‌ಮೆಂಟ್ ಮೌನ

ಆರ್‌ಸಿಬಿ ಇವರನ್ನು 5 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಂಡಿತ್ತು. ಆದರೂ, ಈಗಿನ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಫ್ರಾಂಚೈಸಿಯು ಅವರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ತರಬೇತಿ ಶಿಬಿರದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಸೇರಿದಂತೆ ಎಲ್ಲಾ ಆಟಗಾರರು ಭಾಗಿಯಾಗಿದ್ದಾರೆ. ಆದರೆ, ಯಶ್ ದಯಾಳ್ ಕಾಣಿಸಿಕೊಳ್ಳದಿರುವುದು ಅವರು ಈ ಸೀಸನ್‌ನಿಂದ ಹೊರಗುಳಿದಿದ್ದಾರೆಯೇ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಸ್‌ ಹೊರಗಡೆ ಕಾಣಿಸದ ದಯಾಳ್‌ ಫೋಟೋ

ಸೀಸನ್‌ನ ಉದ್ಘಾಟನಾ ಪಂದ್ಯವು ಸಮೀಪಿಸುತ್ತಿದ್ದರೂ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರಗಳಲ್ಲಿ ಯಶ್ ದಯಾಳ್ ಗೈರುಹಾಜರಾಗುತ್ತಿದ್ದಾರೆ. ಇದು ಆರ್‌ಸಿಬಿ ತಂಡದ ಸಿದ್ಧತೆಗಳ ಕುರಿತು ಈಗ ಅತಿ ದೊಡ್ಡ ಚರ್ಚೆಯ ವಿಷಯವಾಗಿದೆ. ಅಲ್ಲದೆ, ತಂಡದ ಹೊಸ ಬಸ್ಸಿನ ಹೊರಗಡೆ ಇವರ ಫೋಟೋ ಇಲ್ಲದಿರುವುದು ಹಲವು ಪ್ರಶ್ನೆಗಳನ್ನು ಎದ್ದಿವೆ.

ಆರ್‌ಸಿಬಿ ಕನಸು ನನಸು ಮಾಡಿದ್ದ ದಯಾಳ್

27 ವರ್ಷದ ಯಶ್ ದಯಾಳ್ ಅವರು ಆರ್‌ಸಿಬಿ 2025ರ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ್ದರು. ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆ ಸೀಸನ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ, ಆರ್‌ಸಿಬಿ ಫ್ರಾಂಚೈಸಿಯ ದಶಕಗಳ ಕಾಲದ ಚೊಚ್ಚಲ ಟ್ರೋಫಿ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್ 2026ರ ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ, ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹಿನ್ನೆಲೆ ಮಾರ್ಚ್ 20ರಿಂದಲೇ ತಂಡದ ತರಬೇತಿ ಶಿಬಿರಗಳು ಆರಂಭವಾಗಿದ್ದು, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ತಂಡದ ಪ್ರಮುಖ ವೇಗಿ ಯಶ್ ದಯಾಳ್ ಮಾತ್ರ ಶಿಬಿರದಿಂದ ಗೈರುಹಾಜರಾಗಿರುವುದು ಚರ್ಚೆಗೆ ಕಾರಣವಾಗುದೆ.

ವರದಿಗಳ ಪ್ರಕಾರ, ಅವರ ವಿರುದ್ಧ ಎರಡು ಪ್ರಮುಖ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಒಂದು ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೂ ಸೇರಿದೆ. ಜೈಪುರದ ಯುವತಿಯೊಬ್ಬರು ಸಾಂಗಾನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಿಕೆಟ್ ವೃತ್ತಿಜೀವನದಲ್ಲಿ ಸಹಾಯ ಮಾಡುವ ಭರವಸೆ ನೀಡಿ ದಯಾಳ್ ಅವರು ದೀರ್ಘಕಾಲದವರೆಗೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಪ್ರಕಾರ, ಈ ಘಟನೆಗಳು ನಡೆದಾಗ ಸಂತ್ರಸ್ತ ಯುವತಿ ಅಪ್ರಾಪ್ತೆಯಾಗಿದ್ದರು ಎನ್ನಲಾಗಿದೆ. ಅಲ್ಲದೆ, ಬೆದರಿಕೆ ಹಾಕಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಂತರ, ಯಶ್ ದಯಾಳ್ 2025ರ ಐಪಿಎಲ್ ಫೈನಲ್ ಪಂದ್ಯದ ಬಳಿಕ ಯಾವುದೇ ಕ್ರಿಕೆಟ್‌ ಪಂದ್ಯಗಳಲ್ಲಿ ಭಾಗವಹಿಸಿಲ್ಲ. ಪ್ರಸ್ತುತ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಕಾರಣದಿಂದಾಗಿ ಅವರನ್ನು ಉತ್ತರ ಪ್ರದೇಶದ ದೇಶೀಯ ಕ್ರಿಕೆಟ್ ತಂಡಕ್ಕೂ ಆಯ್ಕೆ ಮಾಡಲಾಗಿಲ್ಲ. ಇನ್ನೂ ಯಶ್ ದಯಾಳ್ ಅವರನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ, ಬಿಸಿಸಿಐ ಅಧಿಕಾರಿಗಳು ಮತ್ತು ಅವರ ಬಾಲ್ಯದ ತರಬೇತುದಾರರಿಗೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅವರು ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದ್ದು, ಸದ್ಯ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ, ಯಶ್ ದಯಾಳ್ ಅವರ ಪತ್ನಿ ಶ್ವೇತಾ ಪುಂಡೀರ್ ಹಂಚಿಕೊಂಡಿರುವ ವಿಡಿಯೋದಲ್ಲಿ ದಯಾಳ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಆದರೆ, ಈ ಅಭ್ಯಾಸ ಶಿಬಿರವು ಬೆಂಗಳೂರಿನ ಆರ್‌ಸಿಬಿ ಕ್ಯಾಂಪ್‌ನಲ್ಲಿ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/yash-dayal-missing-from-royal-challengers-bengaluru-camp-ahead-of-ipl-2026-amid-controversy-447899.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo