
Karnataka
-Shankrappa Parangi
ಬೆಂಗಳೂರು: ಕರ್ನಾಟಕದ ಕಂದಾಯ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ತ್ವರಿತವಾಗಿ ವಿಲೆವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಈ ಮೂಲಕ ಹತ್ತಾರು ಸಾವಿರ ಪ್ರಕರಣಗಳನ್ನು ರಾಜ್ಯಾದ್ಯಂತ ವಿಲೇವಾರಿ ಮಾಡಲಾಗುತ್ತಿದ್ದು, ಬಾಕಿ ಪ್ರಕರಣಗಳಿಗೆ ತ್ವರಿತವಾಗಿ ಇತ್ಯರ್ಥವಾಗಲಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಗುರುವಾರ (ಫೆ.19) ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ವಿಶೇಷ ನ್ಯಾಯಾಲಯಗಳು ಹೆಚ್ಚು ಸಂಖ್ಯೆಯಲ್ಲಿ ವಿಚಾರಣೆ ನಡೆಸಲು ಬೇಕಾದ ನ್ಯಾಯಾಲಯ ಸಭಾಂಗಣ, ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಚಿವರು ಸೂಚಿಸಿದರು.

2 ದಶಕದ ವ್ಯಾಜ್ಯಗಳು ವಿಲೇವಾರಿಯಾಗದೇ ಬಾಕಿ!
ಬಾಕಿ ಇರುವ ಪ್ರಕರಣಗಳ ಪೈಕಿ, ಗರಿಷ್ಠ ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವುದನ್ನು ಗಮನಿಸಿ ಈ ಪ್ರಕರಣಗಳನ್ನು ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಕೈಗೆತ್ತಿಕೊಂಡು ವಿಲೇವಾರಿಗೆ ವಿಶೇಷ ಪ್ರಯತ್ನ ಆರಂಭಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 4937 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಬಹುತೇಕ ಅಂದರೆ 4154 ಪ್ರಕರಣಗಳು 1 ವರ್ಷಕ್ಕೂ ಮೇಲ್ಪಟ್ಟು ಉಳಿದಿರುವ ಪ್ರಕರಣ. ಇವುಗಳನ್ನು 20 ವರ್ಷ ಗಳವರೆಗಿನ ಸಮಯದಿಂದ ವಿಲೇವಾರಿ ಆಗದೇ ಬಾಕಿ ಇರಿಸಿಕೊಳ್ಳಲಾಗಿದೆ.
ಇವುಗಳ ವಿಲೇವಾರಿ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಿಲ್ಲ. ಇಂತಹ ಎಲ್ಲಾ ಪ್ರಕರಣಗಳನ್ನು ಗುರುತಿಸಿ, ಸಂಪೂರ್ಣವಾಗಿ ಆನ್‌ಲೈನ್ ಕಂದಾಯ ನ್ಯಾಯಾಲಯ ವ್ಯವಸ್ಥೆಗೆ ತಂದು ಪಾರದರ್ಶಕವಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ಸುಧಾರಣೆ ತರಲಾಗಿದೆ. ಆನ್‌ಲೈನ್ ಪದ್ಧತಿಯಿಂದ ಬಾಕಿ ಅವಧಿ, ಪ್ರಗತಿ, ಆದೇಶ ಮತ್ತು ಅನುಷ್ಠಾನ ಇವೆಲ್ಲವು ಸರಳಗೊಳಿಸಲಾಗುವುದು ಎಂದರು.
9 ವಿಶೇಷ ಜಿಲ್ಲಾಧಿಕಾರಿ ನೇಮಕ
ಮುಂದುವರೆದು 20 ವರ್ಷಗಳಿಂದ ಬಾಕಿಯಿರುವ ಈ ಪ್ರಕರಣಗಳನ್ನು ವಿಲೇವಾರಿ ಮಾಡಲೇಬೇಕೆಂಬ ಸಂಕಲ್ಪ ಮಾಡಿರುವ ರಾಜ್ಯ ಸರ್ಕಾರ ಇದಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಒಂದು ಬಾರಿಯ ಕ್ರಮವಾಗಿ 9 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ಬಾಕಿ ಹಳೆಯ ಪ್ರಕರಣಗಳನ್ನು ವಿಶೇಷ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಸಂಘಟಿತವಾಗಿ ಪ್ರಕರಣಗಳ ವಿಲೇವಾರಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಎಂದು ಹೇಳಿದರು.
ಸುಮಾರು 10-20 ವರ್ಷಗಳ ಹಳೇ ಪ್ರಕರಣಗಳಾಗಿರುವುದರಿಂದ ಅನೇಕ ಪ್ರಕರಣಗಳಲ್ಲಿ ಪ್ರತಿವಾದಿಗಳು ದೊರೆಯುತ್ತಿಲ್ಲ. ವಿಳಾಸ ಸರಿಯಿಲ್ಲ ಎಂಬುದನ್ನು ಗಮನಿಸಿದ ಮಾನ್ಯ ಸಚಿವರು ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಂದ ವಿಚಾರಣಾ ನೊಟೀಸ್‌ಗಳನ್ನು ಜಾರಿ ಮಾಡಬೇಕು. ವಿಶೇಷ ಬಾಕಿ ಪ್ರಕರಣ ವಿಲೇವಾರಿಗಾಗಿ ಕಕ್ಷಿದಾರರು/ಪ್ರತಿವಾದಿಗಳಿಗೆ ಸಂಬಂಧಿಸಿದ ಕಚೇರಿ ಸಂಪರ್ಕಿಸಿ, ಇತ್ತೀಚಿನ ವಿಳಾಸ ನೀಡಬೇಕೆಂದು ಮತ್ತು ನ್ಯಾಯಾಲಯ ವಿಚಾರಣೆಗೆ ತಪ್ಪದೆ ಹಾಜರಾಗಿ ಸಹಕರಿಸಬೇಕೆಂದು ಸಾರ್ವಜನಿಕರನ್ನು ಅವರು ಕೋರಿದರು.
4-5 ತಿಂಗಳುಗಳಲ್ಲಿ ವಿಲೇವಾರಿ
ಪ್ರಕರಣದ ಸದ್ಯದ ಸ್ಥಿತಿಗತಿ (ಸ್ಟೇಟಸ್) ಅನ್ನು RCCMS (https://rccms.karnataka.gov.in) ನಲ್ಲಿ ತಿಳಿದುಕೊಳ್ಳಬಹುದು. ಸಾರ್ವಜನಿಕರು ಸಹಕರಿಸಿದರೆ 10-20 ವರ್ಷಗಳ ಬಾಕಿ ಪ್ರಕರಣಗಳನ್ನು ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡು 4-5 ತಿಂಗಳುಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.
ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದಾರೆ. ನ್ಯಾಯದಾನ ವಿಳಂಬವಾಗುವುದರಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತದೆ. ಅಲ್ಲದೆ ಭೂಮಿಯ ಮಾಲಿಕತ್ವ ಗೊಂದಲದ ಗೂಡಾಗಿ ನೆಮ್ಮದಿಯ ಜೀವನಕ್ಕೆ ಕಂಟಕವಾಗುತ್ತದೆ. ಇವುಗಳನ್ನು ನಿವಾರಿಸಿ, ಜನಗಳಿಗೆ ಕಾಲ ಮೀತಿಯಲ್ಲಿ ನ್ಯಾಯ ಒದಗಿಸಿ, ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆಗೊಳಿಸಿ, ಜನಪರ ಆಡಳಿತ ಒದಗಿಸುವ ಉದ್ದೇಶ ನಮ್ಮ ಸರ್ಕಾರ ಹೊಂದಿದೆ ಎಂದು ವಿವರಿಸಿದರು.
-

ಜಿಲ್ಲಾಧಿಕಾರಿ ಆಗುವ ಕನಸಿದ್ದರೆ ಇಲ್ಲಿದೆ ಹುದ್ದೆಯ ಅರ್ಹತೆ, ವೇತನ ಮತ್ತು ಆಯ್ಕೆ ಪ್ರಕ್ರಿಯೆಯ ಕುರಿತಾದ ವಿಶೇಷ ಲೇಖನ
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

ಫೆಬ್ರವರಿ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
-

Rashmi Leela biography: ಸೀರಿಯಲ್ ಲೋಕದಿಂದ ಇಹಲೋಕದವರೆಗೆ: ನಟಿ ರಶ್ಮಿ ಲೀಲಾ ಹೋರಾಟ ಮತ್ತು ಅಕಾಲಿಕ ವಿದಾಯ
-

Horoscope February 18: ಆರೋಗ್ಯದ ಮೇಲೆ ಎಚ್ಚರವಹಿಸಿ, ಯಾವ ರಾಶಿಯವರಿಗೆ ಶುಭ-ಅಶುಭ?, ದಿನ ಭವಿಷ್ಯ
-

Good News: ಹೋಳಿ ಪ್ರಯುಕ್ತ ಬೆಂಗಳೂರು-ಬೀದರ್-ಕಲಬುರಗಿ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ
-

ಫೆಬ್ರವರಿ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/revenue-dept-boost-9-special-dcs-appointed-to-clear-20-year-old-land-cases-in-5-months-know-more-011-444357.html. xn--babytilbehr-pgb.com does not claim ownership of this content. All rights remain with the original publisher.
