ಕನ್ನಡದ ಹೃದಯ ಸ್ಪರ್ಶಿ ಸಿನಿಮಾ ವಲವಾರ ಮಿಸ್ ಮಾಡಿಕೊಳ್ಳಬೇಡಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ | Why Valavaara Is Must-Watch Kannada Movie Trending Everywhere Trending on social media

Entertainment

oi-Hitesh Y

Valavaara ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಕನ್ನಡ ಸಿನಿಮಾ ವಲವಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ವಲವಾರ ಸಿನಿಮಾದ ಬಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೀತ ರಚನೆಕಾರ ಮತ್ತು ಸೇರಿದಂತೆ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಯೋಗರಾಜ್ ಭಟ್ ಅವರು, ನಮಸ್ತೆ ತುಂಬಾ ನೆಟ್ಟಗಿರುವ ಒಟ್ಟುಗೂಡಿ ನೆಟ್ಟು ಬೆಳೆಸಿದ ವೃಕ್ಷ ಶ್ರೇಷ್ಠ ಪುಟ್ಟ ಚಿತ್ರ ವಲವಾರ. ಅಚ್ಚಕನ್ನಡದ ಅಪರೂಪದ ಕೆಲಸಗಾರರು ಕೆತ್ತಿ ಕೊಟ್ಟಿರುವ ಅದ್ಭುತವಾದ ಕಲಾಕೃತಿ, ತಂಡದ ಮುಗ್ಧತೆ ಚಿತ್ರದ ಉದ್ದಗಲಕ್ಕು ಮುದ್ದಾಗಿ ಗಂಧಬೀರುವಂತೆ ಪಸರಿಸಿದೆ. ನಿರ್ದೇಶಕ ಸುತನ್ ಗೌಡ್ರು, ನಟವರ್ಗ ಹಾಗೂ ಇಡೀ ಚಿತ್ರತಂಡಕ್ಕೆ ಚಪ್ಪಾಳೆಯ ಸ್ವಾಗತ… ಹಾಗೂ ನಮನ.. ಎಲ್ರು ನೋಡಿ.. ಹರಸಿ ಜೈ ಕನ್ನಡ.. ಜೈ ಪ್ರೇಕ್ಷಕ ಎಂದು ಯೋಗರಾಜ್ ಭಟ್ ಅವರು ವಿಶೇಷ ಬರಹವನ್ನು ಹಂಚಿಕೊಂಡಿದ್ದಾರೆ.

Valavaara

ಗೀತರಚನೆಕಾರ, ನಿರ್ದೇಶಕ ಕವಿರಾಜ್ ಅವರು, ಒಬ್ಬ ಪ್ರೇಕ್ಷಕನಾಗಿ, ಚಿತ್ರರಂಗದ ಋಣ ಇರುವವನಾಗಿ ನಾನು ನೋಡಿ ಮನಸಾರೆ ಖುಷಿಪಟ್ಟ, ಸುತನ್ ಗೌಡ ಅವರ ನಿರ್ದೇಶನದ ‘ವಲವಾರ’ ಎಂಬ ಅತ್ಯಂತ ಸುಂದರ ಕನ್ನಡ ಚಿತ್ರವೊಂದನ್ನು ಹೆಚ್ಚು ಹೆಚ್ಚು ಜನ ನೋಡಿ ಖುಷಿ ಪಡಲಿ ಎಂಬ ಆಶಯ ನನ್ನದು. ಅದಕ್ಕಾಗಿ ನಾನು ಆ ತಂಡದ ಭಾಗವಲ್ಲದಿದ್ದರೂ ಪ್ರತಿಭಾವಂತ ಹೊಸಬರ ತಂಡವನ್ನು ಬೆಂಬಲಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ನಿನ್ನೆ ನಾನೇ ಒಂದು ಷೋ ಪ್ರಾಯೋಜಿಸಿ ಚಿತ್ರರಂಗದ ಆತ್ಮೀಯರನ್ನು ಆಹ್ವಾನಿಸಿದ್ದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗ್ತಿಹಳ್ಳಿ ಚಂದ್ರಶೇಖರ್, ಎಂ ಡಿ ಶ್ರೀಧರ್, ಕೆ ಎಂ ಚೈತನ್ಯ, ಎ ಪಿ ಅರ್ಜುನ್, ಅಲೆಮಾರಿ ಸಂತು, ನಾಗೇಶ್ ಟಿ ಎನ್, ಪ್ರಕಾಶ್ ರಾಜ್ ಮೇಹು, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಸಂಭಾಷಣೆಕಾರರಾದ ಮಾಸ್ತಿ, ಗಾಯಕಿ ಶಮಿತಾ ಮಲ್ನಾಡ್, ನಟರಾದ ಆ ದಿನಗಳು ಚೇತನ್, ಮುಂದಿನ ನಿಲ್ದಾಣ ಖ್ಯಾತಿಯ ಪ್ರವೀಣ್, ಕೆರೆಬೇಟೆ ಗೌರಿಶಂಕರ್, ನಟಿಯರಾದ ಮೇಘನಾ ಗಾಂವ್ಕರ್, ಅಕ್ಷತಾ ಪಾಂಡವಪುರ, ರಂಜಿನಿ ರಾಘವನ್ ಸೇರಿದಂತೆ ನನ್ನ ಹಲವಾರು ಆಪ್ತರು ಷೋ ನೋಡಲು ಬಂದಿದ್ದರು. ಅವರೆಲ್ಲಾ ಭಾವುಕರಾಗಿ ಮನಸಾರೆ ಚಿತ್ರವನ್ನು ಮೆಚ್ಚಿ ಮಾತಾಡಿ ಬೆಂಬಲಿಸಿದ್ದಾರೆ. ಜೊತೆಗೆ ಆಪ್ತರಾದ ಯೋಗರಾಜ್ ಭಟ್, ಶಶಾಂಕ್, ಪವನ್ ಒಡೆಯರ್, ಸೃಜನ್ ಲೋಕೇಶ್ ಮುಂತಾದವರು ನನ್ನ ಮನವಿಯಂತೆ ಸಿನಿಮಾ ನೋಡಿ ಮೆಚ್ಚಿ ಮಾತಾಡಿದ್ದಾರೆ.

ಇನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪೋಸ್ಟ್ ನೋಡಿ ಸಿನಿಮಾ ನೋಡಿದ್ದಾಗಿ ಮನಸಾರೆ ಮೆಚ್ಚಿದ್ದನ್ನು ಬರೆದು, ಮೆಸೇಜ್ ಮಾಡಿ ತಿಳಿಸಿದ್ದಾರೆ. ನನ್ನ ಮನವಿಗೆ ಸ್ಪಂದಿಸಿದ್ದಕೆ ಎಲ್ಲರಿಗೂ ನಾನು ಕೃತಜ್ಞ. ಕನ್ನಡ ಚಿತ್ರವನ್ನು, ಹೊಸಬರ ಚಿತ್ರವನ್ನು ಉಳಿಸಿ, ಬೆಳೆಸಿ ಎಂಬುವುದಕ್ಕಿಂತ ಅತ್ಯಂತ ಸುಂದರ ಅನುಭವ ಕೊಡುವ ಈ ಹೃದಯಸ್ಪರ್ಶಿ ಸಿನಿಮಾವನ್ನು ಮಿಸ್ ಮಾಡ್ಕೋಬೇಡಿ ಎಂದು ತಮ್ಮೆಲ್ಲರಲ್ಲಿ ವಿನಂತಿ ಎಂದು ಬರೆದುಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/why-valavaara-is-must-watch-kannada-movie-trending-everywhere-trending-on-social-media-443453.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo