
Karnataka
oi-Madhusudhan KR
ಬೆಂಗಳೂರು, ಮಾರ್ಚ್ 2: ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಈಗ ಹೊಸದೊಂದು ಆತಂಕಕಾರಿ ಚಿತ್ರಣ ಹೊರಬಿದ್ದಿದೆ. ಬಹು ಆಯಾಮದ ಬಡತನ ಸೂಚ್ಯಂಕದ ವರದಿಯ ಪ್ರಕಾರ, ರಾಜ್ಯದ ಜಿಲ್ಲೆಗಳ ನಡುವೆ ಬಡತನದ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಬಡತನ ಶೂನ್ಯದತ್ತ ಸಾಗುತ್ತಿದ್ದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಇಂದಿಗೂ ಮೂಲಭೂತ ಸೌಕರ್ಯ ಮತ್ತು ಬಡತನದ ವಿರುದ್ಧ ಹೋರಾಡುತ್ತಿವೆ. ಯಾವ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಬೀಡಲಾಗಿದೆ ತಿಳಿಯಿರಿ.
ಸಮೀಕ್ಷೆಯ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿದ್ದರೆ, ಕರಾವಳಿ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸ್ಥಿತಿಯಲ್ಲಿವೆ. ಹಾಗಾದ್ರೆ, ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಜಿಲ್ಲಾವಾರು ಬಡತನದ ಪ್ರಮಾಣ
* ಯಾದಗಿರಿ: 28.68%
* ರಾಯಚೂರು: 21.58%
* ಗುಲ್ಬರ್ಗ (ಕಲಬುರಗಿ): 20.33%
* ಕೊಪ್ಪಳ: 19.35%
* ವಿಜಯಪುರ: 17.52%
ಅತಿ ಕಡಿಮೆ ಬಡತನವಿರುವ ಜಿಲ್ಲೆಗಳು
* ಬೆಂಗಳೂರು ಗ್ರಾಮಾಂತರ: 0.79%
* ರಾಮನಗರ: 0.96%
* ದಕ್ಷಿಣ ಕನ್ನಡ: 1.29%
* ಬೆಂಗಳೂರು ನಗರ: 1.28%
* ಕೋಲಾರ: 2.01%
* ಗದಗ: 17.26%
* ಬಳ್ಳಾರಿ: 13.94%
* ಬೀದರ್14.93%
* ಬಾಗಲಕೋಟೆ:12.7%
* ಹಾವೇರಿ:11.27%
* ಬೆಳಗಾವಿ: 8.18%
* ಧಾರವಾಡ: 7.09%
* ಚಿತ್ರದುರ್ಗ: 5.72%
* ತುಮಕೂರು: 5.61%
* ದಾವಣಗೆರೆ: 5.25%
* ಉತ್ತರಕನ್ನಡ: 5.05%
* ಚಾಮರಾಜನಗರ: 4.87%
* ಕೊಡಗು: 4.85%
* ಚಿಕ್ಕಬಳ್ಳಾಪುರ: 3.74%
* ಉಡುಪಿ: 3.62%
* ಚಿಕ್ಕಮಗಳೂರು: 3.22%
* ಶಿವಮೊಗ್ಗ: 3.23%
* ಹಾಸನ: 2.88%
* ಮೈಸೂರು: 2.47%
* ಮಂಡ್ಯ: 2.31%
ಯಾದಗಿರಿ ಜಿಲ್ಲೆ ಬಡತನದ ತೀವ್ರತೆಯಲ್ಲಿ (45.07%) ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 8.79 ಲಕ್ಷ ಜನರು ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದ ಒಟ್ಟು ಜನಸಂಖ್ಯೆ 1.4 ಕೋಟಿಗಿಂತ ಹೆಚ್ಚಿದ್ದರೂ, ಬಡತನದ ಸೂಚ್ಯಂಕ ಕೇವಲ 0.0053 ರಷ್ಟಿದೆ. ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಡತನದ ಪ್ರಮಾಣ ಶೇಕಡ 3ಕ್ಕಿಂತ ಕಡಿಮೆ ದಾಖಲಾಗಿದೆ. ಇದು ಈ ಭಾಗದ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತದೆ. ಈ ಅಂಕಿ-ಅಂಶಗಳು ಬಹು ಆಯಾಮದ ಬಡತನ ಸೂಚ್ಯಂಕ ಮೇಲೆ ಆಧಾರಿತವಾಗಿದ್ದು, ಕೇವಲ ಆದಾಯ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಪರಿಗಣಿಸಿ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-s-poverty-divide-yadgir-tops-list-while-bengaluru-nears-zero-poverty-rate-know-details-445709.html. xn--babytilbehr-pgb.com does not claim ownership of this content. All rights remain with the original publisher.
