ಕೇರಳ ಸ್ಟೋರಿ: ಸಿನಿಮಾ ಶೂಟಿಂಗ್‌ ನಡುವೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಿಯಕರನ ಮದುವೆಯಾದ ಮೋನಾಲಿಸಾ | Viral Beauty Monalisa Bhosle Marries Model Farman Khan in Kerala Amid Family Opposition, Know more

India

oi-Shankrappa Parangi

ತಿರುವನಂತಪುರಂ: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸರ ಮಾರುತ್ತಿದ್ದ ಯುವತಿ ಮೋನಾಲಿಸಾ ಭೋಂಸ್ಲೆ (Monalisa Bhosle) ವಿಡಿಯೋ ವೈರಲ್ ಆಗಿತ್ತು. ನೋಡ ನೋಡುತ್ತಿದ್ದಂತೆ ಖ್ಯಾತಿ ಪಡೆದಿದ್ದ ಈ ಸುಂದರಿಗೆ ಇದೀಗ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ತನ್ನ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳದ ಮೂಲದ ಮಾಡೆಲ್ ಫರ್ಮಾನ್ ಖಾನ್ ಅವರನ್ನು ವರಿಸಿ ಮತ್ತೊಮ್ಮೆ ಮೋನಾಲಿಸಾ ಸುದ್ದಿಯಾಗಿದ್ದಾರೆ.

ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ನಟಿ ಮೋನಾಲಿಸಾ ಸಿನಿಮಾ ಶೂಟಿಂಗ್‌ ಗೆ ಕೇರಳಕ್ಕೆ ಬಂದಿದ್ದಳು. ಈ ವೇಳೆ ತಾನು ಪ್ರೀತಿಸಿದ ಯುವಕ ಕೇರಳದವನಾಗಿದ್ದು, ಈ ಸಮಯ ಬಿಟ್ಟರೆ ಮತ್ತೆ ಸಿಗದು ಎಂದು ತಿಳಿದ ಮೋನಾಲಿಸಾ ಪೊಲೀಸರ ನೆರವು ಕೋರಿದ್ದಾರೆ. ಮನೆಯವರು ಫರ್ಮಾನ್ ಬಿಟ್ಟು ಬೇರೆಯವರೊಂದಿಗೆ ಮದುವೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಸದ್ಯ ಕೇರಳದಲ್ಲಿ ಶೂಟಿಂಗ್ ನಲ್ಲಿದ್ದ ಮೋನಾಲಿಸಾ ಪೊಲೀಸ್ ಠಾಣೆ ಮೆಟ್ಟಿಲೇರಿ ಅವರ ಸಹಾಯ ಪಡೆದು ಇಂದು ಬುಧವಾರ ಮಾರ್ಚ್ 11ರಂದು ಸಂಸದರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಕೇರಳದಲ್ಲಿ ವಿವಾಹವಾಗಿದ್ದಾರೆ.

Viral Beauty Monalisa Bhosle

ನೈನಾರ್ ದೇವಸ್ಥಾನದಲ್ಲಿ ಮದುವೆ, ಸಂಸದ ಸಚಿವರಿಂದ ಶುಭ ಹಾರೈಕೆ

ನಿಮ್ಮ ಮಗಳಿಗೆ18 ವರ್ಷ ತುಂಬಿದೆ. ಅವರು ಇಷ್ಟ ಬಂದ ಯುವಕನನ್ನು ಪ್ರೀತಿಸಲು, ಜೊತೆಗೆ ಬದುಕುವ ಹಕ್ಕು ಹೊಂದಿದ್ದಾಳೆ ಎಂದು ಪೊಲೀಸರು ಮೋನಾಲಿಸಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಪೊಲೀಸ್ ಠಾಣೆಯಿಂದ ನೇರವಾಗಿ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಅಲ್ಲಿಯೇ ಮೋನಿ ಹಾಗೂ ಫರ್ಮಾನ್ ಖಾನ್ ಮದುವೆ ಮಾಡಲಾಗಿದೆ. ಇಲ್ಲಿನ ತಿರುವನಂತಪುರಂನ ಅರುಮಾನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಇವರ ವಿವಾಹ ಜರುಗಿದೆ.

ನಿಜವಾದ ‘ಕೇರಳ ಸ್ಟೋರಿ’ ಎಂದು ಸಂಸದ

ಕೇರಳದಲ್ಲಿ ವೈರಲ್ ಯುವತಿ ಮೋನಾಲಿಸಾ ಮದುವೆಗೆ ಆಡಳಿತಾರೂಢ ನಾಯಕರು ಸಾಥ್ ನೀಡಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ ಮತ್ತು ರಾಜ್ಯಸಭಾ ಸಂಸದ ಎ.ಎ. ರಹೀಮ್ ಸೇರಿದಂತೆ ಅನೇಕ ಗಣ್ಯರು ವಿವಾಹ ಕಾರ್ಯಕ್ರಮಕ್ಕೆ ಬಂದು ನವಜೋಡಿಗೆ ಶುಭ ಕೋರಿದ್ದಾರೆ. ಬಳಿಕ ಮಾತನಾಡಿ ಸಂಸದ ರಹೀಮ್ ಅವರು, ”ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಆ ಸ್ವರ್ಗ ಕೇರಳ. ಯಾರನ್ನಾದರೂ ಮದುವೆ ಆಗುವ ಹಕ್ಕು ಸಂವಿಧಾನ ನೀಡಿದ್ದು, ಅಂತಹ ವಾತಾವರಣ ಕೇರಳದಲ್ಲಿದೆ. ಇದು ನಿಜವಾದ ‘ಕೇರಳ ಸ್ಟೋರಿ” ಎಂದು ಅವರು ಬಣ್ಣಿಸಿದ್ದಾರೆ.

ಮೋನಿ ಲಕ್ ಬದಲಿಸಿದ ವೈರಲ್ ವಿಡಿಯೋ

ಒಂದೂವರೆ ವರ್ಷದ ಹಿಂದೆ ಮಹಾಕುಂಭ ಮೇಳದಲ್ಲಿ ಸರ ಮಾರುತ್ತಿದ್ದ ಈ ಇಂಧೋರ್‌ ಮೂಲದ ಮೋನಿ ಭೋಂಸ್ಲೆ (ಮೋನಾಲಿಸಾ ಭೋಂಸ್ಲೆ) ಅವರ ವಿಡಿಯೋ ಈ ಸೆರೆ ಹಿಡಿಯಲಾಗಿತ್ತು. ಬಳಿಕ ಈ ಬೆಕ್ಕಿನ ಕಣ್ಣಿನ ಸುಂದರಿ ನೋಡ ನೋಡುತ್ತಿದ್ದಂತೆ ಆನ್‌ಲೈನ್‌ನಲ್ಲಿ ವೈರಲ್ ಆಗಿಬಿಟ್ಟಳು. ಎಲ್ಲೆಲ್ಲೂ ಮೋನಿಯದ್ದೆ ಹವಾ ಸೃಷ್ಟಿಯಾಗಿತ್ತು. ಬಳಿಕ ಅವರಿಗೆ ಬಾಲಿವುಡ್‌ನಿಂದ ಸಿನಿಮಾಗಳ ಆಫರ್ ಬಂತು. ಇತ್ತೀಚೆಗೆ ಸಿನಿಮಾವೊಂದರ ಶೂಟಿಂಗ್ ಮುಗಿದಿದೆ. ಕೆಲವು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ಮೋನಾಲಿಸಾ ನಟ ಕೈಲಾಶ್ ನಟಿಸಿರುವ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದರ ಮಧ್ಯೆ ಅವರ ವಿವಾಹವು ಕೆಲವು ಅಡ್ಡಿ ಆತಂಕಗಳ ನಡುವೆ ಪ್ರೀತಿಸಿದ ಯುವಕನೊಂದಿಗೆ ನಡೆದಿದ್ದು, ದೇಶದಲ್ಲಿ ಸುದ್ದಿ ಆಗುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/viral-beauty-monalisa-bhosle-marries-model-farman-khan-in-kerala-amid-family-opposition-know-more-446749.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo