ಕೋಝಿಕ್ಕೋಡ್ ಮೂಲದ ಕಂಪನಿ ಸಿಬ್ಬಂದಿಗೆ ಕೋಟ್ಯಾಂತರ ರೂ. ಮೌಲ್ಯದ ಉಡುಗೊರೆ ನೀಡಿದೆ | Kerala Based Hilite Group Gifts Rs20 Crore Cars to Employees in 30th Anniversary Celebration

India

oi-Reshma P

ಕೋಝಿಕ್ಕೋಡ್: ನಿಷ್ಠಾವಂತ ಉದ್ಯೋಗಿಗಳನ್ನು ಗೌರವಿಸುವ ವಿಚಾರದಲ್ಲಿ ಕೇರಳ ಮೂಲದ ‘ಹೈಲೈಟ್ ಗ್ರೂಪ್’ ಹೊಸ ಇತಿಹಾಸ ಬರೆದಿದೆ. ತನ್ನ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂಸ್ಥೆಯು ತನ್ನ ಸಿಬ್ಬಂದಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಉದ್ಯೋಗಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: ರೇಂಜ್ ರೋವರ್ ನಿಂದ ಕ್ರೆಟಾವರೆಗೆ

ಬಿಸಿನೆಸ್ ಲೈನ್ ವರದಿ ಮಾಡಿದಂತೆ ಈ ವಾಹನಗಳು ಪೀಮಿಯಂ ಮತ್ತು ಜನಪ್ರಿಯ ಮಾದರಿಗಳನ್ನು ಹೊಂದಿವೆ, ಕಂಪನಿಯ ಬೆಳವಣಿಗೆಗೆ ಕಳೆದ ಮೂರು ದಶಕಗಳಿಂದ ಬೆನ್ನೆಲುಬಾಗಿ ನಿಂತ ಉದ್ಯೋಗಿಗಳಿಗೆ ಈ ವಿಶೇಷ ಉಡುಗೊರೆ ನೀಡಲಾಗಿದೆ. ಹೈಲೈಟ್ ಗ್ರೂಪ್ ನೀಡಿದ ಈ ಕಾರುಗಳ ಪಟ್ಟಿಯಲ್ಲಿ ಬರೀ ಸಾಮಾನ್ಯ ಕಾರುಗಳಿಲ್ಲ ಬದಲಿಗೆ ಒಳ್ಳೆಯ ಬ್ರ್ಯಾಂಡ್ ಕಾರುಳಿವೆ.

Car Gifts

ಪ್ರೀಮಿಯಂ ಕಾರುಗಳು: ರೇಂಜ್ ರೋವರ್, ಆಡಿ ಕ್ಯೂ-8, ಲ್ಯಾಂಡ್ ರೋವರ್ ಡಿಫೆಂಡರ್.
ಜನಪ್ರಿಯ ಮಾದರಿಗಳು: ಟಾಟಾ ಹ್ಯಾರಿಯರ್, ಕಿಯಾ ಸೆಲ್ಟೋಸ್, ಹುಂಡೈ ಕ್ರೆಟಾ ಮತ್ತು ಸ್ಕೋಡಾ ಕೈಲಾಕ್.

ವಿವಿಧ ಹಂತದ ಹುದ್ದೆಗಳಲ್ಲಿರುವ ಅರ್ಹ ಉದ್ಯೋಗಿಗಳನ್ನು ಗುರುತಿಸಿ ಈ ಕಾರುಗಳನ್ನು ಉಡುಗೊರೆಯಾಗಿ ನಿಡಲಾಗಿದೆ. ಇದು ಕೇವಲ ಉಡುಗೊರೆಯಲ್ಲ ಸಂಸ್ಥೆಯು ಎಲ್ಲ ವರ್ಗಗಳಿಗೆ ಸಮಾನ ಅವಕಾಶಕ್ಕಾಗಿ ಸಾಕ್ಷಿ ಎಂದು ಕಂಪನಿ ಹೇಳಿಕೊಂಡಿದೆ.

ಮೂರು ದಶಕಗಳ ಸಾಧನೆಯ ಹಾದಿ

1996ರಲ್ಲಿ ಪಿ. ಸುಲೈಮಾನ್ ಅವರಿಂದ ಸ್ಥಾಪಿಸಲ್ಪಟ್ಟ ಹೈಲೈಟ್ ಗ್ರೂಪ್ ಕೇರಳದ ವಾಣಿಜ್ಯ ಮತ್ತು ವಸತಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ರಾಜ್ಯದ ಮೊದಲ ಸಂಘಟಿತ ರಿಟೆಲ್ ಮಾಲ್ ಆದ ‘ಫೋಕಸ್ ಮಾಲ್’ ನಿರ್ಮಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅಧ್ಯಕ್ಷ ಪಿ. ಸುಲೈಮಾನ್ ಕಳೆದ 30 ವರ್ಷಗಳಿಂದ ನಾವು ಕೇರಳದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.

ಕಂಪನಿಯ ಪ್ರಕಾರ ಪ್ರಸ್ತುತ ರಾಜ್ಯಾದ್ಯಂತ ಹತ್ತು ಮಾಲ್ ಗಳು ಅಭಿವೃದ್ಧಿಯ ಹಂತದಲ್ಲಿವೆ ಈ ತರಹದ ಅಬಿವೃದ್ಧಿಯ ಪರೀಕ್ಷೆಯನ್ನು ಗೆಲ್ಲುವಂತಹ ಯೋಜನೆಗಳನ್ನು ರೂಪಿಸುವುದೇ ನಮ್ಮ ಗುರಿ ಎಂದು ಸಂತಸ ಹಂಚಿಕೊಂಡರು.

ಹೈಲೈಟ್ ಗ್ರೂಪ್ ನ ಮುಂದಿನ ಗುರಿ 2 ಲಕ್ಷ ಉದ್ಯೋಗ ಸೃಷ್ಟಿ

ಪ್ರಸ್ತುತ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಹೈಲೈಟ್ ಗ್ರೂಪ್ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಂಡಿದೆ, ವಿಶ್ವ ವ್ಯಾಪಾರ ಕೇಂದ್ರ ಕೋಝಿಕ್ಕೋಡ್ ನಲ್ಲಿ ಸುಮಾರು 5,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ವಾಣಿಜ್ಯ ಕೇಂದ್ರ ನಿರ್ಮಾಣವಾಗುತ್ತಿದೆ. Mathrubhumi ವರದಿ ಪ್ರಕಾರ 2030ರ ವೇಳೆಗೆ ಕೇರಳದಾದ್ಯಂತ 50 ಮಿಲಿಯನ್ ಚದರ ಅಡಿ ವಿಸ್ತರಣೆ ಮಾಡುವ ಯೋಜನೆ ಹೊಂದಿದ್ದು ಇದರ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಯೋಜನೆಗಳಲ್ಲಿ ಐಟಿ ಪಾರ್ಕ್‌ಗಳು, ವಾಣಿಜ್ಯ ಕೇಂದ್ರಗಳು ಮತ್ತು ನಗರ ಯೋಜನೆಗಳು ಸೇರಿವೆ. ಕೇರಳದಲ್ಲಿ ಉದ್ಯೋಗ ಮತ್ತು ವ್ಯಾಪಾರದ ದೃಷ್ಟಿಯ ಬೆಳವಣಿಗಯ ಮೇಲೆ ಹೈಲೈಟ್ ಗ್ರೊಪ್ ಗಮನಹರಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/kerala-based-hilite-group-gifts-rs20-crore-cars-to-employees-in-30th-anniversary-celebration-444259.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo