ಕ್ರೀಡಾಂಗಣದಲ್ಲೇ ಇಶಾನ್‌ ಕಿಶಾನ್‌ಗೆ ಮುತ್ತಿಟ್ಟ ಅದಿತಿ ಹುಂಡಿಯಾ ಯಾರು? ಅಭಿಷೇಕ್ ಶರ್ಮಾ ಸೋದರಿ ನಂಟು ರಿವೀಲ್ | Who Is Aditi Hundia? Model Seen Celebrating With Ishan Kishan After India’s T20 World Cup 2026 Win

Sports

oi-Madhusudhan KR

Ishan Kishan: ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸತತ ಎರಡನೇ ಬಾರಿಗೆ ಮತ್ತು ಒಟ್ಟಾರೆಯಾಗಿ ಮೂರನೇ ಬಾರಿ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಬಳಿಕ ಮೈದಾನದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ಇಶಾನ್ ಜೊತೆ ಕಾಣಿಸಿಕೊಂಡ ಅದಿತಿ ಹುಂಡಿಯಾ ಯಾರು? ಎನ್ನುವ ಪ್ರಶ್ನೆಗಳು ಎದ್ದಿವೆ. ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅತಿ ಹೆಚ್ಚು ರನ್ ಗಳಿಸಿ ಮಿಂಚಿದರು. ಅಭಿಷೇಕ್ ಶರ್ಮಾ ಸಹ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಮೇಲಿನ ಟೀಕೆಗಳಿಗೆ ತಿರುಗೇಟು ನೀಡಿದರು. ಮತ್ತೊಬ್ಬ ಪ್ರಮುಖ ಆಟಗಾರ 27 ವರ್ಷದ ಎಡಗೈ ಬ್ಯಾಟರ್ ಇಶಾನ್ ಕಿಶನ್, ಅತಿ ವೇಗವಾಗಿ ಅರ್ಧಶತಕ ಬಾರಿಸುವ ಮೂಲಕ ತಂಡವು ಬೃಹತ್ ಮೊತ್ತವನ್ನು ಪೇರಿಸಲು ನೆರವಾದರು.

Who Is Aditi Hundia Model Seen Celebrating With Ishan Kishan After India s T20 World Cup 2026 Win

ಇಶಾನ್ ಕಿಶನ್ ಅವರ ಈ ಅಮೋಘ ಬ್ಯಾಟಿಂಗ್ ಅನ್ನು ಸ್ಟೇಡಿಯಂನ ಗ್ಯಾಲರಿಯಲ್ಲಿದ್ದ ಅವರ ಗೆಳತಿ ಎಂದು ವರದಿಯಾಗಿರುವ ಅದಿತಿ ಹುಂಡಿಯಾ ಅವರು ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ನಂತರ, ಅವರು ಇಶಾನ್ ಮತ್ತು ಭಾರತ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ನೇರವಾಗಿ ಪಾಲ್ಗೊಂಡರು. ಅಲ್ಲದೆ, ಇಶಾನ್ ಅವರ ಹಣೆಗೆ ಮುತ್ತಿಟ್ಟಿರುವ ವಿಡೊಯೋ, ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇವರೇನಾ ಕಿಶನ್ ಗರ್ಲ್‌ಫ್ರೆಂಡ್‌ ಅಂತೆಲ್ಲಾ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.

ಅಭಿಷೇಕ್ ಸಹೋದರಿ ಜೊತೆ ಕುಳಿತು ಸಂಭ್ರಮ

ಕೆಂಪು ಬಣ್ಣದ ಟಾಪ್ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅದಿತಿ ಹುಂಡಿಯಾ, ತಂಡದ ಆಟಗಾರರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಕುಳಿತಿದ್ದ ಗ್ಯಾಲರಿಯಲ್ಲಿ ಕಂಡುಬಂದರು. ಇಶಾನ್ ಕಿಶನ್ ಮತ್ತು ಟೀಮ್ ಇಂಡಿಯಾ ಪರ ಅವರು ಉತ್ಸಾಹದಿಂದ ಜೈಕಾರ ಹಾಕುತ್ತಿರುವುದು ಲೈವ್ ಬ್ರಾಡ್‌ಕಾಸ್ಟ್‌ನಲ್ಲೂ ಹಲವು ಬಾರಿ ಕಂಡುಬಂದಿತು. ಈ ಸಂದರ್ಭದಲ್ಲಿ ಅದಿತಿ ಹುಂಡಿಯಾಗೆ ಸಾಥ್ ನೀಡಿದ್ದು ಭಾರತ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸಹೋದರಿ ಕೋಮಲ್ ಶರ್ಮಾ. ಇವರಿಬ್ಬರೂ ಆಟಗಾರರನ್ನು ಹುರಿದುಂಬಿಸುತ್ತಾ ಪಂದ್ಯದ ಪ್ರತಿ ಕ್ಷಣವನ್ನು ಸಂಭ್ರಮಿಸಿದರು.

ಮೈದಾನದಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುತ್ತಿದ್ದಂತೆ ಅದಿತಿ ಅವರ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಶಾನ್ ಕಿಶನ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಕಣ್ತುಂಬಿಕೊಂಡ ಅದಿತಿ, ಗೆಲುವಿನ ನಂತರ ನಡೆದ ಸಂಭ್ರಮಾಚರಣೆಯಲ್ಲೂ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಪಂದ್ಯ ಮುಕ್ತಾಯದ ನಂತರ ಟೀಮ್ ಇಂಡಿಯಾದ ಆಟಗಾರರ ಪತ್ನಿಯರು ಮತ್ತು ಗೆಳತಿಯರು ಮೈದಾನಕ್ಕೆ ಆಗಮಿಸಿ ವಿಜಯೋತ್ಸವದಲ್ಲಿ ಪಾಲ್ಗೊಂಡರು. ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮೊದಲಿಗೆ ಗೆಲುವಿನ ಸಂಭ್ರಮ ಹಂಚಿಕೊಂಡ ಅದಿತಿ ಹುಂಡಿಯಾ, ನಂತರ ಇಶಾನ್ ಕಿಶನ್ ಅವರ ಬಳಿ ತೆರಳಿ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡರು. ಇಶಾನ್ ಭಾರತದ ರಾಷ್ಟ್ರಧ್ವಜವನ್ನು ಹೊದ್ದುಕೊಂಡು ವಿಜಯೋತ್ಸವದಲ್ಲಿ ಮಗ್ನರಾಗಿದ್ದಾಗ, ಅದಿತಿ ಅವರು ಅವರನ್ನು ಅಭಿನಂದಿಸಿರುವ ದೃಶ್ಯಗಳು ವೈರಲ್‌ ಆಗಿವೆ.

ಅದಿತಿ ಹುಂಡಿಯಾ ಯಾರು?

ಅದಿತಿ ಹುಂಡಿಯಾ ಅವರು ಜೈಪುರ ಮೂಲದ ಹೆಸರಾಂತ ಮಾಡೆಲ್ ಮತ್ತು ಉದ್ಯಮಿಯಾಗಿದ್ದಾರೆ. ಅವರು ಜೈಪುರದಲ್ಲಿ ಜನಿಸಿದ್ದ, ಅವರು ಅಲ್ಲಿನ ಇಂಡಿಯಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಜೈಪುರದ ಸೇಂಟ್ ಕ್ಸೇವಿಯರ್ಸ್ ಕಾಲೇಜಿಗೆ ಸೇರಿಕೊಂಡರು.

ಕಾಲೇಜು ದಿನಗಳಲ್ಲಿಯೇ ಅವರು ಫ್ಯಾಶನ್ ಶೋಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇದು ಅವರ ಮಾಡಲಿಂಗ್ ವೃತ್ತಿಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. 2017ರಲ್ಲಿ ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗುವ ಮೂಲಕ ಮೊದಲ ಬಾರಿಗೆ ಜನಪ್ರಿಯತೆ ಗಳಿಸಿದರು. 2018ರಲ್ಲಿ ‘ಮಿಸ್ ದಿವಾ ಸುಪ್ರಾನೇಷನಲ್’ (Miss Diva Supranational) ಕಿರೀಟವನ್ನು ಮುಡಿಗೇರಿಸಿಕೊಂಡರು. 2019ರಲ್ಲಿ ‘ಮಿಸ್ ಇಂಡಿಯಾ’ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ವೇದಿಕೆಯಾದ ‘ಮಿಸ್ ಸುಪ್ರಾನೇಷನಲ್’ ನಲ್ಲಿ ಭಾರತವನ್ನು ಪ್ರತಿನಿಧಿಸಿದರು.

ಅದಿತಿ ಹುಂಡಿಯಾ ಕೇವಲ ಮಾಡೆಲ್ ಆಗಿ ಮಾತ್ರವಲ್ಲದೆ, ಓರ್ವ ಉದ್ಯಮಿಯಾಗಿಯೂ ಯಶಸ್ಸಿನ ಮೆಟ್ಟಿಲೇರುತ್ತಿದ್ದಾರೆ. ತಮ್ಮ ವೃತ್ತಿಜೀವನದ ಹೊಸ ಮೈಲಿಗಲ್ಲಾಗಿ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಆದ ಫ್ಯಾಶನ್ ಮತ್ತು ಮೇಕಪ್ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ್ದಾರೆ. ಸದ್ಯ ಅವರು ಮಾಡೆಲಿಂಗ್ ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ

ಇನ್‌ಸ್ಟಾಗ್ರಾಮ್‌ನಲ್ಲಿ 3.5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಅದಿತಿ, ಓರ್ವ ಯಶಸ್ವಿ ಕಂಟೆಂಟ್ ಕ್ರಿಯೇಟರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಫ್ಯಾಶನ್ ಸೆನ್ಸ್ ಮತ್ತು ಜೀವನಶೈಲಿಯ ಮೂಲಕ ಅವರು ಯುವಜನತೆಯನ್ನು ಆಕರ್ಷಿಸುತ್ತಿದ್ದಾರೆ.

ಅದಿತಿ-ಇಶಾನ್ ಕಿಶನ್ ಬಾಂಧವ್ಯದ ವಿವರ

ಕಳೆದ ಎರಡು ವರ್ಷಗಳಿಂದ ಕ್ರಿಕೆಟಿಗ ಇಶಾನ್ ಕಿಶನ್ ಮತ್ತು ಅದಿತಿ ಹುಂಡಿಯಾ ಹೆಸರು ಒಟ್ಟಿಗೆ ಕೇಳಿಬರುತ್ತಿದೆ. ಇವರಿಬ್ಬರು ಹಲವು ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಗೆಲುವನ್ನು ಕ್ರೀಡಾಂಗಣದಲ್ಲಿ ಖುದ್ದು ಹಾಜರಿದ್ದು ಸಂಭ್ರಮಿಸಿದ್ದು, ಇದೀಗ ಅಭಿಮಾನಿಗಳಲ್ಲಿ ಇವರ ಸಂಬಂಧದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ವಿಶ್ವಕಪ್‌ನಂತಹ ಅತಿ ದೊಡ್ಡ ವೇದಿಕೆಯಲ್ಲಿ ಇಶಾನ್ ಜೊತೆಗಿನ ಈ ಸಂಭ್ರಮವು, ಇವರಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿದೆ. ಇವರು ಪಕ್ಕಾ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/who-is-aditi-hundia-model-seen-celebrating-with-ishan-kishan-after-india-s-t20-world-cup-2026-win-446627.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo