
Entertainment
oi-Manohara M
ಸ್ಯಾಂಡಲ್ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಟ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಲವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಗಮನ ಸೆಳೆದಿದ್ದ ಅವರು, ಇದೀಗ ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಕೆಲ ನಿರ್ದೇಶಕರು ಹಾಗೂ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಅವರ ಆಕ್ರೋಶಭರಿತ ಮಾತುಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚೆಗೆ “ಕಾಟನ್ಪೇಟೆ” ಚಿತ್ರದ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಕನಕಪುರ ಶ್ರೀನಿವಾಸ್, ಜೋಗಿ ಪ್ರೇಮ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಏಕವಚನದಲ್ಲೇ ಮಾತನಾಡಿದ ಅವರು, ಪ್ರೇಮ್ ಅವರ ಗಂಡಸ್ತನಕ್ಕೂ ಸವಾಲ್ ಹಾಕುವ ರೀತಿಯಲ್ಲಿ ಹೇಳಿಕೆ ನೀಡಿದರು. “ಅವನು ಕಳ್ಳ ಪ್ರೇಮ್ ಅಂತಾನೆ. ಪ್ರೇಮ್ ಗಂಡಸಾದ್ರೆ, ಡೈರೆಕ್ಟರ್ ಆದ್ರೆ ನನ್ನ ಮುಂದೆ ನಿಂತುಕೊಳ್ಳೋಕೆ ಹೇಳಿ. ಅವನಪ್ಪನಿಗೇ ಹುಟ್ಟಿದ್ರೆ ಬರೋಕೆ ಹೇಳಿ. ಇಲ್ಲ ಧಮ್ ಇದ್ರೆ ಅವನೇ ಎಲ್ಲಿದ್ದಾನೋ ನಾನೇ ಅಲ್ಲಿಗೆ ಹೋಗ್ತೀನಿ” ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ, “ಕರಿಯ, ಜೋಗಿ, ಎಕ್ಸ್ಕ್ಯೂಸ್ಮಿ ಸಿನಿಮಾಗಳನ್ನು ಮಾಡಿ ಹಲವರನ್ನು ಮನೆಗೆ ಕಳಿಸಿದ್ದಾರೆ” ಎಂದೂ ಆರೋಪಿಸಿದರು.

ಅವನಿಂದ ದೇಶವೇ ಬಿಟ್ಟುಹೋದ್ರು
ಇದೇ ವೇಳೆ, ನಟ ಸುದೀಪ್ ಮತ್ತು ಶಿವರಾಜಕುಮಾರ್ ಒಟ್ಟಿಗೆ ನಟಿಸಿದ್ದ ಸಿನಿಮಾದ ವಿಚಾರವನ್ನೂ ಪ್ರಸ್ತಾಪಿಸಿದ ಶ್ರೀನಿವಾಸ್, ಆ ಚಿತ್ರದ ಪರಿಣಾಮವಾಗಿ ನಿರ್ಮಾಪಕನೊಬ್ಬ ದೇಶವೇ ಬಿಟ್ಟು ಹೋಗಬೇಕಾಯಿತು ಎಂದು ಹೇಳಿ, ಆ ರೀತಿಯ ಚಿತ್ರಗಳನ್ನು ಮಾಡುವವರ ವಿರುದ್ಧ ಕಿಡಿಕಾರಿದರು. “ನಾನೊಬ್ಬ ಗಂಡಸು, ಡೈರೆಕ್ಟರ್ ಅಂತ ಹೇಳ್ಕೊಳ್ಳೋಕೆ ನಾಚಿಕೆ ಇರಬೇಕು. ಮಾನ ಮರ್ಯಾದೆ ಇಲ್ಲವೇ? ಇದಕ್ಕಿಂತ ಕಡಲೆಕಾಯಿ ಅಥವಾ ಬೆಣ್ಣೆ ಮಾರಿಕೊಂಡರೂ ದೇವರು ಊಟ ಕೊಡ್ತಾನೆ. ಇಂಥಾ ದುಡ್ಡು ಮಾಡಿ ಏನೂ ಉಪಯೋಗ ಇಲ್ಲ” ಎಂದು ತೀವ್ರವಾಗಿ ಟೀಕಿಸಿದರು. ಜೊತೆಗೆ, “ನನ್ನಂತ ಸಾವಿರ ಜನ ಹುಟ್ಟುತ್ತಲೇ ಇರ್ತಾರೆ. ರಾವಣ ಇದ್ದರೆ ರಾಮ ಹುಟ್ಟುತ್ತಲೇ ಇರ್ತಾನೆ” ಎಂಬ ಮಾತುಗಳನ್ನು ಉಲ್ಲೇಖಿಸಿದರು.
ಧ್ರುವ ಆಂಜನೇಯ ಇದ್ದಂಗೆ ಅವ್ನೆ
ಇನ್ನು ನಟ ಧ್ರುವ ಸರ್ಜಾ ಕುರಿತಾಗಿ ಮಾತನಾಡಿದ ಶ್ರೀನಿವಾಸ್, ‘ಕೆಡಿ’ ಚಿತ್ರದ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಹೀರೋ 120 ಕೋಟಿ ಅಂತೆ, ಏನ್ರೀ ಇದು ಅನ್ಯಾಯ? ಧ್ರುವ ಸರ್ಜಾ ನಮ್ಮ ಕನ್ನಡದ ಹುಡುಗ. ಅವನಿಗೆ ಒಮ್ಮೆ ಸಣ್ಣ ಆಗಬೇಕು, ಒಮ್ಮೆ ದಪ್ಪ ಆಗಬೇಕು ಅಂತ ಹೇಳ್ಕೊಂಡು ಸಿನಿಮಾ ಐದು ವರ್ಷ ಆಯ್ತು” ಎಂದು ಹೇಳಿದರು. ಧ್ರುವ ಸರ್ಜಾರನ್ನು “ಆಂಜನೇಯನಂತಿರುವ ಮಗು” ಎಂದು ವರ್ಣಿಸಿದ ಶ್ರೀನಿವಾಸ್, ಈ ರೀತಿಯ ವಿಳಂಬ ಮತ್ತು ಅತಿಯಾದ ನಿರೀಕ್ಷೆಗಳು ನಟರಿಗೂ ಅನ್ಯಾಯವಾಗುತ್ತವೆ ಎಂಬರ್ಥದಲ್ಲಿ ಮಾತನಾಡಿದರು.
ಕನಕಪುರ ಶ್ರೀನಿವಾಸ್ ಅವರ ಈ ಹೇಳಿಕೆಗಳು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ನಿರ್ದೇಶಕರು, ನಟರು ಮತ್ತು ನಿರ್ಮಾಪಕರ ನಡುವಿನ ಒಳಜಗಳಗಳು ಮತ್ತೆ ಬಹಿರಂಗವಾಗುತ್ತಿರುವಂತಿದೆ. ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಜೋಗಿ ಪ್ರೇಮ್, ಧ್ರುವ ಸರ್ಜಾ ಅಥವಾ ಇತರರ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.
———
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ ‘ಮೈಖೇಲ್’ ವೆಬ್ಸೈಟ್ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ ‘ಮೈಖೇಲ್’ ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ ‘ಮೈಖೇಲ್’ ವೆಬ್ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, ‘ಮೈಖೇಲ್’ ವೆಬ್ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲೂ ಮೈಖೇಲ್ ಫಾಲೊ ಮಾಡಿ.
-

‘ಧುರಂಧರ್-2’ಗೆ ಹೆದರಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ವದಂತಿ, ಇಲ್ಲಿದೆ ಸ್ಪಷ್ಟನೆ
-

BIFFES: ವಾಜ್ದಾ ಸಿನಿಮಾ ನಿರ್ದೇಶಕ ಮಾತ್ರವಲ್ಲ, ಸಂವೇದನಾಶೀಲ ಹೋರಾಟಗಾರಾಗಿದ್ದರು: ಜೋವಾನಾ
-

ಬೆಂಗಳೂರು ಚಲನಚಿತ್ರೋತ್ಸವ: ನಿವೇದಿತ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರಕ್ಕೆ ಭಾರೀ ಮೆಚ್ಚುಗೆ
-

Gold Rate Feb 5 2026: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್: ಚಿನ್ನದ ಬೆಲೆ 5,020 ರೂ. ಕಡಿಮೆ
-

ದಿನ ಭವಿಷ್ಯ ಫೆಬ್ರವರಿ 5: ಯಾವ ರಾಶಿಯವರ ಜಾತಕ ಹೇಗಿರಲಿದೆ ಎಂದು ತಿಳಿಯಿರಿ
-

ಅತ್ತಿಬೆಲೆ ಬಳಿ ಹೆದ್ದಾರಿ ಕುಸಿತ: ಬೆಂಗಳೂರು–ಹೊಸೂರು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತ
-

Gold: 2026ರ ಅಂತ್ಯಕ್ಕೆ ಚಿನ್ನದ ಬೆಲೆ ಎಷ್ಟಾಗಲಿದೆ ? ಜೆಪಿ ಮಾರ್ಗನ್ ಭವಿಷ್ಯದಲ್ಲಿ ಏನಿದೆ
-

Bengaluru PG: ಬೆಂಗಳೂರಿನ ಪಿ.ಜಿಗಳಿಗೆ ಬೀಗ ಹಾಕುತ್ತಿರುವ ಜಿಬಿಎ: ಕಾರಣವೇನು, ಇಲ್ಲಿದೆ ಮಾಹಿತಿ
-

Lentil Price Hike: ಗ್ರಾಹಕರ ಜೇಬು ಸುಡುತ್ತಿದೆ ತೊಗರಿ ಬೇಳೆ: ದಿಢೀರ್ ಬೆಲೆ ಏರಿಕೆಗೆ, ಕಾರಣವೇನು
-

ಕರ್ನಾಟಕದ 4 ಏರ್ಪೋರ್ಟ್ ಹೆಸರು ಮರುನಾಮಕರಣ ಕೇಂದ್ರಕ್ಕೆ ಸಂಸದ ಜಗದೀಶ್ ಶೆಟ್ಟರ್ ಮನವಿ
-

Daily Horoscope: ಫೆಬ್ರವರಿ 4ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೊಸ ಅವಕಾಶ
-

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ 2027ರ ಅಂತ್ಯದೊಳಗೆ ಎತ್ತಿನಹೊಳೆ ನೀರು
-

2,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಐಟಿ ವಲಯ, ತಿಳಿಯಬೇಕಾದ ಮಾಹಿತಿ ಇಲ್ಲಿದೆ | Stock Market
-

‘ಧುರಂಧರ್-2’ಗೆ ಹೆದರಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ವದಂತಿ, ಇಲ್ಲಿದೆ ಸ್ಪಷ್ಟನೆ
-

CBSE 10, 12ನೇ ತರಗತಿ ಬೋರ್ಡ್ ಪರೀಕ್ಷೆ: ಹಾಲ್ ಟಿಕೆಟ್ ಪ್ರಕಟ, ಡೌನ್ಲೋಡ್ ಮಾಡುವುದು ಹೇಗೆ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kanakapura-srinivas-sparks-come-face-me-if-you-are-man-controversy-against-dirctor-prem-dhruva-sarja-442705.html. xn--babytilbehr-pgb.com does not claim ownership of this content. All rights remain with the original publisher.
