
Entertainment
oi-Manohara M
ಬಿಗ್ಬಾಸ್ ಕನ್ನಡ ಸೀಸನ್-12ರ ವಿನ್ನರ್ ಗಿಲ್ಲಿ ವಿರುದ್ಧ ಸಿನಿಮಾ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಆರೋಪದಡಿ ಕರ್ನಾಟಕ ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ಗಿಲ್ಲಿ “ಸರ್ಕಾರಿ ಶಾಲೆ H8” ಸಿನಿಮಾವನ್ನು ಪ್ರಚಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಗ್ಬಾಸ್ಗೆ ಹೋಗುವ ಮುನ್ನ ಗಿಲ್ಲಿ ನಟಿಸಿದ್ದ “ಸರ್ಕಾರಿ ಶಾಲೆ H8” ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಆದರೆ ಚಿತ್ರದ ನಿರ್ಮಾಪಕರು, ಗಿಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ, ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ, ಕನಿಷ್ಠವಾಗಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಒಂದು ಪೋಸ್ಟ್ ಕೂಡ ಹಂಚಿಕೊಂಡಿಲ್ಲ ಎಂದು ಆರೋಪಿಸಿ ಕರ್ನಾಟಕ ಫಿಲ್ಮ್ ಚೇಂಬರ್ಗೆ ಅಧಿಕೃತ ದೂರು ನೀಡಿದ್ದರು.

ನಿರ್ಮಾಪಕರ ಹೇಳಿಕೆಯಂತೆ “ಸರ್ಕಾರಿ ಶಾಲೆ H8” ಸಿನಿಮಾದಲ್ಲಿ ಗಿಲ್ಲಿಗೆ ಪ್ರಮುಖ ಪಾತ್ರ ನೀಡಲಾಗಿದ್ದು, ಅವರು ಕೇಳಿದ ಸಂಪೂರ್ಣ ಸಂಭಾವನೆಯನ್ನು ಬಿಗ್ಬಾಸ್ಗೆ ಹೋಗುವ ಮುನ್ನವೇ ಪಾವತಿಸಲಾಗಿದೆ. ಆದರೂ ಸಿನಿಮಾ ಬಿಡುಗಡೆಯಾದ ನಂತರ ಪ್ರಚಾರಕ್ಕೆ ಅವರು ಸಹಕರಿಸುತ್ತಿಲ್ಲ ಎಂಬುದು ನಮ್ಮ ನೋವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ವೈರಲ್ ಆದ ಗಿಲ್ಲಿ ವಿಡಿಯೋ
ಈ ಆರೋಪಗಳ ನಡುವೆ ಗಿಲ್ಲಿ ಸಿನಿಮಾ ಪ್ರಚಾರ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಗಿಲ್ಲಿ, “ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಗಿಲ್ಲಿ ನಟ. ನಮ್ಮ ಗುಣ ಅವರ ನಿರ್ದೇಶನದಲ್ಲಿ ‘ಸರ್ಕಾರಿ ಶಾಲೆ H8’ ಸಿನಿಮಾ ಬರುತ್ತಿದೆ. ಅದರಲ್ಲಿ ನಾನೂ ಒಂದು ಪಾತ್ರ ಮಾಡಿದ್ದೀನಿ. ದಯವಿಟ್ಟು ಎಲ್ಲರೂ ಸಿನಿಮಾ ನೋಡಿ, ಹರಸಿ, ಹಾರೈಸಿ” ಎಂದು ಹೇಳಿದ್ದಾರೆ.
ನಮ್ಮ “ಗಿಲ್ಲಿ ನಟ” ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ “ಸರ್ಕಾರಿಶಾಲೆ H8” ಚಿತ್ರಕ್ಕೆ ಜನವರಿ 29ರಂದು ಹರಸಿ ಶುಭಾಶಯಗಳು ತಿಳಿಸಿದ್ದಾರೆ ಆದರೂ ನಿರ್ದೇಶಕರಾದ ಗುಣ ಹರಿಯಬ್ಬೆರವರು ಫಿಲಂ ಚೆಂಬರ್ ಗೆ ದೂರು ಕೊಟ್ಟು ಆರೋಪ ಹೋರಿಸುತ್ತಿರುಹುದು ಸರಿ ಅಲ್ಲ..#BBK12 #Gilli #GilliNata #Gilli_Nataraj pic.twitter.com/pN8ekWt0U0
— 𝐆𝐢𝐥𝐥𝐢𝐍𝐚𝐭𝐚 𝐎𝐟𝐟𝐢𝐜𝐢𝐚𝐥 (@GilliNata_BBK12) February 6, 2026
ಈ ವಿಡಿಯೋ ಹೊರಬಂದ ಬಳಿಕ ಗಿಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ಗಿಲ್ಲಿ ಪ್ರಚಾರ ಮಾಡಿಲ್ಲ ಎನ್ನುವುದು ಸುಳ್ಳು ಆರೋಪ”, “ವಿಡಿಯೋ ಸಾಕ್ಷಿ ಇದ್ದಾಗ ಅನಗತ್ಯವಾಗಿ ಆರೋಪ ಮಾಡಬೇಡಿ” ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ನಮ್ಮ ಗಿಲ್ಲಿ ನಟ ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ “ಸರ್ಕಾರಿ ಶಾಲೆ H8” ಚಿತ್ರಕ್ಕೆ ಜನವರಿ 29ರಂದೇ ಹರಸಿ ಶುಭಾಶಯಗಳು ತಿಳಿಸಿದ್ದಾರೆ. ಆದರೂ ನಿರ್ದೇಶಕರಾದ ಗುಣ, ಫಿಲಂ ಚೆಂಬರ್ಗೆ ದೂರು ಕೊಟ್ಟು ಆರೋಪ ಹೊರಿಸುತ್ತಿರುವುದು ಸರಿ ಅಲ್ಲ ಎಂದಿದ್ದಾರೆ.
ಚೇಂಬರ್ ತನಿಖೆ ಸಾಧ್ಯತೆ
ಇತ್ತ, ದೂರು ಸ್ವೀಕರಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್ ಈ ವಿಚಾರದಲ್ಲಿ ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ನಡುವೆ, ವೈರಲ್ ಆದ ವಿಡಿಯೋ ಪ್ರಕರಣಕ್ಕೆ ಯಾವ ತಿರುವು ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಬಿಗ್ಬಾಸ್ ಗೆದ್ದ ಬಳಿಕ ರಾಜ್ಯದ ಮನೆಮಾತಾಗಿರುವ ಗಿಲ್ಲಿಗೆ ಇದು ಮೊದಲ ದೊಡ್ಡ ವಿವಾದವಾಗಿದ್ದು, ಮುಂದಿನ ದಿನಗಳಲ್ಲಿ ಚೇಂಬರ್ ಕೈಗೊಳ್ಳುವ ಕ್ರಮದತ್ತ ಕನ್ನಡ ಚಿತ್ರರಂಗದ ಗಮನ ಇದೆ.
———
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ ‘ಮೈಖೇಲ್’ ವೆಬ್ಸೈಟ್ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ ‘ಮೈಖೇಲ್’ ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ ‘ಮೈಖೇಲ್’ ವೆಬ್ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, ‘ಮೈಖೇಲ್’ ವೆಬ್ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲೂ ಮೈಖೇಲ್ ಫಾಲೊ ಮಾಡಿ.
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಹಾಸನಕ್ಕೆ ಡಬಲ್ ಧಮಾಕ: ಮೆಗಾ ಡೇರಿಗೆ 150 ಕೋಟಿ ರೂ. ಬಂಪರ್ ಕೊಡುಗೆ, ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
-

ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
-

Horoscope February 6: ಫೆಬ್ರವರಿ 6 ದಿನ ಭವಿಷ್ಯ: ಯಾವ ರಾಶಿಯವರು ಏನು ಪಾಲನೆ ಮಾಡಬೇಕು ತಿಳಿಯಿರಿ
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
-

RCB: ಆರ್ಸಿಬಿ ಚಾಂಪಿಯನ್: Ee Sala Cup Namdu.. ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರು ಏನಂದ್ರು
-

Gold Price Drop Today: ಚಿನ್ನ – ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್: ಬರೋಬ್ಬರಿ 25,000 ರೂ ಇಳಿಕೆ
-

Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
-

Nelamangala National Highway 48: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಅಪಘಾತ: 40 ಜನ ಪಾರು
-

Karnataka Weather Updates: ಕರ್ನಾಟಕದಲ್ಲಿ ಚಳಿ ಅಲ್ಪ ಇಳಿಕೆ: 5 ದಿನಗಳ ಹವಾಮಾನ ವರದಿ
-

ಗಂಡಸಾದ್ರೆ, ಅವರಪ್ಪನಿಗೇ ಹುಟ್ಟಿದ್ರೆ ನನ್ನ ಮುಂದೆ ನಿಲ್ಲಲಿ: ಪ್ರೇಮ್, ಧ್ರುವ ಮೇಲೆ ರೊಚ್ಚಿಗೆದ್ದ ಕನಕಪುರ ಶ್ರೀನಿವಾಸ್
-

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ವೀಕೆಂಡ್ನಲ್ಲಿ ಕರೆಂಟ್ ಇರಲ್ಲ, 2 ದಿನ ಪವರ್ ಕಟ್
-

Gold: ವಿದೇಶದಿಂದ ಚಿನ್ನ ತರುವುದು ಇನ್ಮುಂದೆ ಇನ್ನಷ್ಟು ಸುಲಭ, ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್
-

T20 World Cup 2026: ಟಿ-20 ವಿಶ್ವಕಪ್ 2026 ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಶಾಕ್: ಸ್ಟಾರ್ ಆಟಗಾರ ಔಟ್
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/gilli-promotion-video-goes-viral-amid-film-chamber-complaint-over-sarkari-shaale-h8-movie-promotion-442849.html. xn--babytilbehr-pgb.com does not claim ownership of this content. All rights remain with the original publisher.
