ಗೃಹ ಸಚಿವರ ‘ಸಿದ್ದರಾಮಯ್ಯ ಇನ್ನೂ 2 ವರ್ಷ ಸಿಎಂ’ ಹೇಳಿಕೆ: ಡಿಕೆ ಸುರೇಶ್ ಹೇಳಿದ್ದೇನು? | DK Suresh on CM Change: I Haven’t Said I Don’t Want My Brother DK Shivakumar to be CM

Karnataka

oi-Shankrappa Parangi

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡಂದತಿದೆ. ಪದೇ ಪದೇ ಸಿಎಂ ಬದಲಾವಣೆ ಮುನ್ನೆಲೆಗೆ ಬರುತ್ತಿದೆ. ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಸಿಎಂ ಸಿದ್ದರಾಮಯ್ಯ ಅವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೇಳಿದ್ದರು. ಇದಕ್ಕೀಗ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಬಗ್ಗೆ ಸಚಿವ ಜಿ.ಪರಮೇಶ್ವರ ಅವರನ್ನೇ ಕೇಳಬೇಕು. ಗೃಹ ಸಚಿವರು ಅಧಿಕೃತವಾಗಿ ಹೇಳಿದ್ದಾರೆ. ಅವರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು ಮಾರ್ಮಿಕವಾಗಿ ಹೇಳಿದರು.

DK Suresh

ಅಣ್ಣ ಡಿಕೆ ಶಿವಕುಮಾರ್ ಅವರನ್ನು ಒಮ್ಮೆ ಸಿಎಂ ಮಾಡಬೇಕು ಎನ್ನುವ ತಮ್ಮ ಆಸೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಆನಂತರ ಮಾತನಾಡೋಣ. ನಾನೇನೂ ಆಸೆಯಿಲ್ಲ ಎಂದು ಹೇಳಿಲ್ಲವಲ್ಲ. ಇಂದೇ ಸಿಎಂ ಆಗುತ್ತಾರೆ ಎಂದು ಹೇಳಿದ್ದೇನೆಯೆ. ಆಸೆಯಿದೆ ಎಂದು ಹೇಳಿರುವೆ. ಅಣ್ಣ ಸಿಎಂ ಆಗುವ ಬಗ್ಗೆ ಆನಂತರ ಮಾತನಾಡೋಣ ಎಂದು ತಮ್ಮ ಮಾತಿಗೆ ಸಷ್ಟನೆ ನೀಡಿದರು.

ಉಪಚುನಾವಣೆ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು

ಏಪ್ರಿಲ್ 09ರಂದು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಭಾಗದ ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಸ್ಪಂದಿಸಿದೆ. ಹೀಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಬಾಗಲಕೋಟೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಲಿದೆ ಎಂಬುದೆಲ್ಲ ಊಹಾಪೋಹ. ನಾವು ಅತ್ಯಧಿಕ ಮತಗಳಿಂದ ಗೆಲ್ಲಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಉಪಚುನಾವಣೆ ಆದ ನಂತರ ಮಾತನಾಡೋಣ. ಸದ್ಯಕ್ಕೆ ನಮ್ಮನ್ನು ತಮಿಳುನಾಡು ಚುನಾವಣೆ ಜವಾಬ್ದಾರಿ ನೀಡಿದ್ದಾರೆ. ಅಲ್ಲಿಗೆ ಹೋಗಿ ಆ ಜವಾಬ್ದಾರಿ ನಿಭಾಯಿಸಲಿದ್ದೇವೆ. ತಮಿಳುನಾಡಿನ ಪೊಲೀಸರಿಗೆ ಮರಣದಂಡಣೆ ಬಗ್ಗೆ ಮಾತನಾಡಲು ಅವರು ನಿರಾಕರಿಸಿದರು.

ಸಂಸದ ಸ್ಥಾನ ಹೆಚ್ಚಳದಿಂದ ರಾಜ್ಯಗಳಿಗೆ ನಷ್ಟ

ಭಾರತದ ಸರ್ಕಾರ ದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543 ರಿಂದ 816ಕ್ಕೆ ಹೆಚ್ಚಿಸಲು ಮುಂದಾಗಿರುವುದು ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಲಾಭ, ನಷ್ಟದ ಲೆಕ್ಕಾಚಾರಗಳು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ಅವರು ‘ಲೋಕಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ನಷ್ಟವಾಗಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟನ್ನು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆಗಳು ಉತ್ತರದ ರಾಜ್ಯಗಳಿಗೆ ಹಂಚಿಕೆಯಾಗಲಿದೆ.

ಪ್ರಧಾನಮಂತ್ರಿಗಳು ಲೋಕಸಭಾ, ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಿಂದ ಕ್ಷೇತ್ರಗಳು ನಷ್ಟವಾಗುವುದಿಲ್ಲ ಎನ್ನುವ ಹೇಳಿಕೆ ಕೇಳಿದ್ದೇನೆ. ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ದಕ್ಷಿಣದ ರಾಜ್ಯಗಳು ಎಚ್ಚೆತ್ತುಕೊಳ್ಳಬೇಕು. ಒಂದಲ್ಲ ಒಂದು ದಿನ ಈ ಕೂಗು ಎದ್ದೇಳಲಿದೆ ಎಂದಿದ್ದೇ. ಇಲ್ಲದಿದ್ದರೇ ಜನರು ಪರ್ಯಾಯವಾಗ ಮಾರ್ಗಗಳನ್ನು ಆಲೋಚನೆ ಮಾಡುತ್ತಾರೆ ಎಂದು ಹೇಳಿದ್ದೆ. ಎಷ್ಟು ಸೀಟು ಹೋಗಲಿದೆ ಬರಲಿದೆ ಎನ್ನುವುದು ಮುಖ್ಯವಲ್ಲ.

ಏಪ್ರಿಲ್ 16 ರಿಂದ ವಿಶೇಷ ಲೋಕಸಭಾ ಅಧಿವೇಶನ ನಡೆಯಲಿದೆ. ಸರ್ಕಾರ ಯಾವ ರೀತಿಯಲ್ಲಿ ಕ್ಷೇತ್ರ ವಿಂಗಡಿಸುವ ಬಿಲ್‌ ಮಂಡಿಸಲಿದೆ ಎಂದು ನೋಡಬೇಕಿದೆ. ಒಟ್ಟಾರೆ ದಕ್ಷಿಣದ ಹಣವನ್ನು ಉತ್ತರದ ರಾಜ್ಯಗಳಿಗೆ ತಗೆದುಕೊಂಡು ಹೋಗುವಂತಹ ಹುನ್ನಾರ ಇದಾಗಿದೆ ಎಂದು ಅವರು ದೂರಿದರು.

2011ರ ಜನಗಣತಿಯ ಅನ್ವಯ ನಾವು ವಿಂಗಡಣೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದು ಇನ್ನು ಮಾರಕ. 2011 ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 60-70 ಲಕ್ಷ. ಈಗ 1.40 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದ ಜನಸಂಖ್ಯೆ 5 ಕೋಟಿಯಿತ್ತು. ಈಗ ಏಳು ಕೋಟಿಗೂ ಮೀರಿ ಜನಸಂಖ್ಯೆ ಬೆಳೆಯುತ್ತಿದೆ. ಇದರ ಜೊತೆಗೆ ಆರ್ಥಿಕ ಸವಾಲು ಸೇರಿದಂತೆ ಅನೇಕ ಸವಾಲುಗಳು ಎದುರಾಗುತ್ತವೆ. ಎಲ್ಲ ಪಕ್ಕಗಳು ಒಕ್ಕೋರಲಿನಿಂದ ಈ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದರು.

ಯುದ್ಧದಿಂದ ತೀವ್ರ ಸಮಸ್ಯೆ; ಮೌನ ವಹಿಸಿರುವ ‘ನಮೋ’

ಭಾರತದ ಮೇಲೆ ಯುದ್ಧದ ಪರಿಣಾಮ ಉಂಟಾಗಿದ್ದು, ಇಲ್ಲೂ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ತನ್ನ ಮೌನವನ್ನು ಮುರಿದಿಲ್ಲ. ಭಾರತದ ನಾಗರಿಕರಿಗೆ ಪ್ರಧಾನಿಯವರು ಬೇರೆ ಸಂದರ್ಭದಲ್ಲಿ ಸಂದೇಶ ನೀಡುತ್ತಾರೆ. ಆದರೆ ಇವತ್ತಿನ ತನಕ ಪ್ರಧಾನಿ ಸೇರಿದಂತೆ ಯಾವ ಕೇಂದ್ರ ಸಚಿವರು ಸಹ ದೇಶದ ಜನರು ಪರಿಸ್ಥಿತಿ ಹೇಗೆ ಎದುರಿಸಬೇಕು ಎಂಬ ಸ್ಪಷ್ಟತೆ ನೀಡಿಲ್ಲ. ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೇರ ಹೊಣೆಗಾರಿಕೆ ಪ್ರಧಾನಿಯವರೇ ಹೊರಬೇಕು. ಯಾವ ವಿಚಾರದಲ್ಲಿ ಸಮಸ್ಯೆಯಿದೆ. ಮುಂದಿನ ಆರು ತಿಂಗಳು ಹೇಗೆ ಇವುಗಳನ್ನು ಎದುರಿಸಬೇಕು. ಇದಕ್ಕೆ ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂದೇಶ ನೀಡಲಿ ಎಂದು ಆಗ್ರಹಿಸಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/dk-suresh-on-cm-change-i-havent-said-i-dont-want-my-brother-dk-shivakumar-to-be-cm-449671.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo