
Business
oi-Malathesha M
ಚಿನ್ನ ಇರಬೇಕು, ಮನೆಯಲ್ಲಿ ಕೆಜಿ & ಕೆಜಿ ಚಿನ್ನ ತುಂಬಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇನ್ನು ನಮ್ಮ ಭಾರತೀಯರಿಗೆ ಚಿನ್ನದ ಮೇಲೆ ಆಸೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಚಿನ್ನ ಭಾರತ ಮತ್ತು ಭಾರತೀಯರ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದೆ. ಈ ಮೂಲಕ ಚಿನ್ನ ಖರೀದಿ ಮಾಡುತ್ತಾ ಬಂಗಾರ & ಬೆಳ್ಳಿ ಸಂಗ್ರಹ ಮಾಡುವುದು ಕೂಡ ಭಾರತೀಯ ಸಂಸ್ಕೃತಿಯ ಒಂದು ಭಾಗವೇ ಆಗಿದೆ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ ಸಂಗ್ರಹ ಮಾಡುವುದು ಬಿಟ್ಟುಬಿಡಿ, ಮಿಲಿ ಗ್ರಾಂ ಲೆಕ್ಕದಲ್ಲೂ ಬಂಗಾರ ಖರೀದಿ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಆದರೆ ಇದೀಗ ಚಿನ್ನ ಭರ್ಜರಿ ಕುಸಿತ ಕಂಡಿದೆ…
ಯುಗಾದಿ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಂಡು ಬಂದಿದ್ದು, ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿದು ಬಿದ್ದಿದೆ. ಬಂಗಾರದ ಬೆಲೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಾ, ಇನ್ನೇನು ಬಡವರು ಹಾಗೂ ಮಧ್ಯಮ ವರ್ಗದ ಜನರು ಚಿನ್ನ ಖರೀದಿ ಮಾಡಲು ಆಗುತ್ತಾ? ಎಂಬ ಚರ್ಚೆ ನಡೆಯುವ ಸಮಯದಲ್ಲೇ ಬಂಗಾರದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಈಗ ಕಂಡು ಬಂದಿದೆ. ಹಾಗಾದರೆ, ಇದೀಗ ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ ಕಂಡಿದ್ದು ಹೇಗೆ? ಮುಂದೆ ಓದಿ.

ಚಿನ್ನ 55,000 ರೂಪಾಯಿ ದಿಢೀರ್ ಕುಸಿತ!
ಹೌದು, ಕನ್ನಡಿಗರ ಮನೆಯ ಹಬ್ಬ ಹಾಗೂ ಹಿಂದೂಗಳ ಪಾಲಿನ ಹೊಸವರ್ಷ ಎಂದು ಕರೆಸಿಕೊಳ್ಳುವ ಯುಗಾದಿ ಹಬ್ಬದ ದಿನವೇ ಭರ್ಜರಿ ಕುಸಿತ ಕಂಡಿದೆ ಚಿನ್ನ ಬೆಲೆ. ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 100 ಗ್ರಾಂಗೆ ಬರೋಬ್ಬರಿ 55,100 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಇದೀಗ ಪ್ರತಿ 100 ಗ್ರಾಂಗೆ 15,19,100 ರೂಪಾಯಿ ಆಗಿದ್ದು, ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,51,910 ರೂಪಾಯಿ ಆಗಿದೆ. ಹೀಗೆ, ಪ್ರತಿ 10 ಗ್ರಾಂಗೆ 5,510 ರೂಪಾಯಿ ಕುಸಿತ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಮತ್ತೊಂದು ಕಡೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಭರ್ಜರಿ 1,39,250 ರೂಪಾಯಿ ಇಳಿಕೆಯ ಕಂಡಿದೆ. ಯುಗಾದಿ ಹಬ್ಬದ ದಿನವೇ ಈ ರೀತಿ ಚಿನ್ನದ ಬೆಲೆ ಕುಸಿದಿರುವುದು ಆಭರಣ ಪ್ರಿಯರಿಗೂ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೂ ಸಖತ್ ಖುಷಿ ಕೊಟ್ಟಿದೆ.
13,00,000 ಕೋಟಿ ರೂಪಾಯಿ ನಷ್ಟ
ಭಾರತೀಯ ಷೇರುಪೇಟೆ ಪ್ರಮುಖ ಸೂಚ್ಯಂಕ, ನಿಫ್ಟಿ-50 ಬರೋಬ್ಬರಿ 775 ಅಂಕ ಎಂದರೆ ಶೇಕಡಾ 3.26 ರಷ್ಟು ಪ್ರಮಾಣದಲ್ಲಿ ಒಂದೇ ದಿನ ಕುಸಿದು ಬಿದ್ದಿದೆ. ಹಾಗೇ ಸೆನ್ಸೆಕ್ಸ್ ಕೂಡ ಭಾರಿ ದೊಡ್ಡದಾಗಿ ಕುಸಿದಿದ್ದು, 2,496 ಅಂಕ ಕುಸಿತ ಕಾಣುವ ಮೂಲಕ ಅದು ಕೂಡ ಶೇಕಡಾ 3.26 ರಷ್ಟು ಪ್ರಮಾಣದ ಮೌಲ್ಯ ಕಳೆದುಕೊಂಡಿದೆ. ಈ ಮೂಲಕ ಹೂಡಿಕೆದಾರರಿಗೆ ಭಾರಿ ದೊಡ್ಡ ನಷ್ಟವಾಗಿದೆ, ಇನ್ನೊಂದು ಕಡೆ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆಯಲು ಆತುರಪಡುತ್ತಿದ್ದಾರೆ. ಹೀಗೆ ಷೇರು ಮಾರುಕಟ್ಟೆ ದೊಡ್ಡದಾಗಿ ಕುಸಿಯುತ್ತಿದ್ದು, ಇಂದು ಒಂದೇ ದಿನ ಸುಮಾರು 13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್ ಆಗಿದೆ. ಹೀಗಾಗಿ ರೀಟೇಲ್ ವರ್ಗದ ಹೂಡಿಕೆದಾರರಿಗೆ ಈ ಬೆಳವಣಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಆರ್ಥಿಕ ಸಂಕಷ್ಟ ಕೂಡ ಎದುರಾಗುವ ಮುನ್ಸೂಚನೆ ಇದು ಎನ್ನುತ್ತಿದ್ದಾರೆ ತಜ್ಞರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-price-today-in-karnataka-and-discover-why-the-gold-price-has-been-decreased-this-much-suddenly-447665.html. xn--babytilbehr-pgb.com does not claim ownership of this content. All rights remain with the original publisher.
