
Sports
oi-Madhusudhan KR
Kuldeep Yadav: ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಉತ್ತರಾಖಂಡದ ಮಸ್ಸೂರಿಯ ಖಾಸಗಿ ರೆಸಾರ್ಟ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವಿವಾಹವಾದರು. ಈ ಜೋಡಿ ಮದು ಸಾಕಷ್ಟು ಗಮನ ಸೆಳೆದಿದ್ದರೂ, ವಂಶಿಕಾ ಚಡ್ಡಾ ಅವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳುವ ಕಾತರದಲ್ಲಿ ತುಂಬಾ ಜನರಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕುಲದೀಪ್ ಯಾದವ್ ಮತ್ತು ವಂಶಿಕಾ ಚಡ್ಡಾ ಇಬ್ಬರೂ ಕಾನ್ಪುರ ಮೂಲದವರು. ಇವರು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಲದೀಪ್ ಕಾನ್ಪುರದ ಲಾಲ್ ಬಂಗ್ಲಾ ಪ್ರದೇಶದವವಾಗಿದ್ದು, ವಂಶಿಕಾ ಅವರು ಶ್ಯಾಮ್ ನಗರದವರು.

ವಂಶಿಕಾ ಚಡ್ಡಾ ಯಾರು?
ವಂಶಿಕಾ ಚಡ್ಡಾ ಅವರು ಭಾರತದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಐಸಿ)ನಲ್ಲಿ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ಅಲ್ಲಿ ವ್ಯವಸ್ಥಾಪಕ ಅಥವಾ ಆಡಳಿತಾತ್ಮಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಉನ್ನತ ವ್ಯಾಸಂಗವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪೂರೈಸಿದ್ದಾರೆ.
ಸೆಲೆಬ್ರಿಟಿಗಳ ಸಂಗಾತಿಯಾಗಿದ್ದರೂ, ವಂಶಿಕಾ ಅವರು ಗ್ಲಾಮರ್ ಪ್ರಪಂಚದಿಂದ ಮತ್ತು ಕ್ಯಾಮೆರಾಗಳ ಕಣ್ಣುಗಳಿಂದ ಯಾವಾಗಲೂ ದೂರವೇ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರದ ಅವರು, ತಮ್ಮ ವೈಯಕ್ತಿಕ ಬದುಕನ್ನು ಗೋಪ್ಯವಾಗಿಡಲು ಬಯಸುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ, ಇದು ಅವರ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ.
ಕುಲ್‌ದೀಪ್‌ಗೆ ಬೆಂಬಲವಾಗಿ ನಿಂತ ವಂಶಿಕಾ
ಕುಲ್‌ದೀಪ್ ಯಾದವ್ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿನ ಅನೇಕ ಏರಿಳಿತಗಳ ಸಂದರ್ಭದಲ್ಲಿ, ವಂಶಿಕಾ ಅವರ ಪಾತ್ರ ದೊಡ್ಡದಿದೆ. ಕುಲ್‌ದೀಪ್ ಅವರ ಖ್ಯಾತಿಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳದೆ, ಒಬ್ಬ ಅಪ್ರತಿಮ ಬೆಂಬಲಿಗರಾಗಿ ಅವರು ಕುಲ್‌ದೀಪ್ ಜೊತೆಗೆ ನಿಂತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡದೆಯೇ, ಅತ್ಯಂತ ಪ್ರಬುದ್ಧತೆಯಿಂದ ತಮ್ಮ ವೈಯಕ್ತಿಕ ಬದುಕನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ವಂಶಿಕಾ ಅವರು ಕೇವಲ ಕುಲದೀಪ್ ಯಾದವ್ ಅವರೊಂದಿಗೆ ಅಷ್ಟೇ ಅಲ್ಲ, ಅವರ ಕುಟುಂಬದೊಂದಿಗೂ ಮೊದಲಿನಿಂದಲೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗೆ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಇದು ಪ್ರೀತಿಗೆ ತಿರುಗಿ ಇದೀಗ ಕೊನೆಗೂ ವಿವಾಹವಾಗಿದ್ದಾರೆ. ಈ ಮದುವೆ ಸಮಾರಂಭಕ್ಕೆ ಹಲವು ಕ್ರಿಕೆಟ್ ದಿಗ್ಗಜರು ಆಗಮಿಸಿ ಈ ಜೋಡಿಗೆ ಆಶೀರ್ವದಿಸಿದ್ದಾರೆ.
ಇನ್ನೂ ಈ ಜೋಡಿಯ ನಿಶ್ಚಿತಾರ್ಥವು ಜೂನ್ 2025ರಲ್ಲಿ ಲಕ್ನೋದಲ್ಲಿ ಖಾಸಗಿಯಾಗಿ ನಡೆದಿತ್ತು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಾರ್ಚ್ 17ರಂದು ಲಕ್ನೋದಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಮಾರಂಭವನ್ನು ಇಟ್ಟುಕೊಂಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಚೆಂಡನ್ನು ಅದ್ಭುತವಾಗಿ ತಿರುಗಿಸುವ ಕುಲದೀಪ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಹೊಸ ಇನಿಂಗ್ಸ್ ಯಶಸ್ವಿಯಾಗಲಿ ಎಂದು ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸುತ್ತಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಕುಲದೀಪ್ ಯಾದವ್ ಅದ್ಭುತ ಲಯದಲ್ಲಿದ್ದರು. ಇನ್ನೂ ಕುಲದೀಪ್ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲೂ ಅವರು ತಮ್ಮ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ. ಕುಲದೀಪ್ ಯಾದವ್ ಅವರು ಕಳೆದ 12-15 ತಿಂಗಳುಗಳಲ್ಲಿ ತಮ್ಮ ಫಿಟ್‌ನೆಸ್ ಮತ್ತು ತಂತ್ರಗಾರಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಕೊಂಡಿದ್ದಾರೆ. ವಿಶ್ವಾಸಾರ್ಹ ಸ್ಪಿನ್ನರ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿರುವ ಅವರು, ಮುಂಬರುವ ಸರಣಿಗಳಲ್ಲಿ ಭಾರತದ ಬೌಲಿಂಗ್ ವಿಭಾಗದ ಆಧಾರಸ್ತಂಭವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ,
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/who-is-vanshika-chaddha-meet-kuldeep-yadav-s-childhood-friend-and-wife-know-complete-details-447209.html. xn--babytilbehr-pgb.com does not claim ownership of this content. All rights remain with the original publisher.
