ಟೀಂ ಇಂಡಿಯಾ ಸೆಮಿಫೈನಲ್‌ ಹಾದಿ ಸುಗಮ ಮಾಡಿದ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಕ್ರಂ | T20 World Cup 2026: South Africa Crush West Indies by 9 Wickets; India’s Semi-Final Chances Improve

Sports

oi-Madhusudhan KR

T20 World Cup 2026: ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದಕ್ಕೆ ಪ್ರಮುಖ ಕಾರಣವೇ ಆರಂಭಿಕರಾಗಿ ಕಣ್ಣಕ್ಕಿಳಿದವರು ಉತ್ತಮ ಬ್ಯಾಟಿಂಗ್ ಮಾಡಿದ್ದು. ಮತ್ತೊಂದೆಡೆ, ಇದರಿಂದ ಟೀಂ ಇಂಡಿಯಾ ಸೆಮಿಫೈನಲ್‌ ಪ್ರವೇಶದ ಹಾದಿ ಸುಲಭ ಆದಂತಾಗಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 176 ರನ್‌ಗಳನ್ನು ಕೆಲೆಹಾಕಿತು. ಈ ಗುರಿ ಬೆನ್ನತ್ತುವಲ್ಲಿ ದಕ್ಷಿಣ ಆಫ್ರಿಕಾ ತಂಡ ಯಶಸ್ವಿಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ತಂಡದ ಗೆಲುವಿಗೆ ನಾಯಕ ಸಿಡಿಸಿದ 82 ರನ್‌ಗಳೇ ಪ್ರಮುಖ ಕಾರಣ.

T20 World Cup 2026 South Africa Crush West Indies by 9 Wickets India s Semi-Final Chances Improve

ಏಡೆನ್ ಮಕ್ರಂ ಸ್ಫೋಟಕ ಬ್ಯಾಟಿಂಗ್

ದಕ್ಷಿಣ ಆಫ್ರಿಕಾ ಪರ ಬ್ಯಾಟ್‌ ಬೀಸಿದ ಏಡೆನ್ ಮಕ್ರಂ 46 ಎಸೆತಗಳಲ್ಲಿ 7 ಬೌಂಡರಿ, 4 ಬೌಂಡರಿಗಳೊಂದಿಗೆ 82 ರನ್ ಸಿಡಿಸಿ ಅಜೇಯರಾಗಿ ಉಳಿದರು. ಉಳಿದಂತೆ ಕ್ವಿಂಟನ್‌ ಡಿ ಕಾಕ್ 47(24) ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ರಯಾನ್ ರಿಕೆಲ್ಟನ್ ಅಜೇಯ 45 ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕೂಡ ಸುಗಮವಾದಂತಾಯಿತು.

ವೆಸ್ಟ್‌ ಇಂಡೀಸ್‌ ಪರ ಯಾರು ಎಷ್ಟು ರನ್‌ ಬಾರಿಸಿದರು?

ವೆಸ್ಟ್‌ ಇಂಡೀಸ್‌ ಪರ ಬ್ಯಾಟ್ ಬೀಸಿದ, ಜೇಸನ್ ಹೋಲ್ಡರ್ 49(31), ಬ್ರಾಂಡನ್ ಕಿಂಗ್ 21(11), ಶೆರ್ಫೇನ್ ರುದರ್‌ಫೋರ್ಡ್ 12(10), ಮ್ಯಾಥ್ಯೂ ವಾಲ್ಟರ್ ಫೋರ್ಡ್ 11(9), ರೊಮಾರಿಯೋ ಶೆಫರ್ಡ್ ಅಜೇಯ 52(37) ರನ್‌ ಸಿಡಿಸುವ ಮೂಲಕ ತಂಡ ಮೊತ್ತವನ್ನು 170ರ ಗಡಿ ದಾಟಿಸಿದರು. ಆದರೂ, ಈ ಗುರಿಯನ್ನು ದಕ್ಷಿಣ ಆಫ್ರಿಕಾ ಮುಟ್ಟುವಲ್ಲಿ ಯಶಸ್ವಿಯಾಯಿತು.

3 ವಿಕೆಟ್‌ ಕಬಳಿಸಿದ ಲುಂಗಿ ಎನ್ಗಿಡಿ

ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ಮಾಡಿದ, ಲುಂಗಿ ಎನ್ಗಿಡಿ ನಾಲ್ಕು ಓವರ್ ಬೌಲಿಂಗ್ ಮಾಡಿ 30 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್‌ ಕಬಳಿಸಿದರು. ಉಳಿದಂತೆ ಕಗಿಸೋ ರಬಾಡ 2 ಹಾಗೂ ಕಾರ್ಬಿನ್ ಬಾಷ್ ತಲಾ ಒಂದು ವಿಕೆಟ್‌ ಪಡೆದು ವೆಸ್ಟ್‌ ಇಂಡೀಸ್‌ ತಂಡವನ್ನು 176 ರನ್‌ಗಳಿಗೆ ಕಟ್ಟಿಹಾಕಿದರು. ಹೀಗೆ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಜಯ ದಾಖಲಿಸಿತು.

ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ

ವೆಸ್ಟ್‌ ಇಂಡೀಸ್‌ ನೀಡಿದ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಾಮ್ ಅಝೇಯ 82 ಮತ್ತು ರಿಯಾನ್ ರಿಕೆಲ್ಟನ್ ಅಜೇಯ ಔಟಾಗದೆ 45 ಅಮೋಘ ಪ್ರದರ್ಶನ ನೀಡಿದರು. ಕ್ವಿಂಟನ್ ಡಿ ಕಾಕ್ ಕೇವಲ 24 ಎಸೆತಗಳಲ್ಲಿ 47 ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದರು.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ಪ್ರದರ್ಶನ ಹೀಗಿತ್ತು

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ 83 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ರೊಮಾರಿಯೋ ಶೆಫರ್ಡ್ ಅಜೇಯ 52 ಮತ್ತು ಜೇಸನ್ ಹೋಲ್ಡರ್ 49 ಹೀಗೆ ಎಂಟನೇ ವಿಕೆಟ್‌ಗೆ 89 ರನ್‌ಗಳ ದಾಖಲೆಯ ಜೊತೆಯಾಟವಾಡಿ ತಂಡದ ಮೊತ್ತವನ್ನು 176ಕ್ಕೆ ತಲುಪಿಸಿದರು. ಆದರೆ ಇಷ್ಟೊಂದು ರನ್‌ಗಳನ್ನು ಬಾರಿಸಿದರೂ ಸಹ ವೆಸ್ಟ್‌ ಇಂಡೀಸ್‌ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಗೂ ಮಂಡಿಯೂರಿತು.

ಭಾರತದ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮ

ಇನ್ನೂ ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಂತಕ್ಕೆ ಬಹುತೇಕ ಲಗ್ಗೆ ಇಟ್ಟಿದೆ. ಈ ಫಲಿತಾಂಶವು ಭಾರತ ತಂಡಕ್ಕೂ ಅನುಕೂಲಕರವಾಗಿದೆ. ಭಾರತ ತಂಡವು ಜಿಂಬಾಬ್ವೆ ವಿರುದ್ಧ ಗೆದ್ದರೆ, ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಲಿದೆ ಅಂಲೇ ಹೇಳಬಹುದು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-2026-south-africa-crush-west-indies-by-9-wickets-india-s-semi-final-chances-improve-445223.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo