
International
oi-Malathesha M
ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೊತ್ತಿಕೊಂಡ ಬೆಂಕಿ ಸೇನಾ ಕಾರ್ಯಾಚರಣೆ ರೂಪ ಪಡೆಯುತ್ತಿದ್ದು, ಈ ವಾರಾಂತ್ಯಕ್ಕೆ ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಸೇನೆ ಸಿದ್ಧವಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಈ ಬಗ್ಗೆ ಅಂತಿಮ ಆದೇಶ ನೀಡಿಲ್ಲ, ಹೀಗಾಗಿ ಅಮೆರಿಕ ಅಧ್ಯಕ್ಷರ ಆದೇಶಕ್ಕಾಗಿ ಅಮೆರಿಕದ ಶಕ್ತಿಶಾಲಿ ಸೇನೆಯು ಇದೀಗ ಕಾದು ಕುಳಿತಿದೆ. ಈ ಮೂಲಕ ಬೂದಿ ಮುಚ್ಚಿದ ಕೆಂಡವಾಗಿರುವ ಮಧ್ಯಪ್ರಾಚ್ಯ ಭಾಗದಲ್ಲಿ ದಿಢೀರ್ ಹೊಗೆ ಜೋರಾಗಿದೆ. ಸಿಎನ್ಎನ್ & ಸಿಎನ್ಬಿಸಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಅಮೆರಿಕದ ಈ ದಿಢೀರ್ ಸೇನಾ ಕಾರ್ಯಾಚರಣೆ ಬಗ್ಗೆ ವರದಿ ಮಾಡಿವೆ.
2003 ಸಮಯದಲ್ಲಿ ಅಮೆರಿಕ ದಿಢೀರ್ ಇರಾಕ್ ಮೇಲೆ ಸೇನಾ ದಾಳಿ ಮಾಡಿದ ನಂತರ ಈಗ ಮಧ್ಯಪ್ರಾಚ್ಯ ಭಾಗದ ದೊಡ್ಡ ದೇಶದ ಮೇಲೆ ಮತ್ತೆ ಸೇನಾ ಕಾರ್ಯಾಚರಣೆಗೆ ಸಜ್ಜಾಗಿದೆ. ಹೀಗಾಗಿ ಜಗತ್ತಿನ ದೊಡ್ಡಣ್ಣ ಅಮೆರಿಕ ಸೇನೆ ತನ್ನ ಬಳಿ ಇರುವ ದೊಡ್ಡ ದೊಡ್ಡ ವಿಮಾನಗಳನ್ನು ರವಾನಿಸಿದೆ. ಹೀಗೆ, ಸುಮಾರು 23 ವರ್ಷಗಳ ನಂತರ ಮತ್ತೊಂದು ಬೃಹತ್ ಸೇನಾ ಕಾರ್ಯಾಚರಣೆಗೆ ಅಮೆರಿಕ ಕೈಹಾಕಿದೆ. ಇದು ತೀವ್ರ ಚರ್ಚೆಯ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಬೃಹತ್ ಯುದ್ಧ ವಿಮಾನಗಳ ರವಾನೆ
ಈ ಬಗ್ಗೆ ಮಧ್ಯಪ್ರಾಚ್ಯ ಭಾಗದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಭೀತಿಯು ಹೆಚ್ಚಾಗಿದೆ. ಅಲ್ಲದೆ ಒಮಾನ್ ಸೇರಿದಂತೆ ಮಧ್ಯಪ್ರಾಚ್ಯ ಭಾಗದ ಶ್ರೀಮಂತ ದೇಶಗಳು ಗಂಭೀರ ಚಿಂತನೆ ನಡೆಸಿದ್ದು, ಯುದ್ಧ ನಡೆಯುವುದನ್ನು ತಪ್ಪಿಸೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿವೆ. ಆದರೂ ಅಮೆರಿಕ 2003ರ ನಂತರ ಇದೇ ಮೊದಲ ಬಾರಿಗೆ ತನ್ನಲ್ಲಿ ಇರುವ ಎಲ್ಲಾ ದೊಡ್ಡ ದೊಡ್ಡ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯ ಭಾಗಕ್ಕೆ ರವಾನಿಸಿದೆ.
ಇದು ಜಗತ್ತನ್ನೇ ಸುಡುವ ಬೆಂಕಿ?
ಅಮೆರಿಕ ಸೇನೆಯಲ್ಲಿ ಇರುವ ಎಲ್ಲಾ ಯುದ್ಧ ವಿಮಾನಗಳು ತುಂಬಾ ಶಕ್ತಿಶಾಲಿ ಅಂತಾ ಹೇಳಬಹುದು. ಎಫ್-22 ಎಸ್, ಎಫ್-35 ಎಸ್, ಎಫ್-16 ಎಸ್ ಯುದ್ಧ ವಿಮಾನಗಳು ದಿಢೀರ್ ಇರಾನ್ ಕಡೆಗೆ ಹಾರಿ ಬಂದಿವೆ. ಮತ್ತೊಂದು ಕಡೆ ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಇನ್ನಷ್ಟು ಭದ್ರ ಮಾಡಿದ್ದು, ಯಾವುದೇ ಸಮಯವೂ ಎದುರಾಗುವ ಸೂಕ್ಷ್ಮ ಪರಿಸ್ಥಿತಿ ಮಧ್ಯಪ್ರಾಚ್ಯದಲ್ಲಿ ನಿರ್ಮಾಣ ಆಗಿದೆ. ಹಾಗೇ ಇರಾನ್ ಜನ ಪಲಾಯನದ ಚಿಂತೆ ಮಾಡುತ್ತಿದ್ದಾರೆ. ಕೂಡಲೇ ಯುದ್ಧ ನಿಲ್ಲಿಸಲು ಕ್ರಮ ಕೈಗೊಳ್ಳದೇ ಇದ್ದರೆ ಇದು ಇಡೀ ಜಗತ್ತನ್ನೇ ಸುಡುವ ಬೆಂಕಿ ಆದರೂ ಅಚ್ಚರಿ ಇಲ್ಲ ಅಂತಿದ್ದಾರೆ ತಜ್ಞರು.
-

US And Iran: ಹೋರ್ಮುಜ್ ಜಲಸಂಧಿ ಟಾರ್ಗೆಟ್ ಮಾಡಿ ಮಿಸೈಲ್ ಹಾರಿಸಿದ ಇರಾನ್ ಸೇನೆ
-

ಇರಾನ್ ವಿರುದ್ಧ ಅಮೆರಿಕ ಸೇನೆಯ ಅಂತಿಮ ಹಂತದ ಸಿದ್ಧತೆ, ಆತಂಕದ ವಾತಾವರಣ ನಿರ್ಮಾಣ | US Military
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-military-may-take-a-very-big-decision-about-iran-by-this-weekend-and-here-is-present-situation-444311.html. xn--babytilbehr-pgb.com does not claim ownership of this content. All rights remain with the original publisher.
